Advertisement
ರಂಜಾನ್ ದರ್ಗಾ

ಕನ್ನಡದ ಹಿರಿಯ ಲೇಖಕರು ಮತ್ತು ಪತ್ರಕರ್ತರು. ಬಂಡಾಯ ಕಾವ್ಯದ ಮುಂಚೂಣಿಯಲ್ಲಿದ್ದವರು. ವಿಜಾಪುರ ಮೂಲದ ಇವರು ಧಾರವಾಡ ನಿವಾಸಿಗಳು. ಕಾವ್ಯ ಬಂತು ಬೀದಿಗೆ (ಕಾವ್ಯ -೧೯೭೮), ಹೊಕ್ಕಳಲ್ಲಿ ಹೂವಿದೆ (ಕಾವ್ಯ), ಸಾಹಿತ್ಯ ಮತ್ತು ಸಮಾಜ, ಅಮೃತ ಮತ್ತು ವಿಷ, ನೆಲ್ಸನ್ ಮಂಡೇಲಾ, ಮೂರ್ತ ಮತ್ತು ಅಮೂರ್ತ, ಸೌಹಾರ್ದ ಸೌರಭ, ಅಹಿಂದ ಏಕೆ? ಬಸವಣ್ಣನವರ ದೇವರು, ವಚನ ಬೆಳಕು, ಬಸವ ಧರ್ಮದ ವಿಶ್ವಸಂದೇಶ, ಬಸವಪ್ರಜ್ಞೆ, ನಡೆ ನುಡಿ ಸಿದ್ಧಾಂತ, ಲಿಂಗವ ಪೂಜಿಸಿ ಫಲವೇನಯ್ಯಾ, ಜಾತಿ ವ್ಯವಸ್ಥೆಗೆ ಸವಾಲಾದ ಶರಣರು, ಶರಣರ ಸಮಗ್ರ ಕ್ರಾಂತಿ, ಬಸವಣ್ಣ ಮತ್ತು ಅಂಬೇಡ್ಕರ್, ಬಸವಣ್ಣ ಏಕೆ ಬೇಕು?, ಲಿಂಗವಂತ ಧರ್ಮದಲ್ಲಿ ಏನುಂಟು ಏನಿಲ್ಲ?, ದಾಸೋಹ ಜ್ಞಾನಿ ನುಲಿಯ ಚಂದಯ್ಯ (ಸಂಶೋಧನೆ) ಮುಂತಾದವು ಅವರ ಪ್ರಕಟಿತ ಕೃತಿಗಳಾಗಿವೆ.  ಕರ್ನಾಟಕ ಸರ್ಕಾರದ ರಾಷ್ಟ್ರೀಯ ಬಸವ ಪುರಸ್ಕಾರ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಗೌರವ ಪ್ರಶಸ್ತಿ ಮುಂತಾದ ೫೨ ಪ್ರಶಸ್ತಿಗಳಿಗೆ ಭಾಜನರಾದ ರಂಜಾನ್ ದರ್ಗಾ ಅವರು ಬಂಡಾಯ ಸಾಹಿತ್ಯ ಪರಂಪರೆಯ ಶಕ್ತಿಶಾಲಿ ಕವಿಗಳಲ್ಲಿ ಒಬ್ಬರು. ಅಮೆರಿಕಾ, ನೆದರ್‌ಲ್ಯಾಂಡ್ಸ್, ಲೆಬನಾನ್, ಕೆನಡಾ, ಫ್ರಾನ್ಸ್, ಆಸ್ಟ್ರೇಲಿಯಾ ಸೇರಿದಂತೆ ಇನ್ನೂ ಹಲವು ದೇಶಗಳಲ್ಲಿ ಶರಣ ಸಂಸ್ಕೃತಿ, ಶಾಂತಿ ಮತ್ತು ಮಾನವ ಏಕತೆ ಕುರಿತು ಉಪನ್ಯಾಸ ನೀಡಿದ್ದಾರೆ.

ಸಿಕ್ಕೀತೆ ಮುಂದಿನ ದಾರಿ …: ಗುರುಪ್ರಸಾದ ಕುರ್ತಕೋಟಿ ಸರಣಿ

ಅಮೆರಿಕೆಯಲ್ಲಿನ ಸಿರಿತನ ಬಡತನ ಎರಡೂ ನೋಡಿದೆ. ಅತಿಯಾಗಿ ಖರ್ಚು ಮಾಡುವವರನ್ನೂ ಕಂಡೆ, ಮಿತವಾಗಿ ಹಾಸಿಗೆ ಇದ್ದಷ್ಟು ಕಾಲು ಚಾಚುವವರನ್ನೂ ನೋಡಿದ್ದೆ. ನನ್ನ ಜೊತೆಗೆ ಕೆಲಸ ಮಾಡುತ್ತಿದ್ದ ಜಿಮ್ ಎಂಬ ಒಬ್ಬ ಸಹೋದ್ಯೋಗಿ ಹತ್ತು ಡಾಲರ್‌ಗೆ ತೊಳೆದು ಇಸ್ತ್ರಿ ಮಾಡಿ ಮಾರುತ್ತಿದ್ದ ಸಂಸ್ಥೆಯೊಂದರಿಂದ ಸೆಕಂಡ್ ಹ್ಯಾಂಡ್ ಟೀ ಶರ್ಟ್ ಕೊಂಡೆ ಅಂತ ಹೆಮ್ಮೆಯಿಂದ ಬೀಗಿದ್ದನ್ನು ನೋಡಿದ್ದೆ. ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿಯ ಕೊನೆಯ ಬರಹ

Read More

“ಡೀಲ್‌” ಬೆನ್ನಟ್ಟಿದ ಕುರಿಗಳು ಸಾರ್‌ ಕುರಿಗಳು: ಗುರುಪ್ರಸಾದ ಕುರ್ತಕೋಟಿ ಸರಣಿ

ಅಂತೂ ಅಂಗಡಿಯ ಬಾಗಿಲು ತೆರೆದುಕೊಂಡಿತು. ಸ್ವರ್ಗದ ಬಾಗಿಲೆ ತೆರೆಯಿತೋ ಏನೋ ಎಂಬಂತೆ ಜನರ ಕಣ್ಣುಗಳು ಅರಳಿದವು! ಸರ ಸರ ಅಂತ ಚಟುವಟಿಕೆಗಳು ಗರಿಗೆದರಿದವು. ಕುರಿ ದೊಡ್ಡಿ ಬಾಗಿಲು ತೆಗೆದಾಗ ಹೇಗೆ ಕುರಿಗಳು ನುಗ್ಗುತ್ತವೋ ಹಾಗೆಯೇ ಎಲ್ಲರೂ ಒಳ ನುಗ್ಗಿದರು. ನಾವೂ ಬ್ಯಾ ಅನ್ನುತ್ತ ನುಗ್ಗೆ ಬಿಟ್ಟೆವು. ಎಲ್ಲಿ ನೋಡಲಿ ಎಲ್ಲಿ ಬಿಡಲಿ ಎಂಬಂತಹ ಪರಿಸ್ಥಿತಿ. ಕೆಲವೇ ನಿಮಿಷಗಳಲ್ಲಿ ಹಲವಾರು ಜನರ ಕೈಯಲ್ಲಿ ಏನೇನೋ ವಸ್ತುಗಳು.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿಯ ಇಪ್ಪತ್ತೊಂಭತ್ತನೆಯ ಬರಹ

Read More

ಅಮೆರಿಕದಲ್ಲಿ ಭಾರತೀಯ ಮಕ್ಕಳು: ಗುರುಪ್ರಸಾದ ಕುರ್ತಕೋಟಿ ಸರಣಿ

ನನಗೆ ಆ ದೇಶದಲ್ಲಿ ಇರುವ ಇರಾದೆ ಇರಲಿಲ್ಲವಾದರೂ ಅಕಸ್ಮಾತ್ತಾಗಿ ಇರುವ ಪ್ರಸಂಗ ಬಂದುಬಿಟ್ಟರೆ ಎಂಬ ಭಯಕ್ಕೆ ಹಾಗೆ ಕೆಲ ವಿಷಯಗಳನ್ನು ಕೇಳಿ ಇಟ್ಟುಕೊಂಡಿದ್ದೆ! ಮುಂದೊಮ್ಮೆ ಅವರ ಮನೆಗೂ ನಮ್ಮನ್ನು ಊಟಕ್ಕೆ ಕರೆದಿದ್ದರು. ಆಗಲೂ ಕೂಡ ಅವರ ಮಗಳು ನಮ್ಮೆಲ್ಲರ ಜೊತೆಗೆ ಬೆರೆತು ಹರಟೆ ಹೊಡೆದಿದ್ದು ನಮಗೆ ತುಂಬಾ ಖುಷಿ ಕೊಟ್ಟಿತ್ತು. ನನ್ನ ಮಗಳೇನಾದರೂ ಅಮೆರಿಕೆಯಲ್ಲಿ ಬೆಳೆದರೆ ನಿಮ್ಮ ಮಗಳ ತರಹ ಬೆಳೆಯಬೇಕು ಎಂಬ ನನ್ನಆಸೆಯನ್ನು ಮುರಳಿ ಅವರ ಎದುರು ನಾನು ಹೇಳಿದ್ದೆ.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿ

Read More

ಬದುಕು ಮತ್ತು ಸುಂಟರಗಾಳಿ: ಗುರುಪ್ರಸಾದ ಕುರ್ತಕೋಟಿ ಸರಣಿ

ಅವತ್ತು ಅರುಣ್ ಯಾಕೋ ಯೋಚನೆಯಲ್ಲಿ ಇದ್ದಂತೆ ಕಂಡರು. ಯಾಕೆ ಏನಾಯ್ತು ಅಂತ ಕೇಳಬೇಕು ಅನಿಸಿದರೂ ಸುಮ್ಮನಿದ್ದೆ. ಅಲ್ಲಿಗೆ ಹೋಗಿ ಹಲವು ವರ್ಷಗಳು ಅಲ್ಲಿಯೇ ನೆಲೆಸಿದ ಮೇಲೆ ನಮ್ಮ ಎಷ್ಟೋ ದೇಸಿಗಳೂ ಕೂಡ ಅಮೆರಿಕದವರಂತೆಯೇ ಆಗಿಬಿಟ್ಟಿರುತ್ತಾರೆ. ಹಾಗೆಲ್ಲಾ ಯಾರಿಗೂ ವೈಯುಕ್ತಿಕ ವಿಷಯಗಳನ್ನು ಏನೂ ಕೇಳೋ ಹಾಗಿಲ್ಲ. ಆದರೆ ಅವರು ಹಾಗಿರಲಿಲ್ಲ. ತಾವೇ ತಮ್ಮ ಬೇಜಾರಿನ ಕಾರಣವನ್ನು ಅರುಹಿದರು. ಅವರಿಗೂ ತಮ್ಮ ದುಗುಡಗಳನ್ನು ಹಂಚಿಕೊಳ್ಳಲು ಯಾರಾದರೂ ಬೇಕಿತ್ತು ಅನಿಸಿತು.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿಯ ಇಪ್ಪತ್ತೇಳನೆಯ ಬರಹ

Read More

ಅಣ್ಣನಿಗೆ ಗೊತ್ತಿಲ್ಲದ ದೊಡ್ಡಣ್ಣ ಸಿಕ್ಕಿದರು!: ಗುರುಪ್ರಸಾದ ಕುರ್ತಕೋಟಿ ಸರಣಿ

ನಾನು ದೊಡ್ಡಣ್ಣ ಅವರನ್ನು ಗುರುತಿಸಿದ ಕೊಡಲೇ ಅವರಿಗೆ ನಾನು ಕನ್ನಡಿಗ ಅಂತ ಗೊತ್ತಾಗಿ ಹೋಯ್ತು.. ಅವರು ನನ್ನ ಕೈ ಹಿಡಿದುಕೊಂಡು ನೀವು ಕನ್ನಡದವರ? ಬನ್ನಿ ಬನ್ನಿ ಅಂತ ಅಲ್ಲಿಯೇ ಹತ್ತಿರದಲ್ಲಿದ್ದ ಬೆಂಚ್ ಮೇಲೆ ಕೂತು ನನ್ನನ್ನೂ ಜೊತೆಯಲ್ಲಿ ಕೂಡಿಸಿಕೊಂಡರು. ಇದೆಲ್ಲವನ್ನೂ ನೋಡುತ್ತಿದ್ದ ನನ್ನ ಅಣ್ಣ ಇದ್ಯಾವುದರ ಪರಿವೆಯೇ ಇಲ್ಲದಂತೆ ನಿಂತಿದ್ದ.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿಯ ಇಪ್ಪತ್ತಾರನೆಯ ಬರಹ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ