Advertisement
ರಂಜಾನ್ ದರ್ಗಾ

ಕನ್ನಡದ ಹಿರಿಯ ಲೇಖಕರು ಮತ್ತು ಪತ್ರಕರ್ತರು. ಬಂಡಾಯ ಕಾವ್ಯದ ಮುಂಚೂಣಿಯಲ್ಲಿದ್ದವರು. ವಿಜಾಪುರ ಮೂಲದ ಇವರು ಧಾರವಾಡ ನಿವಾಸಿಗಳು. ಕಾವ್ಯ ಬಂತು ಬೀದಿಗೆ (ಕಾವ್ಯ -೧೯೭೮), ಹೊಕ್ಕಳಲ್ಲಿ ಹೂವಿದೆ (ಕಾವ್ಯ), ಸಾಹಿತ್ಯ ಮತ್ತು ಸಮಾಜ, ಅಮೃತ ಮತ್ತು ವಿಷ, ನೆಲ್ಸನ್ ಮಂಡೇಲಾ, ಮೂರ್ತ ಮತ್ತು ಅಮೂರ್ತ, ಸೌಹಾರ್ದ ಸೌರಭ, ಅಹಿಂದ ಏಕೆ? ಬಸವಣ್ಣನವರ ದೇವರು, ವಚನ ಬೆಳಕು, ಬಸವ ಧರ್ಮದ ವಿಶ್ವಸಂದೇಶ, ಬಸವಪ್ರಜ್ಞೆ, ನಡೆ ನುಡಿ ಸಿದ್ಧಾಂತ, ಲಿಂಗವ ಪೂಜಿಸಿ ಫಲವೇನಯ್ಯಾ, ಜಾತಿ ವ್ಯವಸ್ಥೆಗೆ ಸವಾಲಾದ ಶರಣರು, ಶರಣರ ಸಮಗ್ರ ಕ್ರಾಂತಿ, ಬಸವಣ್ಣ ಮತ್ತು ಅಂಬೇಡ್ಕರ್, ಬಸವಣ್ಣ ಏಕೆ ಬೇಕು?, ಲಿಂಗವಂತ ಧರ್ಮದಲ್ಲಿ ಏನುಂಟು ಏನಿಲ್ಲ?, ದಾಸೋಹ ಜ್ಞಾನಿ ನುಲಿಯ ಚಂದಯ್ಯ (ಸಂಶೋಧನೆ) ಮುಂತಾದವು ಅವರ ಪ್ರಕಟಿತ ಕೃತಿಗಳಾಗಿವೆ.  ಕರ್ನಾಟಕ ಸರ್ಕಾರದ ರಾಷ್ಟ್ರೀಯ ಬಸವ ಪುರಸ್ಕಾರ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಗೌರವ ಪ್ರಶಸ್ತಿ ಮುಂತಾದ ೫೨ ಪ್ರಶಸ್ತಿಗಳಿಗೆ ಭಾಜನರಾದ ರಂಜಾನ್ ದರ್ಗಾ ಅವರು ಬಂಡಾಯ ಸಾಹಿತ್ಯ ಪರಂಪರೆಯ ಶಕ್ತಿಶಾಲಿ ಕವಿಗಳಲ್ಲಿ ಒಬ್ಬರು. ಅಮೆರಿಕಾ, ನೆದರ್‌ಲ್ಯಾಂಡ್ಸ್, ಲೆಬನಾನ್, ಕೆನಡಾ, ಫ್ರಾನ್ಸ್, ಆಸ್ಟ್ರೇಲಿಯಾ ಸೇರಿದಂತೆ ಇನ್ನೂ ಹಲವು ದೇಶಗಳಲ್ಲಿ ಶರಣ ಸಂಸ್ಕೃತಿ, ಶಾಂತಿ ಮತ್ತು ಮಾನವ ಏಕತೆ ಕುರಿತು ಉಪನ್ಯಾಸ ನೀಡಿದ್ದಾರೆ.

ಲಕ್ಷ್ಮೀಶ ತೋಳ್ಪಾಡಿ ವಿರಚಿತ ಸಂಪಿಗೆ ಭಾಗವತ – ೩

ಕೃಷ್ಣ ಹೇಳಿದ: ನಮ್ಮ ಒಳಗಿನ ನಿಜ ನಮ್ಮನ್ನು ಹೇಗೆ ಸಹಿಸಿಕೊಂಡಿದೆ ಗೊತ್ತೇನು? ಆ ಒಳಗಿನ ನಿಜವನ್ನು ಬೇಕಾದರೆ ದೇವರೆನ್ನಿ. ಅದು ಈ ಲೋಕಕ್ಕೆ ನಮ್ಮನ್ನು ಒಪ್ಪಿಸಿ ತಾನು ಸದಾ ವಿದಾಯದ ಭಾವದಲ್ಲಿ ಇರುವಂತಿದೆ. ಸತ್ಯ ಅಡಗಿದೆ ಎನ್ನುತ್ತಾರಲ್ಲ- ತಿಳಿದಮಂದಿ. ಅಡಗಿದೆ ಎಂದರೆ ಸತ್ಯ ನಮ್ಮ ವಿರಹವನ್ನು ಅನುಭವಿಸುತ್ತಿದೆ. ನಮ್ಮನ್ನು ಅದಕ್ಕೆ ಒಪ್ಪಿಸದೆ ನಾವದನ್ನು ಪಡೆಯಲಾರೆವು. ಮತ್ತು ಒಪ್ಪಿಸುವುದೆಂದರೆ ನಮಗೆ ನಾವೇ ವಿದಾಯವನ್ನು ಕೋರಿದಂತೆ. ಅದಿರಲಿ; ನಿಮ್ಮ ವಿರಹ ನನ್ನನ್ನು ಎಂದೂ ಬಿಟ್ಟಗಲುವುದಿಲ್ಲ’

Read More

ಲಕ್ಷ್ಮೀಶ ತೋಳ್ಪಾಡಿ ವಿರಚಿತ ಸಂಪಿಗೆ ಭಾಗವತ – ೨

ಅಮೃತ ಕುಡಿದ ಸೊಕ್ಕಿನಿಂದ ದೇವತೆಗಳು ಗೆದ್ದರೇನೋ ನಿಜ. ಆಗ ದೈತ್ಯರ ದೊರೆಯಾಗಿದ್ದ ಬಲಿಚಕ್ರವರ್ತಿ ವಜ್ರಾಘಾತದಿಂದ ಸಾಯಬಿದ್ದ. ದೈತ್ಯಗುರುಗಳಾಗಿದ್ದ ಶುಕ್ರಾಚಾರ್ಯರು ತಮ್ಮ ಮಂತ್ರಬಲದಿಂದ ಬಲಿ ಚೇತರಿಸುವಂತೆ ಮಾಡಿದರು.

Read More

ಲಕ್ಷ್ಮೀಶ ತೋಳ್ಪಾಡಿ ವಿರಚಿತ ಸಂಪಿಗೆ ಭಾಗವತ ಮೊದಲ ಭಾಗ.

ವೇದ, ಉಪನಿಷತ್, ಮಹಾಕಾವ್ಯ,ಪರಿಸರ, ಸೌಂದರ್ಯ ಹಾಗೂ ಮಾನವ ಜೀವನದ ಕುರಿತು ಆಳವಾಗಿ, ಸ್ಪಷ್ಟವಾಗಿ ಮಾತನಾಡಬಲ್ಲ, ಬರೆಯಬಲ್ಲ ಲಕ್ಷ್ಮೀಶ ತೋಳ್ಪಾಡಿ ಕನ್ನಡದ ಈ ತಲೆಮಾರಿನ ಬಹಳ ಒಳ್ಳೆಯ ವಿದ್ವಾಂಸರಲ್ಲಿ ಒಬ್ಬರು. ತೋಳ್ಪಾಡಿಯವರು ಬರೆಯುವ ಭಾಗವತ ಕಥಾ ಸರಣಿ ಇನ್ನು ಮುಂದೆ ಪ್ರತೀ ಬುಧವಾರ ಕೆಂಡಸಂಪಿಗೆಯಲ್ಲಿ ಮೂಡಿಬರಲಿದೆ.ವರ್ತಮಾನದ ಕಥೆಗಳನ್ನೂ ಪುರಾಣಗಳ ಅಲೌಕಿಕ ಲೋಕವನ್ನೂ ಒಂದೇ ಕಡೆ ಹಿಡಿದಿಡುವ ಕೆಂಡಸಂಪಿಗೆಯ ಪ್ರಯತ್ನಗಳು ನಿಮಗೆಲ್ಲಾ ಇಷ್ಟವಾಗಬಹುದು ಎಂಬ ಆಶೆ ನಮ್ಮದು…

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ