ಆಸ್ಟ್ರೇಲಿಯನ್ ಬನ್ನಿಂಗ್ಸ್ ಸಂಸ್ಕೃತಿ: ವಿನತೆ ಶರ್ಮ ಅಂಕಣ
ರಜೆ ಮುಗಿದು ಕೆಲಸಕ್ಕೆ ವಾಪಸ್ಸಾದ ಸಹೋದ್ಯೋಗಿಗಳನ್ನು ‘ರಜೆಯಲ್ಲಿ ಏನೇನು ಮಾಡಿದಿರಿ’ ಎಂದು ಕೇಳುವುದು ಜನವರಿ ತಿಂಗಳ ಮೊದಲವಾರದ ಅತ್ಯಂತ ಮುಖ್ಯವಾದ ಕೆಲಸ. ಇದನ್ನು ಯಾರೂ ಮರೆಯುವಂತಿಲ್ಲ. ಹಾಗೆ ಕೇಳಿ ಅವರು-ನಾವು ಹೇಳುವ, ಹಂಚಿಕೊಳ್ಳುವ ಕಥೆಗಳು ರೋಚಕವೂ, ರಂಜನೀಯವೂ ಆಗಿರುತ್ತದೆ. ಈ ಬಾರಿ ಯಾತಕ್ಕೋ ಕೆಲವರು ರಜೆಯೆಲ್ಲ ಮನೆ ರಿಪೇರಿ ಕೆಲಸದಲ್ಲೇ ಕಳೆಯಿತು ಎಂದು ಉದ್ಗಾರವೆಳೆದರು. ಸ್ವಂತ ಮನೆಯಿದ್ದರೆ ನಾವು ಮಾಡುವ ರಿಪೇರಿ ಕೆಲಸಗಳಿಗೆ ಕೊನೆ-ಮೊದಲಿರುವುದಿಲ್ಲ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”