Advertisement
ಸುಮಾ ಸತೀಶ್

ಸುಮಾ ಸತೀಶ್‌ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಚಿಕ್ಕಮಾಲೂರು ಗ್ರಾಮದವರು. ಬರವಣಿಗೆಯ ಜೊತೆಗೆ ಸಾಹಿತ್ಯ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕಿರುನಾಟಕಗಳ ರಚನೆ, ನಿರ್ದೇಶನ ಮತ್ತು ಅಭಿನಯ ಜೊತೆಗೆ ಏಕಪಾತ್ರಾಭಿನಯ ಇವರ ಹವ್ಯಾಸ. ಮಿರ್ಚಿ ಮಸಾಲೆ ಮತ್ತು ಇತರೆ ನಗೆ ನಾಟಕಗಳು , ಅವನಿ ( ಕವನ ಸಂಕಲನ), ವಚನ ಸಿರಿ (ಆಧುನಿಕ ವಚನಗಳು), ಹಾದಿಯಲ್ಲಿನ ಮುಳ್ಳುಗಳು ( ವೈಚಾರಿಕ ಲೇಖನ ಸಂಕಲನ), ಬಳಗ ಬಳ್ಳಿಯ ಸುತ್ತ (ಸಂ. ಕೃತಿ), ಶೂನ್ಯದಿಂದ ಸಿಂಹಾಸನದವರೆಗೆ ( ವ್ಯಕ್ತಿ ಚಿತ್ರಣ), ಭಾವಯಾನ ( ಸಂ. ಕೃತಿ),  ಮನನ - ಮಂಥನ ( ವಿಮರ್ಶಾ ಬರೆಹಗಳು), ವಿಹಾರ (ಆಧುನಿಕ ವಚನಗಳು),  ಕರ್ನಾಟಕದ ಅನನ್ಯ ಸಾಧಕಿಯರು ಭಾಗ 6 (ಡಾ. ಎಚ್. ಗಿರಿಜಮ್ಮನವರ ಬದುಕು - ಬರೆಹ) ಇವರ ಪ್ರಕಟಿತ ಕೃತಿಗಳು.

ಜೀವನದ ʼರಂಗ ನೇಪಥ್ಯʼದಿಂದ ಮರೆಯಾದ ಗುಡಿಹಳ್ಳಿ

ಹಿಂದೊಮ್ಮೆ ಗುಡಿಹಳ್ಳಿ ಸರ್ ಅವರ ಬಳಿ ಮಾತಾಡುವಾಗ ತಮಗೆ ಹುಷಾರಿಲ್ಲ ಅಂತ ಅವರು ಹೇಳಿದದ್ದು ನೆನಪಿಗೆ ಬಂತು. ಆದರೆ ಅದು ಸಾವಿನ ರೂಪದಲ್ಲಿ ಕೂತಿದೆ ಎನ್ನುವ ಕಲ್ಪನೆ ನನ್ನಲ್ಲಿ ಇರಲಿಲ್ಲ. ನನ್ನೊಂದಿಗೆ ಮಾತಾಡುವಾಗಲೇ ಅವರ ಧ್ವನಿ ಕ್ಷೀಣಿಸಿದಂತೆ ಅನಿಸುತ್ತಿತ್ತು. ಹೀಗೇ ಏನೋ ವಯೋಮಾನ ಸಹಜವಾಗಿ ಖಾಯಿಲೆ ಅಡರಿ ಕೊಂಡಿರುತ್ತದೆ… ಕಾಲಕ್ರಮದಲ್ಲಿ ಸುಧಾರಿಸುತ್ತದೆ ಅಂದುಕೊಂಡಿದ್ದೆ. ಆದರೆ ಇದು ಅವರ ಚಿತ್ರವನ್ನು ಸಂಪೂರ್ಣ ಕಲಕಿ ಬಿಡಬಹುದು ಎಂಬ ಅಂದಾಜೂ ಇರಲಿಲ್ಲ. ಎನ್.ಸಿ. ಮಹೇಶ್ ಬರೆಯುವ ‘ರಂಗ ವಠಾರ’ ಅಂಕಣ

Read More

ತ್ರಿಮೂರ್ತಿಗಳನ್ನು ರಂಗದ ಬದುಕಿನ ಚಿತ್ರಗಳೊಂದಿಗೆ ಸಮೀಕರಿಸುತ್ತ…

‘ಕಾಯೌ ಶ್ರೀಗೌರಿ..’ ಎಂಬ ನಾಡಗೀತೆಯನ್ನು ಅಂದು ಬರೆದಿದ್ದ ಬಸವಪ್ಪ ಶಾಸ್ತ್ರಿಗಳು ನೆನಪಾಗುತ್ತಾರೆ. ಮೈಸೂರನ್ನು ನಾವಿಂದು ಸಾಂಸ್ಕೃತಿಕ ನಗರಿ ಎಂದು ಕರೆದುಕೊಳ್ಳುತ್ತೇವೆ. ವಿದ್ವತ್ತಿಗೆ ಹೆಸರಾದದ್ದು ಎಂದು ತಿಳಿದೇ ಇದೆ. ಇಷ್ಟಿದ್ದೂ ಬಸವಪ್ಪ ಶಾಸ್ತ್ರಿಗಳ ಸ್ಮಾರಕದ ಕಡೆಗೆ ಅಸಡ್ಡೆ ಯಾಕೆ ಮತ್ತು ಹೇಗೆ ಬೆಳೆಯಿತೋ ಗೊತ್ತಿಲ್ಲ. ಮೈಸೂರಿನಲ್ಲಿರುವ ಎಲ್.ಐ.ಸಿ ಬಿಲ್ಡಿಂಗ್ ಬಳಿ ರಸ್ತೆ ಪಕ್ಕದಲ್ಲಿ ಬಸವಪ್ಪ ಶಾಸ್ತ್ರಿಗಳ ಸ್ಮಾರಕವಿದೆ. ಅದರ ಬಣ್ಣ ಮಾಸಿ, ಗೋಡೆಗಳ ಮೇಲೆಲ್ಲ ಬಳ್ಳಿ ಹಬ್ಬಿಕೊಳ್ಳುವಷ್ಟು ನಿರ್ಲಕ್ಷ್ಯವೇಕೆ..”

Read More

ಸಂಸರ ‘ಬಿಂಬ’ ವನ್ನು ಕಂಡುಕೊಳ್ಳಬೇಕಾದ ಬಗೆಗೆ ಚಿಂತಿಸುತ್ತ…

ರಂಗಶಾಲೆಗಳು ಮತ್ತು ರಂಗಸಂಸ್ಥೆಗಳು ಮಾತ್ರ ಕಟ್ಟಿ ನಿಲ್ಲಿಸಬಹುದಾದ ಪ್ರಯೋಗಗಳು. ಅಮೇಚೂರ್ ಗಳಿಗೆ ಸಂಸರು ನಿಲುಕುವುದು ಕಷ್ಟ. ಕೈಲಾಸಂ ಮತ್ತು ಸಂಸರು ಒಂದೇ ಕಾಲಮಾನದವರಾದರೂ ಇವರ ಭಾಷಾ ಪ್ರಯೋಗದ ಅನನ್ಯತೆ ದೊಡ್ಡದು. ಕೈಲಾಸಂ ಕಟ್ಟಿರುವ ಭಾಷೆ- ಅದನ್ನು ಒಡೆದು ಓದುವ ಕ್ರಮ ತಿಳಿಯದಿದ್ದರೆ ಅವರ ನಾಟಕಗಳು ದಕ್ಕುವುದಿಲ್ಲ. ಸಂಸರನ್ನು ಓದಬೇಕಾದರೆ ಹಳಗನ್ನಡದ ಅಥವಾ ನಡುಗನ್ನಡದ ಟಚ್ ಇರಿಸಿಕೊಂಡಿರಬೇಕು. ಶಾಸ್ತ್ರೀಯವಾಗಿ ಅಭ್ಯಸಿಸಬೇಕು.
ಎನ್.ಸಿ. ಮಹೇಶ್‌ ಬರೆಯುವ ‘ರಂಗ ವಠಾರ’ ಅಂಕಣ

Read More

ಅಗಲಿದ ನಮ್ಮ ರಂಗಕಲಾವಿದರ ಜೊತೆಗೆ ರೊಟಿಮಿ ನೆನಪು…

ಕಿಂಗ್ ಲಯಸ್ ಆಫ್ರಿಕದ ದೊರೆ ‘ಅಡೆಟುಸ’ ಆಗುತ್ತಾನೆ. ರಾಣಿ ಜೊಕಾಸ್ತ ಆಫ್ರಿಕದ ರಾಣಿ ‘ಒಜೋಲ’ ಆಗುತ್ತಾಳೆ. ಕ್ರಯಾನ್ ಅಡ್ರೆಪೊ ಆಗುತ್ತಾನೆ. ಟೈರೀಷಿಯಸ್ ಬಾಬ ಫಕನುಲ್ – ಕುರುಡು ತತ್ವಜ್ಞಾನಿ ಆಗುತ್ತಾನೆ. ಮೂಲ ಪಠ್ಯದಲ್ಲಿನ ಕುರಿಗಾಹಿ, ಘೂಂಕ ಆಗುತ್ತಾನೆ. ಥೀಬ್ಸ್ ಎನ್ನುವುದು ಆಫ್ರಿಕನ್ ಹಿನ್ನೆಲೆಯಲ್ಲಿ ಕುಟುಂಜೆ ಆಗಿ ‘ಇಡೆ’ ಎನ್ನುವುದು ಮಾತಾಪಿತೃಗಳ ವಧಾ ಸ್ಥಾನವಾಗುತ್ತದೆ.
ಎನ್‌.ಸಿ. ಮಹೇಶ್‌ ಬರೆಯುವ ‘ರಂಗ ವಠಾರ’ ಅಂಕಣ

Read More

ಆಷಾಢ ಕಾವ್ಯೋತ್ಸವದಲ್ಲಿ ಎನ್.ಸಿ ಮಹೇಶ್ ಬರೆದ ಕವಿತೆ: ಕೆನೆಯಾಗಿರುವವಳ ಕಾಣುತ್ತಾ..

“ಮೊಸರಾಗಿ ಕದಡಿಹೋದ
ಮನಸ್ಸನ್ನ ತನ್ನ ಧೀಶಕ್ತಿಯಿಂದ
ಹಿಮ್ಮುಖದ ಪ್ರಕ್ರಿಯೆಗೆ ಒಗ್ಗಿಸಿ
ಮತ್ತೆ ಹಾಲಾದವಳು.
ಹಿಂದಿನ ಮಥನದ ನೆನಪನ್ನು
ಕೆನೆಯ ಹೊದಿಕೆಯಡಿ
ಅಡಗಿಸಿಡುತಿರುವವಳು.”- ಆಷಾಢ ಕಾವ್ಯೋತ್ಸವದಲ್ಲಿ ಎನ್.ಸಿ ಮಹೇಶ್ ಬರೆದ ಕವಿತೆ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ