ಪ್ರಾಣಪಕ್ಷಿಗಳು ಹಾರಿಹೋದವು: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ
ಕೊನೆಗೆ ರಾತ್ರಿ 12 ಗಂಟೆಗೆ ಯೂನಿಫಾರ್ಮ್ ಬಟ್ಟೆ ಕಾಣಿಸಿಕೊಂಡಿತು. ನಿಧಾನವಾಗಿ ಉಸಿರಿಡಿದುಕೊಂಡು ಬಾಬು ದೇವವನ್ನು ಕಲ್ಲುಮಣ್ಣಿನ ಕೆಳಗಿಂದ ಹೊರಕ್ಕೆ ತೆಗೆದು ನೋಡಿದರು! ಆತನ ದೇಹದ ಮೇಲಿನ ಯೂನಿಫಾರ್ಮ್ ಬಟ್ಟೆಗಳು ರಕ್ತದಿಂದ ಹೆಪ್ಪು ಕಟ್ಟಿಕೊಂಡಿದ್ದವು. ದೇಹ ನುಜ್ಜುಗುಜ್ಜಾಗಿ ಹೋಗಿತ್ತು. ದೊಡ್ಡ ಕಲ್ಲುಮಣ್ಣಿನ ರಾಶಿ ಅವನ ಮೇಲೆ ಕುಸಿದು ಬಿದ್ದು ಕೆಲವೇ ನಿಮಿಷಗಳಲ್ಲಿ ಅವನ ಪ್ರಾಣಪಕ್ಷಿ ಹಾರಿಹೋಗಿತ್ತು. ಅವನ ದೇಹವನ್ನು ನೋಡಿದ ಕಾರ್ಮಿಕರು ಸ್ವಲ್ಪ ಹೊತ್ತು ಏನೂ ಮಾತನಾಡದೆ ವಿದ್ಯುತ್ ಶಾಕ್ ಹೊಡೆದುಕೊಂಡಂತೆ ಹಾಗೇ ನಿಂತುಕೊಂಡೇ ಇದ್ದರು.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿ