ಕವಿ ಒಬ್ಬ ಎಂಜಿನಿಯರ್; ಕವಿತೆ ಒಂದು ಯಂತ್ರ: ಎಸ್. ಜಯಶ್ರೀನಿವಾಸ ರಾವ್ ಸರಣಿ
ಡಿ ಮೆಲೊ ನೆಟೊ ಅವರು ತಮ್ಮ ಕಾವ್ಯದಲ್ಲಿ ‘ವಸ್ತು’-ಗಳಿಗೆ ನೀಡುವ ವಿಶೇಷ ಸ್ಥಾನಮಾನವನ್ನು ಅವರ ಕಾವ್ಯದ ವಿಮರ್ಶಕರು ಗಮನಿಸಿದ್ದಾರೆ. ಡಿ ಮೆಲೊ ನೆಟೊ ಅವರ ಕಾವ್ಯದಲ್ಲಿ ಕಾಣುವ ಕಲ್ಲು, ಚಾಕು, ಗಾಳಿ, ನೀರು – ಇಂತಹ ‘ವಸ್ತು’-ಗಳು ಮತ್ತೆ ಮತ್ತೆ ಎಡೆಬಿಡದೆ ಬರುವ ಪ್ರತಿಮೆಗಳಾಗುತ್ತವೆ; ಜೊತೆಗೆ ಪ್ರಪಂಚದಾದ್ಯಂತದ ವಿಷಯಗಳು ಸಹ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಬ್ರೆಜಿಲ್ (Brazil) ದೇಶದ ಪೋರ್ಚುಗೀಸ್ (Portuguese) ಭಾಷಾ ಕವಿ ಜುವಾವ್ ಕೆಬ್ರಾಲ್ ಡಿ ಮೆಲೊ ನೇಟೊ-ರವರ (Joao Cabral De Melo Neto, 1920-1999) ಕಾವ್ಯದ ಕುರಿತ ಬರಹ