Advertisement
ಸುಮಾ ಸತೀಶ್

ಸುಮಾ ಸತೀಶ್‌ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಚಿಕ್ಕಮಾಲೂರು ಗ್ರಾಮದವರು. ಬರವಣಿಗೆಯ ಜೊತೆಗೆ ಸಾಹಿತ್ಯ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕಿರುನಾಟಕಗಳ ರಚನೆ, ನಿರ್ದೇಶನ ಮತ್ತು ಅಭಿನಯ ಜೊತೆಗೆ ಏಕಪಾತ್ರಾಭಿನಯ ಇವರ ಹವ್ಯಾಸ. ಮಿರ್ಚಿ ಮಸಾಲೆ ಮತ್ತು ಇತರೆ ನಗೆ ನಾಟಕಗಳು , ಅವನಿ ( ಕವನ ಸಂಕಲನ), ವಚನ ಸಿರಿ (ಆಧುನಿಕ ವಚನಗಳು), ಹಾದಿಯಲ್ಲಿನ ಮುಳ್ಳುಗಳು ( ವೈಚಾರಿಕ ಲೇಖನ ಸಂಕಲನ), ಬಳಗ ಬಳ್ಳಿಯ ಸುತ್ತ (ಸಂ. ಕೃತಿ), ಶೂನ್ಯದಿಂದ ಸಿಂಹಾಸನದವರೆಗೆ ( ವ್ಯಕ್ತಿ ಚಿತ್ರಣ), ಭಾವಯಾನ ( ಸಂ. ಕೃತಿ),  ಮನನ - ಮಂಥನ ( ವಿಮರ್ಶಾ ಬರೆಹಗಳು), ವಿಹಾರ (ಆಧುನಿಕ ವಚನಗಳು),  ಕರ್ನಾಟಕದ ಅನನ್ಯ ಸಾಧಕಿಯರು ಭಾಗ 6 (ಡಾ. ಎಚ್. ಗಿರಿಜಮ್ಮನವರ ಬದುಕು - ಬರೆಹ) ಇವರ ಪ್ರಕಟಿತ ಕೃತಿಗಳು.

ನಾಟಕದ ನ್ಯೂನತೆಗಳೂ, ಬಂಡೇಳುವ ಜೀವಿಗಳೂ..

ಬೀಚಿ ಅವರ ವಿಡಂಬನೆಗಳಲ್ಲಿ ಬದುಕಿನ ಅಪಸವ್ಯಗಳ ಬಗೆಗೆ ಗಾಢ ವಿಷಾದ ಇರುತ್ತದೆ. ಅದನ್ನ ನಗೆಯಲ್ಲಿ ದಾಟಿಸಬೇಕಾದ ಅನಿವಾರ್ಯವನ್ನ ಅವರು ಸೃಷ್ಟಿಸಿಕೊಂಡಿದ್ದಾರೆ. ವಿಷಾದವನ್ನು ಅದರ ರೂಟ್ ಲೆವೆಲ್‌ನಲ್ಲಿ ಅರ್ಥೈಸಿಕೊಂಡವ ಮಾತ್ರ ಅವರ ವಿಡಂಬನೆಗೆ ನಗಬಲ್ಲ. ಬೀಚಿ ಅವರು ಬರೆದ ವಿಡಂಬನೆಗಳು ಅರ್ಥವಾಗಬೇಕು ಅಂದರೆ ಅವರ ಸಾಹಿತ್ಯವನ್ನು ಓದ್ತಾ ಇರುವವರ ಸುತ್ತ ಇರುವ…

Read More

ರಂಗದ ಬೆಳಕಿನಲ್ಲಿ ಅಕ್ಕನ ಹೃದಯವನ್ನು ‘ನೀವು ಕಾಣಿರೆ..’?

ಅಕ್ಕಮಹಾದೇವಿ ಅಂದಕೂಡಲೇ ಬಹುತೇಕರ ಮನಸ್ಸಲ್ಲಿ ಸುಳಿದಾಡುವ ಚಿತ್ರ ಆಕೆ ಬೆತ್ತಲಾಗಿದ್ದಳು ಎಂಬುದು. ಮತ್ತು ಆ ಬೆತ್ತಲನ್ನು ಅವಳ ನೀಳ ಕೂದಲು ಮರೆಮಾಚಿತ್ತು ಎಂಬುದು. ಆದರೆ ಆ ಬೆತ್ತಲೆ ಎಂಥದ್ದು? ಅಕ್ಕನ ಚೆನ್ನಮಲ್ಲಿಕಾರ್ಜುನ ಎಂಥವನು? ಇಷ್ಟಕ್ಕೂ ಶಿವ ಯಾರು? ಹೀಗೆ ನಾವು ಯೋಚಿಸುವ ಮತ್ತು ಅಕ್ಕನ ವಚನಗಳಲ್ಲಿ ಕಾಣುವ ಬೆತ್ತಲೆ ಪರಿಕಲ್ಪನೆಯನ್ನು ಬಿಟ್ಟು ನಾವು ಕಟ್ಟಿಕೊಂಡಿರುವ ಬೆತ್ತಲೆ…

Read More

ಸಹಜತೆಯ ದುಕೂಲವುಟ್ಟ ಪರ್ವ ನಾಟಕದ ಸುತ್ತ

‘ಪರ್ವ’ ನಾಟಕ ನನಗೆ ಇಷ್ಟವಾದದ್ದು ‘ಯಮ’ನನ್ನು ಸಹಜ ಮನುಷ್ಯನನ್ನಾಗಿ ಬಿಂಬಿಸುವ ಬಗೆಯಲ್ಲೇ ಇಡೀ ಪ್ರಯೋಗವನ್ನು ಸಿದ್ಧಮಾಡಿದ್ದ ಬಗೆಯಿಂದ. ಯಾವ ಪಾತ್ರವನ್ನೂ ಪುರಾಣ ಚಿತ್ರಿಸಿರುವ ಭಯಂಕರ ಯಮನನ್ನಾಗಿಸಲು ಮುಂದಾಗಿಲ್ಲ. ಎಲ್ಲೋ ಒಂದೆರಡು ಕಡೆ ಸಂಜಯನನ್ನು ಇಂದಿನ ವಾಹಿನಿಗಳ ಸುದ್ದಿ ವಾಚಕನ ರೀತಿಯಲ್ಲಿ ಸಂಗೀತ ಸಮೇತ ಬಿಂಬಿಸಿದ್ದು ಕೊಂಚ ಮಸಾಲೆ ಬೆರೆಸಿದಂತೆ ಅನಿಸಿತು.- ಪರ್ವ ನಾಟಕದ ಕುರಿತು ಎನ್. ಸಿ. ಮಹೇಶ್  ಬರೆದಿದ್ದಾರೆ

Read More

ಶೇಕ್ಸ್ ಪಿಯರನ್ನು ಪ್ರೀತಿಸುತ್ತಿದ್ದ ಜಿಕೆಜಿ ಸರ್ ನೆನಪುಗಳು

ಜೋಸೆಫ್ ಕಾಲೇಜಿನ ಕನ್ನಡ ಸಂಘದಿಂದ ಪ್ರಕಟಗೊಂಡಿದ್ದ ಪುಸ್ತಕ ‘ನಡೆನುಡಿ’.  ಜಿ.ಕೆ. ಗೋವಿಂದ ರಾವ್  ಅವರು ಹಲವು ಪತ್ರಿಕೆಗಳಲ್ಲಿ ಬರೆದ ಲೇಖನಗಳನ್ನ ಒಟ್ಟು ಮಾಡಿ ಎಚ್.ಎಸ್.ವಿ. ಸರ್ ಕಾಲೇಜಿನ ಕನ್ನಡ ಸಂಘದಿಂದ ಪ್ರಕಟಿಸಿದ್ದರು. ‘ಅರೆರೆ ಇವರು ಟಿವಿಯಲ್ಲಿ ಕಾಣಿಸಿಕೊಳ್ತಾರಲ್ಲ..’ ಎನ್ನುವ ಕುತೂಹಲದಲ್ಲೇ ಪುಸ್ತಕ ತೆರೆದೆ. ಅಲ್ಲಿಂದಾಚೆಗೆ ಜಿಕೆಜಿ ಸರ್ ನನಗೆ ಸ್ಪಷ್ಟವಾಗಲು ಆರಂಭಿಸಿದರು. ಅವರ ಬರವಣಿಗೆಗಳು ನನ್ನಲ್ಲಿ ಹೊಸ ಆಲೋಚನಾ ಕ್ರಮವನ್ನು ರೂಪಿಸಿಕೊಳ್ಳಲು ನೆರವಾದವು.
‘ರಂಗ ವಠಾರ’ ಅಂಕಣದಲ್ಲಿ ಎನ್. ಸಿ. ಮಹೇಶ್  ಲೇಖನ

Read More

‘ಪ್ರೇಕ್ಷಕರಿಗೆ ರಂಗಭೂಮಿಯೇನೂ ಅನಿವಾರ್ಯವಲ್ಲ’

ರಂಗಭೂಮಿ ದಣಿದಿಲ್ಲ, ಬದಲಾಗಿ ತುಂಬ ಆ್ಯಕ್ಟಿವ್ ಆಗಿದೆ. ಈ ಕ್ಷೇತ್ರದಲ್ಲಿ ‘ಕೊಬ್ಬು’ ಖಂಡಿತ ಇದೆ ನಿಜ; ಆದರೆ ಅದೇ ಕೊಬ್ಬು ವಾಸ್ತವ ಮರೆಯುವಂತೆ ಮಾಡುತ್ತಿದೆ. ವಿಚಿತ್ರ ಅಂದರೆ ಇದು ರಂಗಭೂಮಿಯಲ್ಲಿ ತೊಡಗಿಸಿಕೊಂಡವರನ್ನು ದಣಿಸುವ ಬದಲು ತುಂಬ ಆ್ಯಕ್ಟಿವ್ ಮಾಡುತ್ತಿದೆ. ಯಾವ ಬಗೆಯ ಆ್ಯಕ್ಟಿವ್‌ನೆಸ್ ಅದು ಎಂದು ನಾವು ಗ್ರಹಿಸಬೇಕು.  ತಮ್ಮ ಪ್ರಯೋಗಗಳ ಮೂಲಕ ಜನರ ಎದುರು ಸೋಲುತ್ತಿರುವ ಪ್ರಕ್ರಿಯೆಯೇ ಅವರನ್ನು ವಿಚಿತ್ರ ರೀತಿಯಲ್ಲಿ ಆ್ಯಕ್ಟಿವ್ ಮಾಡುತ್ತಿದೆ.  -ರಂಗವಠಾರ ಅಂಕಣದಲ್ಲಿ ಎನ್. ಸಿ. ಮಹೇಶ್ ಅವರು ಡಾ. ಶ್ರೀಪಾದ ಭಟ್ ಅವರ ಲೇಖನಕ್ಕೆ ಪ್ರತಿಕ್ರಿಯೆ ದಾಖಲಿಸಿದ್ದಾರೆ.

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ