Advertisement
ರಂಜಾನ್ ದರ್ಗಾ

ಕನ್ನಡದ ಹಿರಿಯ ಲೇಖಕರು ಮತ್ತು ಪತ್ರಕರ್ತರು. ಬಂಡಾಯ ಕಾವ್ಯದ ಮುಂಚೂಣಿಯಲ್ಲಿದ್ದವರು. ವಿಜಾಪುರ ಮೂಲದ ಇವರು ಧಾರವಾಡ ನಿವಾಸಿಗಳು. ಕಾವ್ಯ ಬಂತು ಬೀದಿಗೆ (ಕಾವ್ಯ -೧೯೭೮), ಹೊಕ್ಕಳಲ್ಲಿ ಹೂವಿದೆ (ಕಾವ್ಯ), ಸಾಹಿತ್ಯ ಮತ್ತು ಸಮಾಜ, ಅಮೃತ ಮತ್ತು ವಿಷ, ನೆಲ್ಸನ್ ಮಂಡೇಲಾ, ಮೂರ್ತ ಮತ್ತು ಅಮೂರ್ತ, ಸೌಹಾರ್ದ ಸೌರಭ, ಅಹಿಂದ ಏಕೆ? ಬಸವಣ್ಣನವರ ದೇವರು, ವಚನ ಬೆಳಕು, ಬಸವ ಧರ್ಮದ ವಿಶ್ವಸಂದೇಶ, ಬಸವಪ್ರಜ್ಞೆ, ನಡೆ ನುಡಿ ಸಿದ್ಧಾಂತ, ಲಿಂಗವ ಪೂಜಿಸಿ ಫಲವೇನಯ್ಯಾ, ಜಾತಿ ವ್ಯವಸ್ಥೆಗೆ ಸವಾಲಾದ ಶರಣರು, ಶರಣರ ಸಮಗ್ರ ಕ್ರಾಂತಿ, ಬಸವಣ್ಣ ಮತ್ತು ಅಂಬೇಡ್ಕರ್, ಬಸವಣ್ಣ ಏಕೆ ಬೇಕು?, ಲಿಂಗವಂತ ಧರ್ಮದಲ್ಲಿ ಏನುಂಟು ಏನಿಲ್ಲ?, ದಾಸೋಹ ಜ್ಞಾನಿ ನುಲಿಯ ಚಂದಯ್ಯ (ಸಂಶೋಧನೆ) ಮುಂತಾದವು ಅವರ ಪ್ರಕಟಿತ ಕೃತಿಗಳಾಗಿವೆ.  ಕರ್ನಾಟಕ ಸರ್ಕಾರದ ರಾಷ್ಟ್ರೀಯ ಬಸವ ಪುರಸ್ಕಾರ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಗೌರವ ಪ್ರಶಸ್ತಿ ಮುಂತಾದ ೫೨ ಪ್ರಶಸ್ತಿಗಳಿಗೆ ಭಾಜನರಾದ ರಂಜಾನ್ ದರ್ಗಾ ಅವರು ಬಂಡಾಯ ಸಾಹಿತ್ಯ ಪರಂಪರೆಯ ಶಕ್ತಿಶಾಲಿ ಕವಿಗಳಲ್ಲಿ ಒಬ್ಬರು. ಅಮೆರಿಕಾ, ನೆದರ್‌ಲ್ಯಾಂಡ್ಸ್, ಲೆಬನಾನ್, ಕೆನಡಾ, ಫ್ರಾನ್ಸ್, ಆಸ್ಟ್ರೇಲಿಯಾ ಸೇರಿದಂತೆ ಇನ್ನೂ ಹಲವು ದೇಶಗಳಲ್ಲಿ ಶರಣ ಸಂಸ್ಕೃತಿ, ಶಾಂತಿ ಮತ್ತು ಮಾನವ ಏಕತೆ ಕುರಿತು ಉಪನ್ಯಾಸ ನೀಡಿದ್ದಾರೆ.

ಯಕ್ಷಗಾನ ಪಠ್ಯ: ಪ್ರಮಾದಗಳ ಹೊಣೆ ಯಾರದ್ದು?

 ಉತ್ತರ ಕನ್ನಡದ ಕರ್ಕಿ ಯಕ್ಷಗಾನ ಮಂಡಳಿ  ಮರಾಠಿ ರಂಗಭೂಮಿಯ ಉದಯಕ್ಕೆ ಪ್ರೇರಣೆಯಾಗಿದೆ ಎಂದು ಮರಾಠಿ ರಂಗಭೂಮಿಯ  ಇತಿಹಾಸಕಾರರೇ  ಒಪ್ಪಿಕೊಂಡಿರುವಾಗ  ಕನ್ನಡದ ಹೆಮ್ಮೆಯ  ಕಲೆಯಾದ ಯಕ್ಷಗಾನದ ಇತಿಹಾಸದಲ್ಲಿ ಇದರ ಉಲ್ಲೇಖವಿಲ್ಲದಿರುವುದು ಬಲು ದೊಡ್ಡ ದೋಷ. ಪದ್ಮಶ್ರೀಯಂತಹ  ರಾಷ್ಟ್ರ ಮಟ್ಟದ ಉನ್ನತ  ಪ್ರಶಸ್ತಿಯ ಉಲ್ಲೇಖವೇ ಇಲ್ಲದಿರುವುದು ಮತ್ತೊಂದು ಕೊರತೆ.  ವೇಷ ಕ್ರಮದ ಕುರಿತು  ಪಠ್ಯದಲ್ಲಿ  ಮಾಹಿತಿಯನ್ನು  ನೀಡುವಾಗ ವಿವಿಧ ದೃಷ್ಟಿಕೋನದಿಂದ ಮಾಹಿತಿ ಸಂಗ್ರಹಿಸಿ ಉಲ್ಲೇಖಿಸದಿದ್ದರೆ ತಪ್ಪಾಗುತ್ತದೆ. ಯಕ್ಷಗಾನ ಪಠ್ಯಪುಸ್ತಕದಲ್ಲಿರುವ ಲೋಪಗಳ ಕುರಿತು ಬರೆದಿದ್ದಾರೆ ಕಡತೋಕಾ ಗೋಪಾಲಕೃಷ್ಣ ಭಾಗವತ. 

Read More

ಯಕ್ಷಗಾನದ ಛಂದಃಪರಂಪರೆ ಸಾಯದಿರಲಿ…: ಕಡತೋಕಾ ಗೋಪಾಲಕೃಷ್ಣ ಬರೆದ ಲೇಖನ

“ಇಂದಿನ ತಲೆಮಾರಿನ ಪ್ರಸಂಗಕರ್ತರು ಮಾಡಬೇಕಾದದ್ದೇನು? ಯಕ್ಷಗಾನ ಪ್ರಸಂಗಕರ್ತನಾಗಲು ಬಯಸುವ ಪ್ರತಿಯೊಬ್ಬನೂ ಶೆಟ್ಟರು ಕೊಟ್ಟ ಲಕ್ಷಣಗಳಿಗೆ ಅನುಗುಣವಾಗಿ ಪದ್ಯವನ್ನು ರಚಿಸುವುದರ ಮೂಲಕ ಪ್ರಸಂಗ ಸಾಹಿತ್ಯ ವಿಭಾಗಕ್ಕೆ ಅಗತ್ಯವಾದ ಶಿಸ್ತನ್ನು ಒದಗಿಸಬೇಕಾಗಿದೆ. ಯಕ್ಷಗಾನ ತರಬೇತಿ ಕೇಂದ್ರಗಳು ಛಂದಸ್ಸಿನ ಪ್ರಾಥಮಿಕ ಜ್ಞಾನವನ್ನಾದರೂ…”

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ