ಹತ್ತು ಮಹಡಿಯ ಭರ್ಜರಿ ಪ್ಲಾನು….: ಎಚ್.ಗೋಪಾಲಕೃಷ್ಣ ಸರಣಿ
ಬೆಳಗಿಂದ ಸಂಜೆವರೆಗೂ ನನ್ನ ಸಂಗಡವೆ ಇತ್ತು ಅದು. ಮಧ್ಯಾಹ್ನ ನಿದ್ದೆ ಕೂಡ ಮಾಡದೇ ನನ್ನ ಜತೆಗೆ ಇದ್ದುಬಿಡ್ತು. ಮನೆಗೆ ಹೊರಡ್ತಾ ಮಗೂನ ಮುದ್ದಿಸಿದೆ. “ಮಗು ತುಂಬಾ ಮುದ್ದು, ನನ್ನನ್ನ ತುಂಬಾ ಹಚ್ಚಿಕೊಂಡಿದೆ “ಅಂದೆ. ಬೆಳಿಗ್ಗೆಯಿಂದ ನನ್ನ ಸಂಗಡವೇ ಇತ್ತು. ಪುಟ್ಟ ಕೂಸು, “ಅಂಕಲ್‌ನ ಒಬ್ಬರನ್ನೇ ಬಿಡಬೇಡ, ಸಿಕ್ಕಿದ್ದೆಲ್ಲಾ ಜೇಬಲ್ಲಿ ಹಾಕ್ಕೊಳತ್ತೆ ಅದು, ಅದರ ಹಿಂದೇನೆ ಇರು ಅಂತ ಅಜ್ಜಿ ಹೇಳಿತ್ತು…” ಅಂತ ಸತ್ಯ ಬಯಲು ಮಾಡಿತು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿ