ಒಂದೊಂದ್ಲೆ ಒಂದು…!: ಕ್ಷಮಾ ವಿ ಭಾನುಪ್ರಕಾಶ್ ಬರಹ
ವೈಜ್ಞಾನಿಕ ತಳಹದಿಯೇ ಇಲ್ದೇ, ಯಾವುದೋ ಬಂಜರು ಭೂಮಿಯಲ್ಲಿ ಸುಲಭವಾಗಿ ಸಿಕ್ಕ ಯಾವುದೋ ಪ್ರಭೇದದ ಸಸಿಗಳನ್ನ ನೆಟ್ಟು, ಪರಿಸರ ದಿನ ಆಚರಿಸೋದು ಅತ್ಯಂತ ಅರ್ಥಹೀನ; ಮರಗಳನ್ನು ನೆಟ್ಟು ಎಲ್ಲೆಂದರಲ್ಲಿ ಕಾಡು ಮಾಡಿಬಿಡ್ತೀವಿ ಅಂದ್ರೆ ಹೇಗೆ? ಅಲ್ಲಿ ಯಾವ ಜೀವರಾಶಿಯಿತ್ತು? ಅಲ್ಲಿನ ಆಹಾರ ಸರಪಳಿಯ ಕಥೆಯೇನು? ಅಲ್ಲಿನ ಅಜೈವಿಕ ಹಾಗೂ ಜೈವಿಕ ಅಂಶಗಳ ನಡುವಿನ ಸಮತೋಲನದ ಕಥೆಯೇನು?
ಈ ಹೊಸ ವರ್ಷದಿಂದ ಸ್ವಲ್ಪವಾದರೂ ನಾವು ನಿಂತಿರುವ ಈ ಭೂಮಿಯ ಕುರಿತು ಯಾವೆಲ್ಲ ರೀತಿಯಲ್ಲಿ ಕಾಳಜಿ ವಹಿಸಬಹುದು ಎನ್ನುವುದರ ಕುರಿತು ಕ್ಷಮಾ ವಿ. ಭಾನುಪ್ರಕಾಶ್ ಬರಹ