Advertisement
“ನಾವುಗಳಿಲ್ಲಿ ಪರಸ್ಪರರು”: ಮಹಾಲಕ್ಷ್ಮೀ ಕೆ. ಎನ್. ಬರಹ

“ನಾವುಗಳಿಲ್ಲಿ ಪರಸ್ಪರರು”: ಮಹಾಲಕ್ಷ್ಮೀ ಕೆ. ಎನ್. ಬರಹ

ಇಳೆಗೆ ತಂಪು ಬೇಕು ವರುಣನಿಗೆ ಕಾಯ್ತಾಳೆ. ಅವನಿಗೆ ನೆಲೆಬೇಕು ಇವಳನ್ನೇ ಅರಸುತ್ತಾನೆ. “ಇವರಿಬ್ಬರದ್ದೂ ಇಲ್ಲಿ ಪರಸ್ಪರತೆ”. ಇದ್ದಕ್ಕಿದ್ದಂತೆ ಮೋಡ ಹೆಪ್ಪುಗಟ್ಟುತ್ತೆ, ಕಪ್ಪುಗಾಗುತ್ತೆ, ಕತ್ತಲಿನಂತಾಗುತ್ತೆ, ಎಲ್ಲವೂ ನಿಶ್ಶಬ್ಧವಾಗುತ್ತೆ, ಹಕ್ಕಿ ಹಿಂಡು ಗೂಡನ್ನರಸಿ ಚಿಲಿಪಿಲಿಗುಟ್ಟುತ್ತಾ ಬರುತ್ವೆ, ಜೋರುಗಾಳಿ ನಿಲ್ಲುತ್ತೆ, ಎಲ್ಲರೂ- ಎಲ್ಲವೂ ಬಾನಿಗೆ ಮುಖಮಾಡಿ ನೋಡುವಷ್ಟರಲ್ಲಿ ಧೋ…. ಅಂತ ಜಡಿ ಮಳೆ ಬಂದೇಬಿಡುತ್ತೆ. ಇಲ್ಲಿನ ಪ್ರತಿ ಪಲ್ಲವಕ್ಕೂ ಜಲವಾಧಾರ. ಕ್ಷಣಕ್ಷಣಕ್ಕೂ ಹೊಸ ಹೊಸ ಸೃಷ್ಟಿ ಹೊನಲಿನಂತೆ ಹರಿಯುತ್ತದೆ ಇಲ್ಲಿ.
ಮಹಾಲಕ್ಷ್ಮೀ ಕೆ. ಎನ್. ಬರಹ ನಿಮ್ಮ ಓದಿಗೆ

ಆದಿತ್ಯ ಬರ್ತಾನಂತ ಅವನಿ ಕಾಯ್ತಾಳೆ, ಯಾಕಂದ್ರೆ ಬೆಳಗಾಗ್ಬೇಕು ಇಲ್ಲಿ. ತನ್ನ ಸೃಷ್ಟಿಗೆಲ್ಲಾ ಉತ್ಸಾಹ ನೀಡ್ಬೇಕು. ಭೂಮಿ ತನ್ನಷ್ಟಕ್ಕೆ ತಾನು ಸೂರ್ಯನ ಸುತ್ತ ಸುತ್ತುತ್ತಾಳೆ, ಅವನು ಅವಳನ್ನ ಸೆಳೆಯುತ್ತಾನೆ. ನಿರ್ದಿಷ್ಟವಾದ ಅಂತರದಲ್ಲೇ ಇರ್ತಾರೆ ಇಬ್ಬರೂನೂ. ಭೂಮಿ ಸೂರ್ಯನ್ನ ಸಂಧಿಸೋದು ಇಲ್ಲ, ಪೂರ್ತಿ ದೂರವೂ ಹೋಗಲ್ಲ. ಇವಳ ಸಂತತಿಗೆ ಅವನ ಶಾಖ ಬೇಕು, ಅವನ ಅಸ್ತಿತ್ವಕ್ಕೆ ಇಂತಹ ಆಕಾಶಕಾಯಗಳು ಬೇಕು. “ಸೆಳೆಯುವುದು – ಸುತ್ತುವುದು ಇಲ್ಲಿ ಪರಸ್ಪರತೆ….. ”

ರಶ್ಮಿಗಾಗಿ ಪರ್ಣ ಕಾಯ್ತಾನೆ, ಯಾಕಂದ್ರೆ ದ್ಯುತಿ ಸಂಶ್ಲೇಷಣೆಯಾಗ್ಬೇಕು. ಬೆಳಕು ನಿರ್ಜೀವಿ ಆದರೂ ಚಲಿಸುತ್ತದೆ. ತನ್ನದೇ ವೇಗದಲ್ಲಿ ಚಲಿಸುತ್ತೆ. ಬೆಳಕು ಪ್ರತಿ ಜೀವಿಯ ಪ್ರತೀ ಕೋಶವನ್ನೂ ತಲುಪುತ್ತೆ. ಮಿಂಚುಹುಳು ದೇದೀಪ್ಯಮಾನವಾಗಿ ನಿಶೆಯಲ್ಲಿ ಮಿನುಗುತ್ತೆ. ಡೈನೋಫ್ಲಾಜಲೇಟ್‌ಗಳು ಹಗಲಿನಲ್ಲಿ ಪಚ್ಚೆ ಹಸಿರಾಗಿ ರಾತ್ರಿಯಲ್ಲಿ ನೀಲಿಯಾಗಿ ಸಮುದ್ರ ತೀರವನ್ನ ಹೊಳೆಯಿಸುತ್ತವೆ. ಗ್ಲೋವರ್ಮ್ ಹುಳುಗಳು, ವಿವಿಧ ಶೈವಲಗಳು, ಡಿಯೋಪಿಯಾ ಬಾಚಣಿಗೆ ಜೆಲ್ಲಿ, ಅನೇಕ ಫ್ಲಾಂಕ್ಟನ್ ಜಾತಿಯ ಜೀವಿಗಳು ಬೆಳಕನ್ನ ಪ್ರಕಾಶಿಸುತ್ವೆ. ಸ್ವಚ್ಛಂದವಾಗಿ ಸಂದುಗೊಂದಿನ, ಮೂಲೆಯ, ಸಮುದ್ರದ ತೀರದಿಂದ ಆಳದವರೆಗೂ ತನ್ನ ಆವಾಸದಲ್ಲಿ ನಲಿದು ಬೆಳೆವ ಜೀವಿಗಳಲ್ಲೂ ಬೆಳಕನ್ನ ಉತ್ಪಾದಿಸುವ ಕಿಣ್ವಗಳಿರುವುದು ನೋಡುವ ಕಣ್ಗಳಿಗೆ ವಿಸ್ಮಯ.

ಇಳೆಗೆ ತಂಪು ಬೇಕು ವರುಣನಿಗೆ ಕಾಯ್ತಾಳೆ. ಅವನಿಗೆ ನೆಲೆಬೇಕು ಇವಳನ್ನೇ ಅರಸುತ್ತಾನೆ. “ಇವರಿಬ್ಬರದ್ದೂ ಇಲ್ಲಿ ಪರಸ್ಪರತೆ”. ಇದ್ದಕ್ಕಿದ್ದಂತೆ ಮೋಡ ಹೆಪ್ಪುಗಟ್ಟುತ್ತೆ, ಕಪ್ಪುಗಾಗುತ್ತೆ, ಕತ್ತಲಿನಂತಾಗುತ್ತೆ, ಎಲ್ಲವೂ ನಿಶ್ಶಬ್ಧವಾಗುತ್ತೆ, ಹಕ್ಕಿ ಹಿಂಡು ಗೂಡನ್ನರಸಿ ಚಿಲಿಪಿಲಿಗುಟ್ಟುತ್ತಾ ಬರುತ್ವೆ, ಜೋರುಗಾಳಿ ನಿಲ್ಲುತ್ತೆ, ಎಲ್ಲರೂ- ಎಲ್ಲವೂ ಬಾನಿಗೆ ಮುಖಮಾಡಿ ನೋಡುವಷ್ಟರಲ್ಲಿ ಧೋ…. ಅಂತ ಜಡಿ ಮಳೆ ಬಂದೇಬಿಡುತ್ತೆ. ಇಲ್ಲಿನ ಪ್ರತಿ ಪಲ್ಲವಕ್ಕೂ ಜಲವಾಧಾರ. ಕ್ಷಣಕ್ಷಣಕ್ಕೂ ಹೊಸ ಹೊಸ ಸೃಷ್ಟಿ ಹೊನಲಿನಂತೆ ಹರಿಯುತ್ತದೆ ಇಲ್ಲಿ.

ಜೀವವೈವಿಧ್ಯತೆಯ ಒಡಲು ಭೂಮಿ. ಭಾವವೈವಿಧ್ಯತೆಯ ಒಡಲು ಭೂಮಿ.

ಜೀವಾನಿಲ ಆಮ್ಲಜನಕದ ಸೃಷ್ಟಿಯೂ ಇಲ್ಲೇ, ಅದರ ನೆಲೆಯೂ ಇಲ್ಲೇ. ಹಸಿರು ಗಿಡ-ಮರಗಳು ಉಸಿರನ್ನ ಕೊಡುತ್ವೆ. ಹೂವಿನ ಕಂಪು ಗೊತ್ತಾಗುವುದು ಗಾಳಿಯಿಂದ, ದಣಿದ ದೇಹಕ್ಕೆ ಹಿತ ಕೊಡುವುದೂ ತಂಗಾಳಿಯೇ… ನಾವುಗಳು ನಮ್ಮ ದುರಾಸೆಯ ಬಿಟ್ಟು ಪ್ರಕೃತಿಯ ಪರವಾದರೆ ಭೂಮಿ ಉಸಿರಾಡುತ್ತೆ. ಸಸ್ಯಸಂಕುಲ ಹಸಿರಾಗಿದ್ದರೆ ನಮಗೆ ಉಸಿರು. ಸಸ್ಯ ಸಾಮ್ರಾಜ್ಯಕ್ಕೂ- ಪ್ರಾಣಿ ಸಾಮ್ರಾಜ್ಯಕ್ಕೂ ಪರಸ್ಪರತೆ…..

ಪರಾಗಸ್ಪರ್ಶಕ್ಕೆ ಪುಷ್ಪ ಕಾಯುತ್ತೆ.
ಮಕರಂದ ಹೀರೋದಕ್ಕಂತ ದುಂಬಿ ಕಾಯುತ್ತೆ.
ಎಲ್ಲಿಯದೋ ದುಂಬಿ ಮತ್ತೆಲ್ಲಿಯದೋ ಪರಾಗ ಧೂಳನ್ನ ಮೂತಿಗೆ ಮೆತ್ಕೊಂಡು ಬಂದು ಮತ್ತದೇ ಜಾತಿಗೆ ಸೇರಿದ ಶಲಾಕಾಗ್ರಕ್ಕೆ ಉದುರಿಸುತ್ತೆ. ಘಮವಿರುವ ಹೂವು, ಒಗರು ತುಂಬಿದ ಹುಳಿ ತುಂಬಿದ ಕಾಯಾಗುತ್ತೆ. ಕಾಯಿ ಸಿಹಿ ತುಂಬಿದ ಹಣ್ಣಾಗುತ್ತೆ ಫಲವಾಗುತ್ತೆ. ಪುಷ್ಪದ ಹುಟ್ಟು ಸಾರ್ಥಕವಾಗುತ್ತೆ. ಚಲಿಸಲಾಗದ ಹೂವು; ದಣಿದಿರುವ ದುಂಬಿ. “ಒಂದಕ್ಕೆ ಮಕರಂದ ಬೇಕು; ಮತ್ತೊಂದಕ್ಕೆ ಪರಾಗಸ್ಪರ್ಶ ಬೇಕು- ಒಬ್ಬರಿಗೊಬ್ಬರು ಪರಸ್ಪರರು.” ಹೂವು-ದುಂಬಿಯ ಪರಸ್ಪರತೆಯ ಪರಿಯಿದು….

ಗ್ಲೋವರ್ಮ್ ಹುಳುಗಳು, ವಿವಿಧ ಶೈವಲಗಳು, ಡಿಯೋಪಿಯಾ ಬಾಚಣಿಗೆ ಜೆಲ್ಲಿ, ಅನೇಕ ಫ್ಲಾಂಕ್ಟನ್ ಜಾತಿಯ ಜೀವಿಗಳು ಬೆಳಕನ್ನ ಪ್ರಕಾಶಿಸುತ್ವೆ. ಸ್ವಚ್ಛಂದವಾಗಿ ಸಂದುಗೊಂದಿನ, ಮೂಲೆಯ, ಸಮುದ್ರದ ತೀರದಿಂದ ಆಳದವರೆಗೂ ತನ್ನ ಆವಾಸದಲ್ಲಿ ನಲಿದು ಬೆಳೆವ ಜೀವಿಗಳಲ್ಲೂ ಬೆಳಕನ್ನ ಉತ್ಪಾದಿಸುವ ಕಿಣ್ವಗಳಿರುವುದು ನೋಡುವ ಕಣ್ಗಳಿಗೆ ವಿಸ್ಮಯ.

ಮರ ಹೆಮ್ಮರವಾದದ್ದು ಹಕ್ಕಿಗಳು ತಿಂದು ಉದುರಿಸಿದ ಬೀಜದಿಂದ. ಪಕ್ಷಿಗಳು ಮರವನ್ನ ತಬ್ಬುತ್ವೆ, ಹೆಮ್ಮರ ತನ್ನೆಲ್ಲಾ ಅಷ್ಟೂ ರೆಂಬೆ-ಕೊಂಬೆಗಳಲ್ಲಿ ಹಕ್ಕಿಗಳ ಆವಾಸಕ್ಕೆ ಸೌಕರ್ಯ ನೀಡುತ್ತೆ. ಪ್ರಾರಂಭಿಕ ಬೀಜ ಬಿತ್ತಿದ್ದು ಪಕ್ಷಿ, ನೆರಳು-ಆಹಾರ ಕೊಟ್ಟಿದ್ದು ಮರ. ಮರಕ್ಕೆ ಹಕ್ಕಿ, ಹಕ್ಕಿಗೆ ಮರ ಪರಸ್ಪರರು.

ರಾಣಿಜೇನು ಮಕ್ಕಳನ್ನ ಕಾದರೆ, ಕೆಲಸಗಾರ ಜೇನುಗಳು ಮಕರಂದವನ್ನ ತರುತ್ತವೆ. ಲೈಕೆನ್ಸ್‌ಗಳ ಪರಸ್ಪರತೆ. ಸಾರಜನಕ ತುಂಬುವ ರೈಜೋಬಿಯಾ ಬ್ಯಾಕ್ಟೀರಿಯಾ ಮತ್ತು ದ್ವಿದಳ ಸಸ್ಯಗಳ ಪರಸ್ಪರತೆ. ಪ್ರಕೃತಿಯ ಎಲ್ಲದರಲ್ಲೂ ಪರಸ್ಪರತೆಯಿದೆ. ಹೋಮೋಸೆಫಿಯನ್ಸ್ ಬುದ್ಧಿವಂತ ಸ್ಪೀಷೀಸ್‌ಗಳಂತೆ. ಹೌದಾ……! ಹಾಗಾದರೆ, ನಮ್ಮಲ್ಲೂ ಪರಸ್ಪರತೆಯಿರಲಿ…

ದಾರಿಗರ ಭಾರವ ಹಗುರಾಗಿಸಿದರೆ, ಅವರ ದಣಿವಾರಿದ ನಗು ಹಿತ ತರುವುದು. ಚಿಂತೆ ದಾರದ ಸುಕ್ಕನು ಬಿಡಿಸಿದರೆ, ಅವರು ಕನಸಿನ ಕಸೂತಿಯ ಹಾಕಿ ತೋರಿಸುವರು. ನೀನೆಷ್ಟೇ ಆಳಕೆ ಬಿದ್ದರೂನೂ ನಾನು ನಿನ್ನನು ಕೈಹಿಡಿದೆತ್ತುವೆ, ನಾನೆಷ್ಟೇ ಮೂರ್ಖಳಾದರೂನೂ ನೀನು ನನ್ನನು ತಿದ್ದುವೆ. ನಕ್ಷತ್ರ ಪುಂಜ ಹೊಳೆಯುವ ಸೊಬಗಿನ ತತ್ವವ ನೀನು ಬೋಧಿಸು, ಜೀವ ವೈವಿಧ್ಯತೆಯ ರಾಶಿಯನು ಕ್ರಿಯೆಗಳನು ನಾನು ತೋರಿಸುವೆ. ಗಣಿತ ಕಷ್ಟ, ವ್ಯಾಕರಣ ಇಷ್ಟ. ಲೆಕ್ಕಕ್ಕೆ ನೀನಿರು, ಲಘು-ಗುರು ಪ್ರಸ್ತಾರ ನಾನ್ ಹಾಕ್ತೀನಿ, ಭಾಮಿನಿಯ ಸೊಬಗನ್ನ ನಾನು ಪರಿಚಯಿಸ್ತೀನಿ. ನಿನ್ನಲ್ಲಿನ ನಗು ನನಗೂ ಇರಲಿ, ನನ್ನ ಕಲ್ಪನೆಗಳ ನಿನಗಿಡುವೆ. ಯಂತ್ರಗಳೊಟ್ಟಿಗೆ ಸೈರಣೆಯಿಲ್ಲ, ಕಾವ್ಯ ಮಂತ್ರದ ಸ್ಮರಣೆಯಿದೆ. ಯಂತ್ರದ ತಂತ್ರ ನಿನಗಿರಲಿ, ಶೇಕ್ಸ್‌ಪಿಯರನ ಪ್ರೀತಿಯ ಸ್ಥಿರತೆಯ ಸುನೀತದ ಮಂತ್ರ ನನಗಿರಲಿ. ಯೀಟ್ಸನ ಪ್ರೀತಿಯನು ನೀನು ವ್ಯಾಖ್ಯಾನಿಸು, ವರ್ಡ್ಸ್ ವರ್ತ್‌ನ ಪ್ರಕೃತಿಯನು ನಾನು ತೋರಿಸುವೆನು. ನಾವುಗಳಿಲ್ಲಿ ಪರಸ್ಪರರು, ಪ್ರಕೃತಿ ತತ್ವವ ಪಾಲಿಸುವವರು.

ಭೂಮಿ ನಮಗೆಲ್ಲವನ್ನೂ ಕೊಟ್ಟಿಹಳು, ತಿರುಗಿ ನಾವ್ ಅವಳಿಗೆ ಮತ್ತೇನ್ ಕೊಡುವೆವು?…. ಅವಳು ನಮ್ಮಿಂದೇನನು ಕೇಳಳು. ತನ್ನ ಸೃಷ್ಟಿಯ ಕ್ಷೇಮವೆ ಅವಳ ಆನಂದವು. ನಮ್ ನಮ್ಮಲ್ಲಿ ಪರಸ್ಪರತೆಯಿರಲಿ, ನಮ್ಮನ್ನು ಪೊರೆವ ಭೂಮಿಗೆ ಸಂತಸವಾಗಲಿ……

About The Author

ಮಹಾಲಕ್ಷ್ಮೀ ಕೆ. ಎನ್.

ಮಹಾಲಕ್ಷ್ಮೀ. ಕೆ. ಎನ್.  ತೃತೀಯ ಬಿ. ಎಸ್ಸಿ. ವಿದ್ಯಾರ್ಥಿನಿ.

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ