Advertisement
ರಂಜಾನ್ ದರ್ಗಾ

ಕನ್ನಡದ ಹಿರಿಯ ಲೇಖಕರು ಮತ್ತು ಪತ್ರಕರ್ತರು. ಬಂಡಾಯ ಕಾವ್ಯದ ಮುಂಚೂಣಿಯಲ್ಲಿದ್ದವರು. ವಿಜಾಪುರ ಮೂಲದ ಇವರು ಧಾರವಾಡ ನಿವಾಸಿಗಳು. ಕಾವ್ಯ ಬಂತು ಬೀದಿಗೆ (ಕಾವ್ಯ -೧೯೭೮), ಹೊಕ್ಕಳಲ್ಲಿ ಹೂವಿದೆ (ಕಾವ್ಯ), ಸಾಹಿತ್ಯ ಮತ್ತು ಸಮಾಜ, ಅಮೃತ ಮತ್ತು ವಿಷ, ನೆಲ್ಸನ್ ಮಂಡೇಲಾ, ಮೂರ್ತ ಮತ್ತು ಅಮೂರ್ತ, ಸೌಹಾರ್ದ ಸೌರಭ, ಅಹಿಂದ ಏಕೆ? ಬಸವಣ್ಣನವರ ದೇವರು, ವಚನ ಬೆಳಕು, ಬಸವ ಧರ್ಮದ ವಿಶ್ವಸಂದೇಶ, ಬಸವಪ್ರಜ್ಞೆ, ನಡೆ ನುಡಿ ಸಿದ್ಧಾಂತ, ಲಿಂಗವ ಪೂಜಿಸಿ ಫಲವೇನಯ್ಯಾ, ಜಾತಿ ವ್ಯವಸ್ಥೆಗೆ ಸವಾಲಾದ ಶರಣರು, ಶರಣರ ಸಮಗ್ರ ಕ್ರಾಂತಿ, ಬಸವಣ್ಣ ಮತ್ತು ಅಂಬೇಡ್ಕರ್, ಬಸವಣ್ಣ ಏಕೆ ಬೇಕು?, ಲಿಂಗವಂತ ಧರ್ಮದಲ್ಲಿ ಏನುಂಟು ಏನಿಲ್ಲ?, ದಾಸೋಹ ಜ್ಞಾನಿ ನುಲಿಯ ಚಂದಯ್ಯ (ಸಂಶೋಧನೆ) ಮುಂತಾದವು ಅವರ ಪ್ರಕಟಿತ ಕೃತಿಗಳಾಗಿವೆ.  ಕರ್ನಾಟಕ ಸರ್ಕಾರದ ರಾಷ್ಟ್ರೀಯ ಬಸವ ಪುರಸ್ಕಾರ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಗೌರವ ಪ್ರಶಸ್ತಿ ಮುಂತಾದ ೫೨ ಪ್ರಶಸ್ತಿಗಳಿಗೆ ಭಾಜನರಾದ ರಂಜಾನ್ ದರ್ಗಾ ಅವರು ಬಂಡಾಯ ಸಾಹಿತ್ಯ ಪರಂಪರೆಯ ಶಕ್ತಿಶಾಲಿ ಕವಿಗಳಲ್ಲಿ ಒಬ್ಬರು. ಅಮೆರಿಕಾ, ನೆದರ್‌ಲ್ಯಾಂಡ್ಸ್, ಲೆಬನಾನ್, ಕೆನಡಾ, ಫ್ರಾನ್ಸ್, ಆಸ್ಟ್ರೇಲಿಯಾ ಸೇರಿದಂತೆ ಇನ್ನೂ ಹಲವು ದೇಶಗಳಲ್ಲಿ ಶರಣ ಸಂಸ್ಕೃತಿ, ಶಾಂತಿ ಮತ್ತು ಮಾನವ ಏಕತೆ ಕುರಿತು ಉಪನ್ಯಾಸ ನೀಡಿದ್ದಾರೆ.

ಮರುಭೂಮಿಯ ತುರಗ ಲಹರಿ: ಅಚಲ ಸೇತು ಬರಹ

ನಾವಿರುವ ನೆವಾಡಾ ರಾಜ್ಯವು ದೇಶದಲ್ಲೇ ಅತಿ ಹೆಚ್ಚು ಮಸ್ಟಾಂಗ್ ಕುದುರೆಗಳನ್ನು ಹೊಂದಿರುವ ರಾಜ್ಯವಾಗಿದೆ. ಐವತ್ತು ಸಾವಿರಕ್ಕೂ ಹೆಚ್ಚು ಕಾಡು ಕುದುರೆಗಳು ಅತ್ಯಂತ ವಿಸ್ತಾರವಾದ ‘ಹಿಂಡು ನಿರ್ವಹಣ ಪ್ರದೇಶ’ ಗಳಲ್ಲಿ ತಮ್ಮ ಪಾಡಿಗೆ ತಾವು ಇತರ ಕಾಡು ಪ್ರಾಣಿಗಳಂತೆ ಓಡಾಡಿಕೊಂಡಿವೆ. ಇವುಗಳನ್ನು ಹಿಡಿಯುವುದು ಹಾಗು ಕೊಲ್ಲುವುದು ಕಾನೂನುಬಾಹಿರ.
ಕುದುರೆಗಳ ಕುರಿತು ಅಚಲ ಸೇತು ಬರಹ ನಿಮ್ಮ ಓದಿಗೆ

Read More

ವೇಗಸ್ಸಿನಿಂದ ವಿಂಬಲ್ಡನ್‌ವರೆಗೆ: ಅಚಲ ಸೇತು ಬರಹ

ಫ್ರೆಂಚ್‌ ಓಪನ್ ಪಂದ್ಯಾವಳಿಯ ಕಡೆಯ ಆಟದಲ್ಲಿ ಅದೇನಾಯಿತೋ ಏನೋ ಟೋಫನ್ ಸರಿಯಾಗೇ ಕೂರದೆ ಕೆಳಗೆ ಜಾರುವಂತಾಗುತ್ತಿತ್ತು. ಪ್ರಾಣಪದಕವಾಗಿದ್ದ ತನ್ನ ಇಮೇಜನ್ನು ಕಾಪಾಡಿಕೊಳ್ಳುವ ಸಲುವಾಗಿ ಅತ್ತಿಂದಿತ್ತ ಜೋರಾಗಿ ಓಡಾಡಲು ಹೆದರಿ ಪ್ರತಿಷ್ಠಿತ ಚಾಂಪಿಯನ್ಷಿಪ್ಪನ್ನೇ ಕೈಬಿಟ್ಟಿದ್ದ! ಅದು ಅಂದಿನ ಕತೆ. ಗಂಭೀರವಾದ ಮನ ಮಂಥನದ ಮೂಲಕ ತನ್ನತನವ ಅಪ್ಪಿಕೊಳ್ಳುವ ಪ್ರಕ್ರಿಯೆಯ ಭಾಗವಾಗಿ ಅಳಿದುಳಿದ ಕೂದಲಿನ ಬೊಕ್ಕ ತಲೆಯನ್ನು ಚೊಕ್ಕವಾಗಿ ಬೋಳಿಸಿಕೊಂಡು ಸಾರ್ವಜನಿಕವಾಗಿ ಓಡಾಡತೊಡಗಿದ.
ಟೆನ್ನಿಸ್‌ ತಾರೆ ಲಾಸ್‌ ವೇಗಸ್‌ ಮೂಲದ ಆಂಡ್ರೆ ಅಗಸಿಯ ಕುರಿತ ಅಚಲ ಸೇತು ಬರಹ ನಿಮ್ಮ ಓದಿಗೆ

Read More

ಮರುಭೂಮಿಯಲ್ಲಿ ಮರುಕಳಿಸುವ ಹುಂಬತನದ ಹಂಬಲಗಳು: ಅಚಲ ಸೇತು ಬರಹ

ಏರಿಯಾದ ಹತ್ತಿರದ ಹಳ್ಳಿಯಲ್ಲಿ ಮನೆ ಮಾಡಿಕೊಂಡು ಡ್ರೋನ್ ಹಾರಿಸಿ ಸೆರೆಹಿಡಿದ ದೃಶ್ಯಗಳನ್ನು ಅಂತರ್ಜಾಲದ ಪುಟಕ್ಕೆ ಮಿನ್ನೇರಿಸುತ್ತಿದ್ದ ನೆವಾಡಾ ನಿವಾಸಿಯ ಲ್ಯಾಪ್ಟಾಪ್, ಡ್ರೋನ್ ಮತ್ತಿತರ ಸಲಕರಣೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡರು. ಹೀಗೆ ಅದಮ್ಯ ಕುತೂಹಲ ತಡೆಯಲಾರದೆ ಎಲ್ಲೆ ಮೀರಿ ವರ್ತಿಸುವರಿಗೆ, ಡ್ರೋನ್ ಹಾರಿಸಿ, ಕ್ಯಾಮೆರಾ ಮೂತಿಯನ್ನು ಬೇಲಿಯ ತೂತಿಗೆ ತೂರಿಸಿ ಒಳಗೆ ಇಣುಕಿ ನೋಡುವ ಚಪಲ ಚನ್ನಿಗರಾಯರಿಗೆ ದೊಡ್ಡ ಮೊತ್ತದ ದಂಡ ಹಾಗು ದೀರ್ಘ ಕಾಲದ ಕಾರಾಗೃಹ ಸಜೆಯಾಗಿದೆ.
ಅಚಲ ಸೇತು ಬರಹ ನಿಮ್ಮ ಓದಿಗೆ

Read More

ಮದುವೆ ಮದುವೆ ಆ ಸಿಹಿ ಪದವೆ: ಅಚಲ ಸೇತು ಬರಹ

ಅಡುಗೆಮನೆಯ ಸಿಹಿತಿಂಡಿಯ ಡಬ್ಬಕ್ಕೆ ಮುತ್ತಿಗೆ ಹಾಕುವ ಇರುವೆಗಳ ಹಾಗೆ ಮದುವೆಯಾಗಬಯಸುವ ಸಾಲು ಸಾಲು ಮದುಮಕ್ಕಳ ಸಂತೆ ನೆರೆಯಿತು. ರಾತ್ರಿ ಹನ್ನೆರಡು ಗಂಟೆಯೊಳಗೆ ತಮಗೆ ಮದುವೆ ಪರವಾನಗಿ ದೊರಕಬೇಕು ಎಂದು ಕೂಗುತ್ತ ಒಳ ನುಗ್ಗಲು ತಳ್ಳಾಡುತ್ತಿದ್ದ ವಧುವರರ ವರ್ತನೆ ವಿಚಿತ್ರವಾಗಿತ್ತು.
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ

Read More

ಭೂಗತ ದೊರೆಗಳು ಬೆಳೆಸಿದ ಲಾಸ್ ವೇಗಸ್: ಅಚಲ ಸೇತು ಬರಹ

ಕ್ಯಾಲಿಫೋರ್ನಿಯಾದಲ್ಲಿ ಮಾದಕ ಪದಾರ್ಥಗಳ ಕಳ್ಳ ಸಾಗಾಣಿಕೆ, ಸುಪಾರಿ ಕೊಲೆ, ಸುಲಿಗೆಗಳನ್ನು ಯಶಸ್ವಿಯಾಗಿ ನಿಭಾಯಿಸುತ್ತಾ ಮೇಲಿನವರ ಪ್ರಶಂಸೆಗೆ ಪಾತ್ರನಾದ. ಹಾಲಿವುಡ್ ತಾರೆಯರ ತೋಳಿನಲ್ಲಿ ತೋಳು ಬೆರೆಸಿ ಓಡಾಡಿದ. ಅಷ್ಟೊತ್ತಿಗಾಗಲೇ ನೆವಾಡಾ ತನ್ನ ರಾಜ್ಯಾದಾಯ ಹೆಚ್ಚಿಸಿಕೊಳ್ಳುವ ಸಲುವಾಗಿ ಜೂಜು ಅಡ್ಡೆಗಳನ್ನು ಸಂವಿಧಾನಾತ್ಮಕವಾಗಿ ಅಂಗೀಕರಿಸಿತ್ತು.
ಅಮೆರಿಕಾದ ಲಾಸ್‌ ವೇಗಸ್‌ ನಗರದ ಇತಿಹಾಸದ ಕುರಿತು ಅಚಲ ಸೇತು ಬರಹ ನಿಮ್ಮ ಓದಿಗೆ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ