Advertisement
ರಂಜಾನ್ ದರ್ಗಾ

ಕನ್ನಡದ ಹಿರಿಯ ಲೇಖಕರು ಮತ್ತು ಪತ್ರಕರ್ತರು. ಬಂಡಾಯ ಕಾವ್ಯದ ಮುಂಚೂಣಿಯಲ್ಲಿದ್ದವರು. ವಿಜಾಪುರ ಮೂಲದ ಇವರು ಧಾರವಾಡ ನಿವಾಸಿಗಳು. ಕಾವ್ಯ ಬಂತು ಬೀದಿಗೆ (ಕಾವ್ಯ -೧೯೭೮), ಹೊಕ್ಕಳಲ್ಲಿ ಹೂವಿದೆ (ಕಾವ್ಯ), ಸಾಹಿತ್ಯ ಮತ್ತು ಸಮಾಜ, ಅಮೃತ ಮತ್ತು ವಿಷ, ನೆಲ್ಸನ್ ಮಂಡೇಲಾ, ಮೂರ್ತ ಮತ್ತು ಅಮೂರ್ತ, ಸೌಹಾರ್ದ ಸೌರಭ, ಅಹಿಂದ ಏಕೆ? ಬಸವಣ್ಣನವರ ದೇವರು, ವಚನ ಬೆಳಕು, ಬಸವ ಧರ್ಮದ ವಿಶ್ವಸಂದೇಶ, ಬಸವಪ್ರಜ್ಞೆ, ನಡೆ ನುಡಿ ಸಿದ್ಧಾಂತ, ಲಿಂಗವ ಪೂಜಿಸಿ ಫಲವೇನಯ್ಯಾ, ಜಾತಿ ವ್ಯವಸ್ಥೆಗೆ ಸವಾಲಾದ ಶರಣರು, ಶರಣರ ಸಮಗ್ರ ಕ್ರಾಂತಿ, ಬಸವಣ್ಣ ಮತ್ತು ಅಂಬೇಡ್ಕರ್, ಬಸವಣ್ಣ ಏಕೆ ಬೇಕು?, ಲಿಂಗವಂತ ಧರ್ಮದಲ್ಲಿ ಏನುಂಟು ಏನಿಲ್ಲ?, ದಾಸೋಹ ಜ್ಞಾನಿ ನುಲಿಯ ಚಂದಯ್ಯ (ಸಂಶೋಧನೆ) ಮುಂತಾದವು ಅವರ ಪ್ರಕಟಿತ ಕೃತಿಗಳಾಗಿವೆ.  ಕರ್ನಾಟಕ ಸರ್ಕಾರದ ರಾಷ್ಟ್ರೀಯ ಬಸವ ಪುರಸ್ಕಾರ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಗೌರವ ಪ್ರಶಸ್ತಿ ಮುಂತಾದ ೫೨ ಪ್ರಶಸ್ತಿಗಳಿಗೆ ಭಾಜನರಾದ ರಂಜಾನ್ ದರ್ಗಾ ಅವರು ಬಂಡಾಯ ಸಾಹಿತ್ಯ ಪರಂಪರೆಯ ಶಕ್ತಿಶಾಲಿ ಕವಿಗಳಲ್ಲಿ ಒಬ್ಬರು. ಅಮೆರಿಕಾ, ನೆದರ್‌ಲ್ಯಾಂಡ್ಸ್, ಲೆಬನಾನ್, ಕೆನಡಾ, ಫ್ರಾನ್ಸ್, ಆಸ್ಟ್ರೇಲಿಯಾ ಸೇರಿದಂತೆ ಇನ್ನೂ ಹಲವು ದೇಶಗಳಲ್ಲಿ ಶರಣ ಸಂಸ್ಕೃತಿ, ಶಾಂತಿ ಮತ್ತು ಮಾನವ ಏಕತೆ ಕುರಿತು ಉಪನ್ಯಾಸ ನೀಡಿದ್ದಾರೆ.

ನಿರಾಡಂಬರ ಕಥನ ಕ್ರಮದಲ್ಲಿ ಸಾಗುವ ‘ಸೂತ್ರಧಾರ..’

“ಫಣೀಂದ್ರನ ಗಲಿಬಿಲಿ ಸಂಸಾರ, ಕಾಣದ ಕೈ, ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ, ಹೃದಯಾಂತರಾಳದಲಿ, ತ್ಯಾಗ, ದೊಡ್ಡವರೆಲ್ಲ ಜಾಣರಲ್ಲ, ಕಂದಾ ನೀ ನಗುತಿರು ಮತ್ತು ಸೂತ್ರಧಾರ ಮತ್ತು ಇತರ ಕಥೆಗಳು ಇಲ್ಲಿ ತಮ್ಮ ವಸ್ತು ವಿಷಯಗಳಿಂದ ಗಮನ ಸೆಳೆಯುತ್ತವೆ. ಹೃದಯಾಂತರಾಳದಲ್ಲಿ ಮತ್ತು ಕಂದ ನೀನು ನಗುತಿರು ಕತೆಗಳು ಮಾನವೀಯತೆಯ ಆರ್ದ್ರವಾದ ದನಿಯನ್ನು ಬಿಂಬಿಸಿದರೆ, ದೂರದ ಬೆಟ್ಟ ಮತ್ತು ಕಾಣದ ಕೈಗಳು ಆ ಬಾಳಿನ ಸಹಜವಾದ ಚಿತ್ರವನ್ನು ನೆಚ್ಚಿಕೊಂಡಿವೆ.”
ಶೈಲಜಾ ಸುರೇಶ್‌ ರಾವ್‌ ನಾಯಕ್ ಕಥಾ ಸಂಕಲನಕ್ಕೆ ವಾಸುದೇವ ನಾಡಿಗ್‌ ಬರೆದ ಮುನ್ನುಡಿ

Read More

ದಾಟಿ ಹೋಗುವುದಷ್ಟೇ: ವಾಸುದೇವ ನಾಡಿಗ್‌ ಬರೆದ ಹೊಸ ಕವಿತೆ

“ಜೀವಿಸಲು ಬರುವುದಕ್ಕೂ
ವಾಸಿಸಲು ಬರುವುದಕ್ಕೂ ಅಂತರವಿದೆ
ಜೀವಿಸಿ ಹೊರಡುವ ಬದಲು
ವಾಸಿಸಿದೆವು ಬೆಂಕಿ ಹಾಸಿದೆವು
ಅತಿಥಿಗಳಷ್ಟೆ ಈ ಇಳೆಗೆ
ತೆಪ್ಪಗೆ ಹೊರಡಬೇಕಿತ್ತು
ನಿಲ್ದಾಣವ ನರಕಮಾಡಿದೆವು”- ವಾಸುದೇವ ನಾಡಿಗ್‌ ಬರೆದ ಹೊಸ ಕವಿತೆ

Read More

ವಾಸುದೇವ ನಾಡಿಗ್ ಬರೆದ ಕವಿತೆ

“ಬಿರಿದ ಭೂಮಿ ಬಿಂಬ ಹಿಮ್ಮಡಿ
ಸವೆದ ದಾರಿಯ ಗೆರೆ ಬೆನ್ನಲಿ
ಇರುಳ ಅರಿಯದ ಕಣ್ಣೊಳಗೆ
ನಾಡಿನ ಕ್ಷುಬ್ಧ ಕಡಲು
ಒಡಲು ಕನಲುವ ನಕ್ಷೆ
ಸಂತೆ ಜನರ ಕಾಲ್ತುಳಿತ ಎದೆ
ಒಂದು ಎಲ್ಲರ ನೂಲಲಿ ಪೋಣಿಸಲಾಗದ ನೋವು”- ವಾಸುದೇವ ನಾಡಿಗ್ ಬರೆದ ಕವಿತೆ

Read More

ರವೀಂದ್ರಕುಮಾರ್ ಈವರೆಗಿನ ಕಾವ್ಯದ ಕುರಿತು ವಾಸುದೇವ್ ನಾಡಿಗ್ ಬರಹ

“ಕವಿತೆಗಳ ಕುರಿತ ಚರ್ಚೆಯೇ ಹಾಗೆ. ವೃಥಾ ತಲೆಚಚ್ಚಿಕೊಳ್ಳುತ್ತೇವೆ. ಕವಿತೆಯ ಶರೀರ ಆತ್ಮ ರಸ ರೀತಿ ಶೈಲಿ ದನಿ ಔಚಿತ್ಯ ಅಂತ. ಆದರೆ ನಿಜವಾದ ಕವನ ಅಲ್ಲೆಲ್ಲೋ ಮರೆಯಲ್ಲಿ ನಿಂತು ಮುಗುಳ್ನಗುತ್ತಿರುತ್ತದೆ. ಯಾರ ಕೈಗೂ ತಾನು ಸಿಗದೇ ಕಣ್ಣು ಮಿಟುಕಿಸುವ ತುಂಟ ಶಾಮನ ಹಾಗೆ. ಕೈಗೂ ಸಿಗದೇ ಕಣ್ಣಿಗೂ ಸಿಗದೇ ನುಣುಚಿಕೊಳ್ಳುವ ಮಾಯಾಂಗನೆ ಹಾಗೆ. ಕವಿತೆಯ ಸ್ವರೂಪ ಮತ್ತು ವ್ಯಾಕಪತೆ ಕುರಿತ…”

Read More

ವಾಸುದೇವ ನಾಡಿಗ್ ಬರೆದ ಎರಡು ಹೊಸ ಕವಿತೆಗಳು

“ಅವನು ಸಂತೆಯ ಹುಸಿಯನು ಬಿಡಿಸಲು
ಕೂತು ಸಂತನಾದ
ಪ್ರೀತಿಯನು ಹಾಸಿಕೊಟ್ಟು ಒಂಟಿಯಾದ
ಅವನ ಕರವಸ್ತ್ರದಲಿ ರಂಗು ರಂಗು ಚಿತ್ತಾರಗಳೆಲ್ಲ
ಕರಗಿ ಹೋಗಿವೆ ಬರೀ ಕಣ್ಣೀರು ಅಂಟಿವೆ”- ವಾಸುದೇವ ನಾಡಿಗ್ ಬರೆದ ಎರಡು ಹೊಸ ಕವಿತೆಗಳು

Read More
  • 1
  • 2

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ