Advertisement
ರಂಜಾನ್ ದರ್ಗಾ

ಕನ್ನಡದ ಹಿರಿಯ ಲೇಖಕರು ಮತ್ತು ಪತ್ರಕರ್ತರು. ಬಂಡಾಯ ಕಾವ್ಯದ ಮುಂಚೂಣಿಯಲ್ಲಿದ್ದವರು. ವಿಜಾಪುರ ಮೂಲದ ಇವರು ಧಾರವಾಡ ನಿವಾಸಿಗಳು. ಕಾವ್ಯ ಬಂತು ಬೀದಿಗೆ (ಕಾವ್ಯ -೧೯೭೮), ಹೊಕ್ಕಳಲ್ಲಿ ಹೂವಿದೆ (ಕಾವ್ಯ), ಸಾಹಿತ್ಯ ಮತ್ತು ಸಮಾಜ, ಅಮೃತ ಮತ್ತು ವಿಷ, ನೆಲ್ಸನ್ ಮಂಡೇಲಾ, ಮೂರ್ತ ಮತ್ತು ಅಮೂರ್ತ, ಸೌಹಾರ್ದ ಸೌರಭ, ಅಹಿಂದ ಏಕೆ? ಬಸವಣ್ಣನವರ ದೇವರು, ವಚನ ಬೆಳಕು, ಬಸವ ಧರ್ಮದ ವಿಶ್ವಸಂದೇಶ, ಬಸವಪ್ರಜ್ಞೆ, ನಡೆ ನುಡಿ ಸಿದ್ಧಾಂತ, ಲಿಂಗವ ಪೂಜಿಸಿ ಫಲವೇನಯ್ಯಾ, ಜಾತಿ ವ್ಯವಸ್ಥೆಗೆ ಸವಾಲಾದ ಶರಣರು, ಶರಣರ ಸಮಗ್ರ ಕ್ರಾಂತಿ, ಬಸವಣ್ಣ ಮತ್ತು ಅಂಬೇಡ್ಕರ್, ಬಸವಣ್ಣ ಏಕೆ ಬೇಕು?, ಲಿಂಗವಂತ ಧರ್ಮದಲ್ಲಿ ಏನುಂಟು ಏನಿಲ್ಲ?, ದಾಸೋಹ ಜ್ಞಾನಿ ನುಲಿಯ ಚಂದಯ್ಯ (ಸಂಶೋಧನೆ) ಮುಂತಾದವು ಅವರ ಪ್ರಕಟಿತ ಕೃತಿಗಳಾಗಿವೆ.  ಕರ್ನಾಟಕ ಸರ್ಕಾರದ ರಾಷ್ಟ್ರೀಯ ಬಸವ ಪುರಸ್ಕಾರ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಗೌರವ ಪ್ರಶಸ್ತಿ ಮುಂತಾದ ೫೨ ಪ್ರಶಸ್ತಿಗಳಿಗೆ ಭಾಜನರಾದ ರಂಜಾನ್ ದರ್ಗಾ ಅವರು ಬಂಡಾಯ ಸಾಹಿತ್ಯ ಪರಂಪರೆಯ ಶಕ್ತಿಶಾಲಿ ಕವಿಗಳಲ್ಲಿ ಒಬ್ಬರು. ಅಮೆರಿಕಾ, ನೆದರ್‌ಲ್ಯಾಂಡ್ಸ್, ಲೆಬನಾನ್, ಕೆನಡಾ, ಫ್ರಾನ್ಸ್, ಆಸ್ಟ್ರೇಲಿಯಾ ಸೇರಿದಂತೆ ಇನ್ನೂ ಹಲವು ದೇಶಗಳಲ್ಲಿ ಶರಣ ಸಂಸ್ಕೃತಿ, ಶಾಂತಿ ಮತ್ತು ಮಾನವ ಏಕತೆ ಕುರಿತು ಉಪನ್ಯಾಸ ನೀಡಿದ್ದಾರೆ.

ಕನಕದಾಸರು ಕಟ್ಟಿದ ‘ಕಲ್ಯಾಣ’

ಗುಣ ಕರ್ಮಕ್ಕೆ ಅನುಸಾರಿಯಾಗಿ ವರ್ಣ ಸೃಷ್ಟಿಯಾಗಿದೆ ಅನ್ನುತ್ತದೆ ಭಗವದ್ಗೀತೆ. ಆದರೆ ಇಲ್ಲಿ ಗುಣ ಕರ್ಮ ಹುಟ್ಟುವ ಮೊದಲೇ ನಿಶ್ಚಯವಾಗಿರುತ್ತದೆ, ಎಂಬುದನ್ನು ಕಾಣಿಸಿಕೊಟ್ಟ ವಚನ ಚಳುವಳಿ ಇದಕ್ಕೊಂದು ಹೊಸ ಭಾಷ್ಯ ಬರೆಯಿತು. ‘ಕಾಸಿ ಕಮ್ಮಾರನಾದ, ಬೀಸಿ ಮಡಿವಾಳನಾದ’ ಎನ್ನುತ್ತ ಜಾತಿ ಸಾಂಸ್ಥಿಕತೆಗೆ ಪ್ರತಿಭಟನೆ ತೋರಿತು. ‘ಉಳ್ಳವರು ಶಿವಾಲಯ ಮಾಡುವರು’ ಎನ್ನುತ್ತ ಸಾಂಸ್ಕೃತಿಕ ರೂಪದ ಪ್ರತಿಭಟನೆಯನ್ನೂ ರೂಪಿಸಿತು. ‘ಕೊಲುವವನೆ ಮಾದಿಗ’ ಎನ್ನುತ್ತ ಪಂಪನಕಾಲದ ಕುಲದ ಮರು ವ್ಯಾಖ್ಯಾನವನ್ನು ಮುಂದುವರಿಸಿತು.
ಕನಕ ಜಯಂತಿಯಂದು ಡಾ. ಶ್ರೀಪಾದ ಭಟ್ ಬರಹ

Read More

ಕನಕ ಕನಸಿದ ‘ಕಲ್ಯಾಣ’: ಉದಾರಚರಿತದ ರೂಪಕ

ಕುರುಬ ಸಮುದಾಯದ’ಕನಕ’, ಕನಕದಾಸರಾಗಿದ್ದುದರ ಬಗ್ಗೆ ಅನೇಕ ಕಥನಗಳಿವೆ. ಆದರೆ ಈ ಹಾದಿಯಲ್ಲಿ ಕನಕರು ಕುಲದ ಕಾರಣಕ್ಕಾಗಿ ಎದುರಿಸಬೇಕಾಗಿ ಬಂದ ಸಂಕಟಗಳನ್ನು ನಾವು ಗಮನಿಸಬೇಕು. ಶ್ರೀನಿವಾಸ ಶೆಟ್ಟಿ, ಪುರಂದರ ದಾಸರಾಗಲು ಇರುವ ಅವಕಾಶ ಕನಕನಾಯಕ ಕನಕದಾಸರಾಗೋದಕ್ಕೆ ಇರಲಿಲ್ಲ. ಅವರು ತಮ್ಮ ಹುಟ್ಟಿನ ಸೂತಕದ ಕಾರಣಕ್ಕಾಗಿ ಮತ್ತೆ ಮತ್ತೆ ಸಾಮರ್ಥ್ಯವನ್ನು ಸಾಬೀತು ಪಡಿಸಿಕೊಳ್ಳಬೇಕಾಯ್ತು.

Read More

ರಂಗಭೂಮಿಯಲ್ಲಿ ಮರುಚಿಂತನೆ ಮತ್ತು ಗಾಂಧಿ ನಡಿಗೆ

ನಾಟಕ !  ಹಾಗೆಂದರೇನು? ಎಂದು ನಮಗೆ ನಾವು ಕೇಳಿಕೊಳ್ಳುವದರೊಂದಿಗೆ ಆರಂಭವಾಗುವ ಚಿಂತನೆ, ಅದರ ಸಂಘಟನೆ, ತಾಂತ್ರಿಕತೆ, ವ್ಯವಹಾರ, ಪ್ರೇಕ್ಷಕ ವರ್ಗದ ಅನಿಸಿಕೆ ಇತ್ಯಾದಿ ಹಲವು ಆಯಾಮಗಳಲ್ಲಿ ಇಂದು ಮುಂದುವರಿಯಬೇಕಿದೆ. ಸತ್ಯವನ್ನು ಸರಳಮಾರ್ಗದಲ್ಲಿ ಸಾಧಿಸಹೊರಟ ಗಾಂಧಿ ಚಿಂತನೆಯ ಮಾರ್ಗ ನಮ್ಮ ಮರುಚಿಂತನೆಗೆ ಅಗತ್ಯ ಹಾದಿಗಳನ್ನು ಕಾಣಿಸಬಲ್ಲವು ಎಂಬ ನಂಬಿಕೆ ನಮ್ಮದು.

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ