Advertisement
ರಂಜಾನ್ ದರ್ಗಾ

ಕನ್ನಡದ ಹಿರಿಯ ಲೇಖಕರು ಮತ್ತು ಪತ್ರಕರ್ತರು. ಬಂಡಾಯ ಕಾವ್ಯದ ಮುಂಚೂಣಿಯಲ್ಲಿದ್ದವರು. ವಿಜಾಪುರ ಮೂಲದ ಇವರು ಧಾರವಾಡ ನಿವಾಸಿಗಳು. ಕಾವ್ಯ ಬಂತು ಬೀದಿಗೆ (ಕಾವ್ಯ -೧೯೭೮), ಹೊಕ್ಕಳಲ್ಲಿ ಹೂವಿದೆ (ಕಾವ್ಯ), ಸಾಹಿತ್ಯ ಮತ್ತು ಸಮಾಜ, ಅಮೃತ ಮತ್ತು ವಿಷ, ನೆಲ್ಸನ್ ಮಂಡೇಲಾ, ಮೂರ್ತ ಮತ್ತು ಅಮೂರ್ತ, ಸೌಹಾರ್ದ ಸೌರಭ, ಅಹಿಂದ ಏಕೆ? ಬಸವಣ್ಣನವರ ದೇವರು, ವಚನ ಬೆಳಕು, ಬಸವ ಧರ್ಮದ ವಿಶ್ವಸಂದೇಶ, ಬಸವಪ್ರಜ್ಞೆ, ನಡೆ ನುಡಿ ಸಿದ್ಧಾಂತ, ಲಿಂಗವ ಪೂಜಿಸಿ ಫಲವೇನಯ್ಯಾ, ಜಾತಿ ವ್ಯವಸ್ಥೆಗೆ ಸವಾಲಾದ ಶರಣರು, ಶರಣರ ಸಮಗ್ರ ಕ್ರಾಂತಿ, ಬಸವಣ್ಣ ಮತ್ತು ಅಂಬೇಡ್ಕರ್, ಬಸವಣ್ಣ ಏಕೆ ಬೇಕು?, ಲಿಂಗವಂತ ಧರ್ಮದಲ್ಲಿ ಏನುಂಟು ಏನಿಲ್ಲ?, ದಾಸೋಹ ಜ್ಞಾನಿ ನುಲಿಯ ಚಂದಯ್ಯ (ಸಂಶೋಧನೆ) ಮುಂತಾದವು ಅವರ ಪ್ರಕಟಿತ ಕೃತಿಗಳಾಗಿವೆ.  ಕರ್ನಾಟಕ ಸರ್ಕಾರದ ರಾಷ್ಟ್ರೀಯ ಬಸವ ಪುರಸ್ಕಾರ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಗೌರವ ಪ್ರಶಸ್ತಿ ಮುಂತಾದ ೫೨ ಪ್ರಶಸ್ತಿಗಳಿಗೆ ಭಾಜನರಾದ ರಂಜಾನ್ ದರ್ಗಾ ಅವರು ಬಂಡಾಯ ಸಾಹಿತ್ಯ ಪರಂಪರೆಯ ಶಕ್ತಿಶಾಲಿ ಕವಿಗಳಲ್ಲಿ ಒಬ್ಬರು. ಅಮೆರಿಕಾ, ನೆದರ್‌ಲ್ಯಾಂಡ್ಸ್, ಲೆಬನಾನ್, ಕೆನಡಾ, ಫ್ರಾನ್ಸ್, ಆಸ್ಟ್ರೇಲಿಯಾ ಸೇರಿದಂತೆ ಇನ್ನೂ ಹಲವು ದೇಶಗಳಲ್ಲಿ ಶರಣ ಸಂಸ್ಕೃತಿ, ಶಾಂತಿ ಮತ್ತು ಮಾನವ ಏಕತೆ ಕುರಿತು ಉಪನ್ಯಾಸ ನೀಡಿದ್ದಾರೆ.

ಮೊರಸಾರ್ಸಕೆ….. ಮರಾ….ಕಲ್ಮುಳ್ಳು…. ಕಲ್ಮುಳ್ಳು…..: ಸುಮಾವೀಣಾ ಸರಣಿ

ಬಿದಿರಿನ ನಾನಾ ರೀತಿಯ ಮನೆ ಬಳಕೆ ವಸ್ತುಗಳು ಅಂದರೆ ಕುಕ್ಕೆ, ಗೂಡೆ, ಅನ್ನ ಬಸಿಯುವ ಚಿಬ್ಬಲು ಮಳೆಗಾಲದಲ್ಲಿ ಬಟ್ಟೆ ಒಣಗಿಸುವ ಪಂಜರಗಳು ಆಧುನಿಕತೆ ಬಂದಂತೆ ಕಡಿಮೆಯಾಗುತ್ತಿವೆ. ಅದಕ್ಕೆ ಪರ್ಯಾಯವಾಗಿ ಮೇದಾರರು ಬಿದಿರಿನಲ್ಲಿಯೇ ಗೃಹಾಂಲಕಾರಿಕ ವಸ್ತುಗಳು ಅಂದರೆ ಹೂದಾನಿಗಳು, ಗೋಡೆಗೆ ಆನಿಸುವಂಥ ಫಲಕಗಳು ಇತ್ಯಾದಿಗಳನ್ನು ಮಾಡಿ ಮಾರಾಟ ಮಾಡುತ್ತಿದ್ದಾರೆ.
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿಯ ಹತ್ತನೆಯ ಬರಹ ನಿಮ್ಮ ಓದಿಗೆ

Read More

ಸೀಮೆಯಿಂದ…. ಸುಗ್ಗಿವರೆಗೆ: ಸುಮಾವೀಣಾ ಸರಣಿ

“ನೀವು ತಿಂದದ್ದಕ್ಕೆ ಹಣ ಕೊಡಬೇಕಿಲ್ಲ ಎಂಥಾ ಸೌಲಭ್ಯವಿದು? ಪುಕ್ಕಟೆಯೇ? ಎಂದು ನೀವು ಕೇಳಬಹುದು ಇಲ್ಲ ಇದಕ್ಕೆ ಉದ್ರಿ ಎನ್ನುವರು. ಕೌಂಟರ್ ಮುಂದೆ ‘ನನ್ನ ಹೆಸರ್ಲೆ ಹಚ್ರಿ ಎಂದು ಹೇಳಿದರೆ ಸಾಕು ಹಚ್ಚುವುದೊಂದೇ ಹಳ್ಳಿ ಫಳಾರದಂಗಡಿಯ ಮಾಲಿಕನ ಕರ್ಮ. ಸುಗ್ಗಿಗೊಮ್ಮೆ ನಾಲ್ಕುಚೀಲ ಜೋಳ ತಂದು ಹೋಟೆಲಿಗೆ ಹಚ್ಚಿದರೆ ಬಾಕಿ ಚುಕ್ತಾ ಆಯ್ತು. ವರ್ಷದವರೆಗೂ ಪೂರಿ, ಬಜಿಗಳನ್ನು ತಿನ್ನುತ್ತಾ ಊರಸುದ್ದಿಯನ್ನು, ಮಾತನಾಡುತ್ತಾ ಎದುರಿಗಿರಲಾರದವರ ಗೇಲಿ ಮಾಡುತ್ತಾ ಹೊತ್ತನ್ನು ಕಳೆಯಬಹುದು” ಎಂಬ ಸಾಲುಗಳು ವೀರೆಂದ್ರ ಸಿಂಪಿಯವರ ‘ಹಳ್ಳಿಯ ಚಹಾ ಹೋಟೆಲುಗಳು’ ಲಲಿತ ಪ್ರಬಂಧದ ಸಾಲುಗಳು.
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿ

Read More

ಅನ್ಯಭಾಷಾ ಪದಯಾನಾ: ಸುಮಾವೀಣಾ ಸರಣಿ

ಅನ್ಯಾಭಾಷಾ ಸಂಸರ್ಗದಿಂದ ಕನ್ನಡ ಲಾಗಾಯಿತ್ತಿನಿಂದಲೂ ಅನೇಕ ಶಬ್ದಗಳನ್ನು ಕೊಳ್ಳುತ್ತಲೇ ಬಂದಿದೆ. ಆರ್ಯರು, ಗ್ರೀಕರು, ರೋಮನ್ನರು, ಪಾರಸಿಕರು, ಯವನ, ಪೋರ್ಚುಗಿಸರು, ಫ್ರೆಂಚರು, ಇಂಗ್ಲಿಷರು ಮೊದಲಾದವರ ಸಂಪರ್ಕ ಕನ್ನಡಿಗರಿಗಿತ್ತು. ಜೊತೆಗೆ ಅಕ್ಕಪಕ್ಕದ ದ್ರಾವಿಡ ಭಾಷೆಗಳು ಮತ್ತು ಮರಾಠಿ ಮೊದಲಾದ ಭಾಷೆಗಳು ವ್ಯಾಪಾರ ಸಂಬಂಧಗಳ ಮೂಲಕ ಕನ್ನಡದ ಮೇಲೆ ಪ್ರಭಾವ ಬೀರಿದ ಕಾರಣ ಕನ್ನಡ ಅನೇಕ ಪದಗಳನ್ನು ಅನಾಯಾಸವಾಗಿ ಸ್ವೀಕರಿಸಿದೆ.
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿಯ ಎಂಟನೆಯ ಬರಹ

Read More

ಸಾದೃಶಾಭಾಸ ಪದಗಳೊಂದಿಗೆ ಸೆಣಸಾಟ: ಸುಮಾವೀಣಾ ಸರಣಿ

ಮಕ್ಕಳಿಗೆ ಕನ್ನಡ ಪುಸ್ತಕವನ್ನು ಓದುವುದೆಂದರೆ ಬಹಳ ತ್ರಾಸಿನ ಕೆಲಸ. ಕಾರ್ಟೂನನ್ನು ನೋಡಿದ ಗುಂಗಿನಲ್ಲಿ ಇದ್ದ ಮಗುವೊಂದು ಸಭಾಸದ ಎಂದೋದಲು ಸಬಾಸ್ಟಿಯನ್ ಎಂದು ಓದಿದ್ದು ನೆನಪಾಗುತ್ತದೆ. ಎಲೆ ಅಡಿಕೆ ಮೆಲ್ಲುತ್ತಿದ್ದ ಎಂದು ಓದಬೇಕಾದ್ದನ್ನು ಎಲೆ ಅಡಿಕೆ ಮೇಯುತ್ತಿದ್ದ ಎಂದರೆ ಆಭಾಸವೇ ತಾನೆ! ರಂಗ ನಾಯಕಿ > ಲಂಗನಾಯಕಿ, ಆಸ್ಥಾನದ ದಾಸಿ ಹಾಸನದ ಆಶ ಆಂದರೆ ರಕ್ಷಿಸ ಬೇಕು ಎನ್ನಲು ಹೋಗಿ ರಸ್ಕ್ ಬೇಕು ಎಂದರೆ ಎಲ್ಲಿಕೊಡಕ್ಕಾಗುತ್ತೆ?
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿಯ ಏಳನೆಯ ಬರಹ

Read More

ಊರುಗಳ ಹೆಸರಿನ ಸುತ್ತ: ಸುಮಾವೀಣಾ ಸರಣಿ

ವಾರದ ಸಂತೆ ಆಗುವ ಅದೇ ದಿನದ ಹೆಸರುಗಳು ಊರುಗಳಾಗಿವೆ. ಸೋಮವಾರಪೇಟೆ, ಶನಿವಾರಸಂತೆ, ಶುಕ್ರವಾರಸಂತೆ ಇತ್ಯಾದಿಗಳು. ‘ಅಂಗ’ಡಿ ಎಂಬ ಹೆಸರನ್ನು ಕಡೆಯಲ್ಲಿ ಹೊಂದಿರುವ ಬೆಳ್ತಂಗಡಿ, ಉಪ್ಪಿನಂಗಡಿ, ಹಳೆಯಂಗಡಿ, ಹಟ್ಟಿಯಂಗಡಿ ಎಂಬ ಊರುಗಳಿವೆ. ‘ಅಂಗಡಿ’ ಎನ್ನುವ ಹೆಸರಿಗೂ ಹೊಯ್ಸಳ ಸಾಮ್ರಾಜ್ಯಕ್ಕೂ ಅವಿನಾಭಾವ ನಂಟು. ಇದಕ್ಕೂ ಅನನ್ಯ ಹೆಸರಿನ ಊರುಗಳಿವೆ. ರಸ್ತೆಯಲ್ಲಿರುವ ಪಾಲವನ್ನು ಸೇರಿಸಿಕೊಂಡು ಜೋಡುಪಾಲವೆಂದೂ ಕರೆಯುತ್ತಾರೆ. ‘ಪಾಲ’ ಅಂದರೆ ಸಂಕ /ಕಾಲುಸಂಕ ಅರ್ಥಾತ್ ಚಿಕ್ಕ ಸೇತುವೆ ಎಂದರ್ಥ.
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿಯ ಆರನೆಯ ಬರಹ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ