Advertisement
ರಂಜಾನ್ ದರ್ಗಾ

ಕನ್ನಡದ ಹಿರಿಯ ಲೇಖಕರು ಮತ್ತು ಪತ್ರಕರ್ತರು. ಬಂಡಾಯ ಕಾವ್ಯದ ಮುಂಚೂಣಿಯಲ್ಲಿದ್ದವರು. ವಿಜಾಪುರ ಮೂಲದ ಇವರು ಧಾರವಾಡ ನಿವಾಸಿಗಳು. ಕಾವ್ಯ ಬಂತು ಬೀದಿಗೆ (ಕಾವ್ಯ -೧೯೭೮), ಹೊಕ್ಕಳಲ್ಲಿ ಹೂವಿದೆ (ಕಾವ್ಯ), ಸಾಹಿತ್ಯ ಮತ್ತು ಸಮಾಜ, ಅಮೃತ ಮತ್ತು ವಿಷ, ನೆಲ್ಸನ್ ಮಂಡೇಲಾ, ಮೂರ್ತ ಮತ್ತು ಅಮೂರ್ತ, ಸೌಹಾರ್ದ ಸೌರಭ, ಅಹಿಂದ ಏಕೆ? ಬಸವಣ್ಣನವರ ದೇವರು, ವಚನ ಬೆಳಕು, ಬಸವ ಧರ್ಮದ ವಿಶ್ವಸಂದೇಶ, ಬಸವಪ್ರಜ್ಞೆ, ನಡೆ ನುಡಿ ಸಿದ್ಧಾಂತ, ಲಿಂಗವ ಪೂಜಿಸಿ ಫಲವೇನಯ್ಯಾ, ಜಾತಿ ವ್ಯವಸ್ಥೆಗೆ ಸವಾಲಾದ ಶರಣರು, ಶರಣರ ಸಮಗ್ರ ಕ್ರಾಂತಿ, ಬಸವಣ್ಣ ಮತ್ತು ಅಂಬೇಡ್ಕರ್, ಬಸವಣ್ಣ ಏಕೆ ಬೇಕು?, ಲಿಂಗವಂತ ಧರ್ಮದಲ್ಲಿ ಏನುಂಟು ಏನಿಲ್ಲ?, ದಾಸೋಹ ಜ್ಞಾನಿ ನುಲಿಯ ಚಂದಯ್ಯ (ಸಂಶೋಧನೆ) ಮುಂತಾದವು ಅವರ ಪ್ರಕಟಿತ ಕೃತಿಗಳಾಗಿವೆ.  ಕರ್ನಾಟಕ ಸರ್ಕಾರದ ರಾಷ್ಟ್ರೀಯ ಬಸವ ಪುರಸ್ಕಾರ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಗೌರವ ಪ್ರಶಸ್ತಿ ಮುಂತಾದ ೫೨ ಪ್ರಶಸ್ತಿಗಳಿಗೆ ಭಾಜನರಾದ ರಂಜಾನ್ ದರ್ಗಾ ಅವರು ಬಂಡಾಯ ಸಾಹಿತ್ಯ ಪರಂಪರೆಯ ಶಕ್ತಿಶಾಲಿ ಕವಿಗಳಲ್ಲಿ ಒಬ್ಬರು. ಅಮೆರಿಕಾ, ನೆದರ್‌ಲ್ಯಾಂಡ್ಸ್, ಲೆಬನಾನ್, ಕೆನಡಾ, ಫ್ರಾನ್ಸ್, ಆಸ್ಟ್ರೇಲಿಯಾ ಸೇರಿದಂತೆ ಇನ್ನೂ ಹಲವು ದೇಶಗಳಲ್ಲಿ ಶರಣ ಸಂಸ್ಕೃತಿ, ಶಾಂತಿ ಮತ್ತು ಮಾನವ ಏಕತೆ ಕುರಿತು ಉಪನ್ಯಾಸ ನೀಡಿದ್ದಾರೆ.

ಕರೆವವೊಲಾಯ್ತು ಮತ್ತ ಕಳಹಂಸರವಂ ಪಡೆಮೆಚ್ಚೆಗಂಡನಂ: ಆರ್. ದಿಲೀಪ್ ಕುಮಾರ್ ಅಂಕಣ

“ಯಮುನಾನದಿಯ ಮೇಲೆ ಹಾದುಬರುತ್ತಿರುವ ಗಾಳಿಯ ವರ್ಣನೆಯಿಂದ ಹಿಡಿದು ಅಲ್ಲಿಗೆ ಎಲ್ಲರೂ ಬಂದು ಜಲಕ್ರೀಡೆ ಆಡುವಾಗಿನ ಸಂದರ್ಭದವರೆಗಿನ ಎಲ್ಲಾ ವರ್ಣನೆಯನ್ನೊಮ್ಮೆ ಗಮನಿಸಿ ಇದೆಲ್ಲವೂ ಅಮೂರ್ತದಿಂದ ಮೂರ್ತಕ್ಕೆ ತರುವ ಬಹುದೊಡ್ಡ ಪ್ರಯತ್ನ. ಕೊನೆಗೆ ಅವನಿಗೇ ವರ್ಣಿಸಲು ಸಾಲದೆ ದೇಸೀ ಮಾರ್ಗ ಅನ್ನುವ ಮಾತನ್ನು ತರುತ್ತಾನೆ…”

Read More

ಇನ್ನುವೇಂ ಸೈಪೊಳವೆ: ಆರ್. ದಿಲೀಪ್ ಕುಮಾರ್ ಅಂಕಣ

“ಕವಿಯೊಬ್ಬನ ಮನಸ್ಸಿನ ಮೇಲೆ ಬೀರುವ ಹೊರಜಗತ್ತಿನ ಘಟನೆಗಳು ಪ್ರಭಾವವು ಬಹು ಪರಿಣಾಮವನ್ನು ಮನಸ್ಸಿನ ಮೇಲೆ ಬೀರಿಯೇ ಇರುತ್ತದೆ. ಈ ಪ್ರಭಾವದ ಪ್ರೇರಣೆಯಿಂದ ಆದ ಪರಿಣಾಮವು ಬಹು ದಟ್ಟವಾಗಿರುತ್ತದೆ. ಇವು ಪದರ ಪದರಗಳಾಗಿ ಬಿಡಿಸಿಕೊಳ್ಳಲು ಪ್ರಯತ್ನಿಸಿದಷ್ಟು ಅದು ನೆನಪಾಗುತ್ತಲೇ ಇರುತ್ತದೆ. ಇದರಿಂದ ಬಿಡುಗಡೆಗೆ ಮಹಾಮರೆವಿನ ಅಗತ್ಯ ಕವಿಗಿದೆ ಅನಿಸದೆ. “

Read More

ಲೋಕಾಶ್ಚರ್ಯಮಂ ಮಾಡಿ ಕೊಂದುದು: ಆರ್. ದಿಲೀಪ್ ಕುಮಾರ್ ಅಂಕಣ

“ಆದಿಪುರಾಣದ ಪ್ರಾರಂಭವನ್ನೊಮ್ಮೆ ಗಮನಿಸಿ, ಲೋಕಾಕಾರ ಕಥನದಿಂದ ಪ್ರಾರಂಭವಾಗಿ ವಿದೇಹದಲ್ಲಿ ಬಂದು ನಿಂತು ಕಥಾಭಿತ್ತಿ ಪ್ರಾರಂಭ ಆಗುತ್ತದೆ. ಇಲ್ಲಿನ ಪ್ರತಿಯೊಂದು ಭಾಗದ ನಾಯಕ ಪಾತ್ರವೂ ಶ್ರೀಮಂತರೇ, ರಾಜರೇ. ಅವರ ಸಾವಿನ ಚಿತ್ರಣವೇ ಬದುಕಿನ ಬಗೆಗೆ ಯೋಚಿಸುವ ಹಾಗೆ ಮಾಡುವಲ್ಲಿ ಚಲನೆ ಪಡೆಯುತ್ತದೆ. ಶ್ರವಣಬೆಳಗೊಳದ ನಂದಿಸೇನ ಮುನಿಯ ಶಾಸನದ….”

Read More

ಈತನ್ ಎಮ್ಮೊಂದಿಗನುಮ್ ಎಮ್ಮ ನಂಟನುಮ್ ಅಕ್ಕುಮ್: ಆರ್. ದಿಲೀಪ್ ಕುಮಾರ್ ಅಂಕಣ

“ಯಾವುದೇ ಭಾವದ ತೀವ್ರತೆ ಅತಿಯಾದಾಗ ಕ್ರಿಯಾತ್ಮಕವಾಗಿ ಯಶಸ್ವಿಯಾಗದೆ ಹೋದಾಗ ಅದು ಶೋಕವನ್ನು ಹೊದೆಯಲು ಮುಂದಾಗುತ್ತದೆ. ಅವನಲ್ಲಿನ ಶೋಕ ಇವನಲ್ಲಿನ ಶೃಂಗಾರಕ್ಕೆ ಪುಷ್ಟಿಕೊಡುತ್ತಿದೆ. ವಿಪ್ರಲಂಭವನ್ನು ವರ್ಣಿಸುತ್ತಲೇ ಕವಿಯು ಹೊಸದಾದ ಮತ್ತೊಂದು ಭಾವವನ್ನು ಕೊನೆಯ ಭಾಗದ ಪದ್ಯದಲ್ಲಿ ತಂದುಬಿಡುತ್ತಾನೆ. ಅದು ಉತ್ಕಟವಾದ ಶೋಕವಾಗುತ್ತದೆ….”

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ