ಕೂರಾಪುರಾಣ ೧೧: ಅವನಿದ್ದರೆ ಮನೆ ತುಂಬಿದಂತೆ, ಮನಸ್ಸು ಅರಳಿದಂತೆ…
ನಮ್ಮನ್ನು ಕಾಡುತ್ತಿದ್ದ ಒಂದು ಸಂಗತಿಯೆಂದರೆ ಇಡೀ ದಿನ ಅವರು ನಾಯಿಯನ್ನು ಮನೆಯಲ್ಲಿಯೇ ಬಿಟ್ಟು ಹೋಗುತ್ತಿದ್ದುದು. ಕೂರಾನಿಗೆ ಅದು ಅಭ್ಯಾಸವಿರದೇ ಇದ್ದುದ್ದರಿಂದ ಅವನು ಹೇಗೆ ವರ್ತಿಸುತ್ತಾನೋ ಎಂಬ ಚಿಂತೆ. ಅವರ ಮನೆಯಲ್ಲಿನ ವೈರ್, ಬೆಡಶೀಟ್, ಟವೆಲ್ ಎಲ್ಲವನ್ನು ಕಚ್ಚಿ ಹಾಕುವವನೇ.. ನಾವು ಭಾರತಕ್ಕೆ ಹಾರಿದ ಮೇಲೆ ಇಲ್ಲಿ ಅವನಿಗೆ ತೊಂದರೆಯಾದರೆ ಎಂದೆಲ್ಲ ಯೋಚನೆಗಳು ಬರತೊಡಗಿ ಮತ್ತಾರಾದರು ಆ ಆಪ್‌ನಲ್ಲಿ ನಮಗೆ ಹೊಂದುವಂತವರು ಸಿಗುತ್ತಾರೇನೋ ಎಂದು ನೋಡಹತ್ತಿದೆವು.
ಸಂಜೋತಾ ಪುರೋಹಿತ ಬರೆಯುವ “ಕೂರಾಪುರಾಣ” ಸರಣಿ