Advertisement
ರಂಜಾನ್ ದರ್ಗಾ

ಕನ್ನಡದ ಹಿರಿಯ ಲೇಖಕರು ಮತ್ತು ಪತ್ರಕರ್ತರು. ಬಂಡಾಯ ಕಾವ್ಯದ ಮುಂಚೂಣಿಯಲ್ಲಿದ್ದವರು. ವಿಜಾಪುರ ಮೂಲದ ಇವರು ಧಾರವಾಡ ನಿವಾಸಿಗಳು. ಕಾವ್ಯ ಬಂತು ಬೀದಿಗೆ (ಕಾವ್ಯ -೧೯೭೮), ಹೊಕ್ಕಳಲ್ಲಿ ಹೂವಿದೆ (ಕಾವ್ಯ), ಸಾಹಿತ್ಯ ಮತ್ತು ಸಮಾಜ, ಅಮೃತ ಮತ್ತು ವಿಷ, ನೆಲ್ಸನ್ ಮಂಡೇಲಾ, ಮೂರ್ತ ಮತ್ತು ಅಮೂರ್ತ, ಸೌಹಾರ್ದ ಸೌರಭ, ಅಹಿಂದ ಏಕೆ? ಬಸವಣ್ಣನವರ ದೇವರು, ವಚನ ಬೆಳಕು, ಬಸವ ಧರ್ಮದ ವಿಶ್ವಸಂದೇಶ, ಬಸವಪ್ರಜ್ಞೆ, ನಡೆ ನುಡಿ ಸಿದ್ಧಾಂತ, ಲಿಂಗವ ಪೂಜಿಸಿ ಫಲವೇನಯ್ಯಾ, ಜಾತಿ ವ್ಯವಸ್ಥೆಗೆ ಸವಾಲಾದ ಶರಣರು, ಶರಣರ ಸಮಗ್ರ ಕ್ರಾಂತಿ, ಬಸವಣ್ಣ ಮತ್ತು ಅಂಬೇಡ್ಕರ್, ಬಸವಣ್ಣ ಏಕೆ ಬೇಕು?, ಲಿಂಗವಂತ ಧರ್ಮದಲ್ಲಿ ಏನುಂಟು ಏನಿಲ್ಲ?, ದಾಸೋಹ ಜ್ಞಾನಿ ನುಲಿಯ ಚಂದಯ್ಯ (ಸಂಶೋಧನೆ) ಮುಂತಾದವು ಅವರ ಪ್ರಕಟಿತ ಕೃತಿಗಳಾಗಿವೆ.  ಕರ್ನಾಟಕ ಸರ್ಕಾರದ ರಾಷ್ಟ್ರೀಯ ಬಸವ ಪುರಸ್ಕಾರ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಗೌರವ ಪ್ರಶಸ್ತಿ ಮುಂತಾದ ೫೨ ಪ್ರಶಸ್ತಿಗಳಿಗೆ ಭಾಜನರಾದ ರಂಜಾನ್ ದರ್ಗಾ ಅವರು ಬಂಡಾಯ ಸಾಹಿತ್ಯ ಪರಂಪರೆಯ ಶಕ್ತಿಶಾಲಿ ಕವಿಗಳಲ್ಲಿ ಒಬ್ಬರು. ಅಮೆರಿಕಾ, ನೆದರ್‌ಲ್ಯಾಂಡ್ಸ್, ಲೆಬನಾನ್, ಕೆನಡಾ, ಫ್ರಾನ್ಸ್, ಆಸ್ಟ್ರೇಲಿಯಾ ಸೇರಿದಂತೆ ಇನ್ನೂ ಹಲವು ದೇಶಗಳಲ್ಲಿ ಶರಣ ಸಂಸ್ಕೃತಿ, ಶಾಂತಿ ಮತ್ತು ಮಾನವ ಏಕತೆ ಕುರಿತು ಉಪನ್ಯಾಸ ನೀಡಿದ್ದಾರೆ.

ಬದುಕು ಒಂದು; ಭಾವ ನೂರು

ಇಷ್ಟೆಲ್ಲ ರೂಢಿಗತವಾಗಿರುವ ರೀತಿಯಲ್ಲಿ ಚಿತ್ರದ ಚಲನೆ ಇದ್ದರೂ ನಿರ್ದೇಶಕನ ಆಶಯಕ್ಕೆ ತಕ್ಕ ರೀತಿಯಲ್ಲಿ ನಮ್ಮನ್ನು ಆವರಿಸಿ ಒಳಗೊಳ್ಳುವಂತೆ ಸಾಧ್ಯವಾಗುವುದರಲ್ಲಿ ಚಿತ್ರಕಥೆಯಷ್ಟೇ ಪ್ರಮುಖ ಕೊಡುಗೆ, ದೃಶ್ಯಗಳಲ್ಲಿ `ಅಭಿನಯ’ ಎನ್ನಬಹುದಾದ ನೂರಕ್ಕೆ ನೂರರಷ್ಟು ಸಹಜತೆಯನ್ನು ಮೇಳವಿಸಿಕೊಂಡ ನಟರ ಆಂಗಿಕ ವರ್ತನೆ ಮತ್ತು ಭಾವ ಪ್ರಕಟಣೆಗಳದ್ದು. ಇದರಿಂದಾಗಿ ಅಗತ್ಯವಿರುವಲ್ಲಿ ಭಾವತೀವ್ರತೆ ವ್ಯಕ್ತವಾಗುತ್ತದೆಯೇ ಹೊರತು ಭಾವಾವೇಶವಲ್ಲ. ಎ.ಎನ್. ಪ್ರಸನ್ನ ಬರೆಯುವ ʻಲೋಕ ಸಿನಿಮಾ ಸರಣಿʼ

Read More

ಬದುಕೇ ಒಂದು ಓಟದ ಸ್ಪರ್ಧೆ…

ಚಿತ್ರಕ್ಕೆ ನಮ್ಮ ಪ್ರವೇಶ, ಗಡಿಯಾರವನ್ನು ತಲೆಯ ಮೇಲಿಟ್ಟುಕೊಂಡಿದ್ದ ಮರದ ಮುಖದ ಅಷ್ಟಾವಕ್ರ ಪ್ರಾಣಿ ಬಾಯಿ ತೆರೆದು ಉಂಟಾದ ಕತ್ತಲೆಯಲ್ಲಿ ಕ್ಯಾಮೆರಾ ಜೂ಼ಮ್-ಇನ್ ಮಾಡುವ ಮೂಲಕ. ಆಗ ಎದುರಾಗುತ್ತದೆ ಒಂದಕ್ಕೊಂದು ಸಂಬಂಧ ಮತ್ತು ಸಾತತ್ಯವಿರದ ಪ್ರಶ್ನೆ ಮತ್ತು ಉತ್ತರಗಳನ್ನು ಹುಡುಕಾಡುವುದೇ ಮನುಷ್ಯನ ಬದುಕು ಎನ್ನುವುದನ್ನು ಟಿ. ಎಸ್. ಎಲಿಯಟ್ ಮತ್ತು ಹೆರ್‌ಬರ್ಗರ್ ಅವರಿಂದ ಉದ್ಧರಿಸಿದ ಸಾಲುಗಳು ಮೂಡಿ, ಅಡ್ಡಾದಿಡ್ಡಿ ಓಡೋಡುತ್ತಲಿರುವ ಜನಜಂಗುಳಿ ಮರೆಯಾಗುತ್ತಿದ್ದಂತೆ ಒಂದು ಕ್ಷಣವನ್ನೂ ವ್ಯರ್ಥ ಮಾಡದೆ, ಟೆಲಿಫೋನ್ ಬೂತಿನಲ್ಲಿ ಮಾನಿ ಲೋಲಾಗೆ ಮಾತಾಡುವ ದೃಶ್ಯದಲ್ಲಿ ಘಟನೆಯ ಮೂಲಕ್ಕೆ ಪರಿಚಿತಗೊಳ್ಳುತ್ತೇವೆ.
ಎ.ಎನ್. ಪ್ರಸನ್ನ ಬರೆಯುವ ‘ಲೋಕ ಸಿನಿಮಾ ಟಾಕೀಸ್‌’ ಸರಣಿ

Read More

ʻದ ಮ್ಯಾಚ್‌ ಫ್ಯಾಕ್ಟರಿ ಗರ್ಲ್‌ʼ ನ ಕತೆ…

ಇಲ್ಲಿಯ ತನಕ ಅವನ ನಿರ್ದೇಶನದ ಹದಿನೆಂಟು ಚಿತ್ರಗಳಲ್ಲಿ ಸಮಾನವಾಗಿರುವ ಅಂಶವೆಂದರೆ ಆಯ್ದ ವಸ್ತುವಿಗೆ ತಕ್ಕ ಹಾಗೆ ಪಾತ್ರಗಳ ಬದುಕಿನ ವಿವರ ಮತ್ತು ಅದಕ್ಕೆ ಪೂರಕವಾಗುವ ವಾತಾವರಣಸೃಷ್ಟಿ. ಸ್ಥಳೀಯರ ಬದುಕಿನ ವಿವರಗಳನ್ನು ಅತ್ಯಂತ ಹತ್ತಿರವಾದ ರೀತಿಯಲ್ಲಿ ನಿರ್ಭಾವದಿಂದ ವಿಸ್ತೃತವಾಗಿ ನಿರೂಪಿಸುವ ವಿಧಾನ ಅವನದು.
ಎ.ಎನ್. ಪ್ರಸನ್ನ ಬರೆಯುವ ʻಲೋಕ ಸಿನಿಮಾ ಸರಣಿʼಯಲ್ಲಿ ಫಿನ್‌ಲ್ಯಾಂಡ್‌ನ ʻದ ಮ್ಯಾಚ್‌ ಫ್ಯಾಕ್ಟರಿ ಗರ್ಲ್‌ʼ ಸಿನೆಮಾದ ವಿಶ್ಲೇಷಣೆ

Read More

ಏಕಾಂಗಿಯ ಸ್ವಗತಗಳು…

ಪ್ರಕಾಶನ ಸಂಸ್ಥೆಯ ಸಹಾಯಕಿ ಅವನ ಬಗ್ಗೆ ಹಿತವಾದ ಭಾವನೆಯಿಂದ ಪ್ರತಿಕ್ರಿಯಿಸುತ್ತಾಳೆ. ಇಂಟವ್ಯೂ ಮುಗಿದ ಮೇಲೆ ಭೇಟಿಯಾಗಲು ಇಷ್ಟಪಡುತ್ತಾಳೆ. ಪ್ರಕಾಶನದ ಒಡೆಯನಿಗೆ ಮಾತು ಮುಂದುವರಿಸಲು ಇಷ್ಟವಿರುತ್ತದೆ. ಆದರೆ ಆಂಡರ್ಸ್‌ನ ಶಿಥಿಲವಾದ ಅಂತರಂಗ ಅವನನ್ನು ವಿಪರೀತವಾಗಿ ವರ್ತಿಸುವಂತೆ ಮಾಡುತ್ತದೆ. ಅವನಿಂದ ಸಿವಿಯನ್ನು ಕಸಿದುಕೊಂಡು ಹಠಾತ್ತನೆ ಹೊರಡುತ್ತಾನೆ.
ಎ.ಎನ್. ಪ್ರಸನ್ನ ಬರೆಯುವ ಸಿನಿಮಾದ ಸರಣಿ

Read More

ಮಹಾಮರ್ಕಟ ಮನಸ್ಸಿನ ಸುತ್ತ…

ಮಾರ್ಟಿನ್‌ ಸಾಮಾನ್ಯರಂತಿರಲು ಮತ್ತು ಕಿರು ಪ್ರಮಾಣದ ಸಾವಧಾನದಿಂದಿರಲು ಬೇಕಾದ ಆಂತರಿಕ ಜೀವರಸವೇ ಇಲ್ಲದವನ ಹಾಗೆ ಕಾಣುತ್ತಾನೆ.. ಯಾವ ಬಗೆಯಲ್ಲಿ ಯೋಚಿಸಿದರೂ ಅವನ ಬುದ್ಧಿ, ಮನಸ್ಸಿನ ಎಳೆಗಳಲ್ಲಿ ಹಿಂಸಿಸುವುದಲ್ಲದೆ ಬೇರೆ ಬಣ್ಣಗಳ ಛಾಯೆಯೇ ಇರುವಂತೆ ಕಾಣುವುದಿಲ್ಲ. ಅವನು ಇತರ ಸಾಮಾನ್ಯರೊಂದಿಗೆ ಹೋಲಿಸಿಕೊಳ್ಳುವ ಮಾತಂತೂ ಹತ್ತಿರ ಸುಳಿಯುವ ಹಾಗೆಯೇ ಇರುವುದಿಲ್ಲ. ಅವನು ಸದಾಕಾಲ ಉಳಿದವರಿಗಿಂತ ಭಿನ್ನವಾಗಿ ರಚಿಸಿಕೊಂಡ ಮತ್ತು ಅದನ್ನೇ ಸಹಜವೆಂದು ನಂಬಿರುವ ಮನೋನೆಲೆಯಲ್ಲಿರುವ ವ್ಯಕ್ತಿ.
ಎ.ಎನ್. ಪ್ರಸನ್ನ ಸರಣಿ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ