Advertisement
ರಂಜಾನ್ ದರ್ಗಾ

ಕನ್ನಡದ ಹಿರಿಯ ಲೇಖಕರು ಮತ್ತು ಪತ್ರಕರ್ತರು. ಬಂಡಾಯ ಕಾವ್ಯದ ಮುಂಚೂಣಿಯಲ್ಲಿದ್ದವರು. ವಿಜಾಪುರ ಮೂಲದ ಇವರು ಧಾರವಾಡ ನಿವಾಸಿಗಳು. ಕಾವ್ಯ ಬಂತು ಬೀದಿಗೆ (ಕಾವ್ಯ -೧೯೭೮), ಹೊಕ್ಕಳಲ್ಲಿ ಹೂವಿದೆ (ಕಾವ್ಯ), ಸಾಹಿತ್ಯ ಮತ್ತು ಸಮಾಜ, ಅಮೃತ ಮತ್ತು ವಿಷ, ನೆಲ್ಸನ್ ಮಂಡೇಲಾ, ಮೂರ್ತ ಮತ್ತು ಅಮೂರ್ತ, ಸೌಹಾರ್ದ ಸೌರಭ, ಅಹಿಂದ ಏಕೆ? ಬಸವಣ್ಣನವರ ದೇವರು, ವಚನ ಬೆಳಕು, ಬಸವ ಧರ್ಮದ ವಿಶ್ವಸಂದೇಶ, ಬಸವಪ್ರಜ್ಞೆ, ನಡೆ ನುಡಿ ಸಿದ್ಧಾಂತ, ಲಿಂಗವ ಪೂಜಿಸಿ ಫಲವೇನಯ್ಯಾ, ಜಾತಿ ವ್ಯವಸ್ಥೆಗೆ ಸವಾಲಾದ ಶರಣರು, ಶರಣರ ಸಮಗ್ರ ಕ್ರಾಂತಿ, ಬಸವಣ್ಣ ಮತ್ತು ಅಂಬೇಡ್ಕರ್, ಬಸವಣ್ಣ ಏಕೆ ಬೇಕು?, ಲಿಂಗವಂತ ಧರ್ಮದಲ್ಲಿ ಏನುಂಟು ಏನಿಲ್ಲ?, ದಾಸೋಹ ಜ್ಞಾನಿ ನುಲಿಯ ಚಂದಯ್ಯ (ಸಂಶೋಧನೆ) ಮುಂತಾದವು ಅವರ ಪ್ರಕಟಿತ ಕೃತಿಗಳಾಗಿವೆ.  ಕರ್ನಾಟಕ ಸರ್ಕಾರದ ರಾಷ್ಟ್ರೀಯ ಬಸವ ಪುರಸ್ಕಾರ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಗೌರವ ಪ್ರಶಸ್ತಿ ಮುಂತಾದ ೫೨ ಪ್ರಶಸ್ತಿಗಳಿಗೆ ಭಾಜನರಾದ ರಂಜಾನ್ ದರ್ಗಾ ಅವರು ಬಂಡಾಯ ಸಾಹಿತ್ಯ ಪರಂಪರೆಯ ಶಕ್ತಿಶಾಲಿ ಕವಿಗಳಲ್ಲಿ ಒಬ್ಬರು. ಅಮೆರಿಕಾ, ನೆದರ್‌ಲ್ಯಾಂಡ್ಸ್, ಲೆಬನಾನ್, ಕೆನಡಾ, ಫ್ರಾನ್ಸ್, ಆಸ್ಟ್ರೇಲಿಯಾ ಸೇರಿದಂತೆ ಇನ್ನೂ ಹಲವು ದೇಶಗಳಲ್ಲಿ ಶರಣ ಸಂಸ್ಕೃತಿ, ಶಾಂತಿ ಮತ್ತು ಮಾನವ ಏಕತೆ ಕುರಿತು ಉಪನ್ಯಾಸ ನೀಡಿದ್ದಾರೆ.

ಸಿಂಗರನ ಬಾಲ್ಯಕಾಲದ ಕಥನ: ಒಬ್ಬ ದಾರ್ಶನಿಕ ಹುಡುಗ

“ಈ ರೀತಿಯ ಚರ್ಚೆಗಳನ್ನ ನಾನು ಎಷ್ಟು ಬಾರಿ ಕೇಳಿದರೂ, ಪ್ರತಿ ಬದಿಯವರು ಪರಿಣಾಮಕಾರಿಯಾಗಿ ಇನ್ನೊಬ್ಬರ ವಾದಗಳನ್ನ ಉರುಳಿಸುತ್ತಿದ್ದರು! ಆದರೆ ಯಾವುದಾದರೂ ಪ್ರಕರಣವನ್ನು ಸಮರ್ಥಿಸುವಾಗ ಅವಲಂಬಿಸುತ್ತಿದ್ದದ್ದು ವಿವಾದಾಸ್ಪದ ಉಲ್ಲೇಖನಗಳಿಗೆ. ನಾನು ನನ್ನದೇ ಅಭಿಪ್ರಾಯಗಳನ್ನು ಮಾತನಾಡದೇ ಇಟ್ಟುಕೊಳ್ಳುತ್ತಿದ್ದೆ. ಅನ್ಯ ಧರ್ಮದವರು ವಿಗ್ರಹ ಆರಾಧಕರು ನಿಜ, ಆದರೆ ರಾಜ ಡೇವಿಡ್ ನಿಜಕ್ಕೂ ದುಷ್ಕರ್ಮ ಮಾಡಿದ್ದ.”

Read More

ಸಿಂಗರನ ಬಾಲ್ಯಕಾಲದ ಕಥನ: ನನ್ನಕ್ಕನ ಅಪರಿಮಿತ ಅವತಾರಗಳು

“ಸಬ್ಬಾತ್‌ನ ಒಂದು ದಿನ ಅಡುಗೆ ಮನೆಯಿಂದ ಅವಳ ಅಳು ಕೇಳಿ ನಾನು ಓಡಿದಾಗ ಅಲ್ಲಿ ಕಂಡಿದ್ದು ಉರಿಯುತ್ತಿರುವ ಒಲೆಯಾಗಿತ್ತು. ಅವಳು ಸಬ್ಬಾತ್ ಊಟವನ್ನು ಮುಚ್ಚಲು ಅದಕ್ಕೆ ಒಣ ಕಾಗದಗಳನ್ನ ಹರವಿದ್ದಳು, ಅದರಲ್ಲಿ ಕಿಡಿಯೊಂದರಿಂದ ಬೆಂಕಿ ಹತ್ತಿತ್ತು. ನಾವು ಎಲ್ಲವನ್ನು ಏನಾಗಿದೆ ಎಂದು ಬಿಡಿಸಿ‌ ಹೇಳಿದ ಮೇಲೆಯೇ ಅವಳು ದೆವ್ವವೊಂದು ಒಳಗೆ ಕದ್ದು ಕುಳಿತಿದೆ ಅನ್ನೋ ಕಲ್ಪನೆಯಿಂದ ಆಚೆ ಬಂದಿದ್ದು.”

Read More

ಸಿಂಗರನ ಬಾಲ್ಯಕಾಲದ ಕಥನ: ವಂಶವೃಕ್ಷ

“ಅಮ್ಮ ತನ್ನ ಭಾವಿ ವರನನ್ನು ಭೇಟಿಯಾದಾಗ ಪೂರ್ಣ ಕೆಂಪು ಗಡ್ಡದ ಈ ಮನುಷ್ಯನನ್ನು ನೋಡಿ ಮುಜುಗರವಾಗಿತ್ತಂತೆ. ಆದರೆ ಅವನು ಅವಳ ತಂದೆಯ ಜೊತೆಗಿನ ಧಾರ್ಮಿಕ ಪ್ರಶ್ನೆಗಳ ಚರ್ಚೆಯಿಂದಾಗಿ ಗೌರವದ ಜೊತೆಗೆ ಅವನನ್ನು ಮೆಚ್ಚಿಕೊಂಡಳಂತೆ. ನನಗೆ ಹೇಳಿದ್ದಳು ಅವಳಿಗಿಂತ ಐದು ವರ್ಷಕ್ಕೆ ದೊಡ್ಡವನಿದ್ದ ವರ ಸಿಕ್ಕಿದ್ದು ಸಂತಸವಾಗಿತ್ತು ಎಂದು. ಟೆಮರ್ಲ್ ಅಜ್ಜಿ ಅಮ್ಮನಿಗೆ ಧರಿಸಲು ಆಗದಂತಹ ತೂಕದ ಚಿನ್ನದ ಸರವೊಂದನ್ನು ಉಡುಗೊರೆಯಾಗಿ ನೀಡಿದ್ದಳು.”

Read More

ಸಿಂಗರನ ಬಾಲ್ಯಕಾಲದ ಕಥನ: ಹಣ್ಣುಹಣ್ಣಾದ ಅಗಸಗಿತ್ತಿಯ ಕಾರ್ಯನಿಷ್ಠೆ

“ಹೊರೆ ಎಂದಿಗಿಂತಲೂ ತುಂಬಾ ದೊಡ್ಡದಾಗಿತ್ತು. ಆ ಹೆಂಗಸು ತನ್ನ ಭುಜಗಳ ಮೇಲೆ ಅದನ್ನು ಇರಿಸಿಕೊಂಡಾಗ ಅದು ಅವಳನ್ನು ಪೂರ್ಣ ಆವರಿಸಿತು. ಮೊದಲು ಆ ಗಂಟಿನ ಅಡಿಯಲ್ಲಿ ಬಿದ್ದು ಬಿಡುವಳೇನೋ ಎಂಬಂತೆ ತೂಗಾಡಿದಳು. ಆದರೆ ಒಳಗಿನ‌ ಹಠ ಇಲ್ಲ, ನೀನು ಬೀಳುವುದಿಲ್ಲ ಎಂದು ಕರೆದಂತಾಗಿತ್ತು. ಒಂದು ಕತ್ತೆ ತನ್ನ ಹೊರೆಯಿಂದ ಕೆಳಗೆ ಬೀಳಲು ತಾನೇ ಬೇಕಾದರೆ ಪರವಾನಗಿ ಕೊಟ್ಟುಕೊಂಡು..”

Read More

ಸಿಂಗರನ ಬಾಲ್ಯಕಾಲದ ಕಥನ: ಸಬ್ಬತ್‌ನ ಆ ರಾತ್ರಿ ಮತ್ತು ಒಂದು ಘೋರ ಪ್ರಶ್ನೆ!

“ನಾನು ಎರಡು ವಿರೋಧ ಭಾವನೆಗಳ ಮಧ್ಯೆ ಛಿದ್ರವಾಗಿದ್ದೆ. ನನ್ನ ಭಯ ನನ್ನ ಕಣ್ಣುಗಳನ್ನು ಅಲ್ಲಿಂದ ಬೇರೆಡೆಗೆ ತಿರುಗಿಸಲು ಆದೇಶಿಸುತ್ತಿತ್ತು, ಆದರೆ ನನ್ನ ಕುತೂಹಲ ಮತ್ತೊಂದು ಬಾರಿ ನೋಡಲು ಕೋರಿಕೆ ಇಟ್ಟಿತ್ತು. ನನಗೆ ಗೊತ್ತಿತ್ತು ನಾನು ಇಲ್ಲಿ ನೋಡುವ ಪ್ರತಿ ನೋಟಕ್ಕೂ ದುಃಸ್ವಪ್ನಗಳು ಮತ್ತು ಯಾತನೆಯ ಮೂಲಕ ಬೆಲೆಯನ್ನು ತೆರಬೇಕಾಗುತ್ತದೆ ಎಂದು. ಆದರೂ ಪ್ರತಿಬಾರಿ ಹೊಸದಾಗಿ ಆ ಜೀವಂತ ಸಮಾಧಿಯನ್ನ ನೋಡಲು ಮುಂದಾಗುತ್ತಿದ್ದೆ.”
ಸ್ಮಿತಾ ಮಾಕಳ್ಳಿ ಅನುವಾದಿಸುತ್ತಿರುವ ಬರಹ

Read More
  • 1
  • 2

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ