ಹೊಳೆಯೊಂದು ಹರಿದ್ಹಾಂಗೆ…..: ಸುಧಾ ಆಡುಕಳ ಅಂಕಣ
ತಮ್ಮೂರಿನ ಹೊಳೆಗೂ ಒಂದು ಪುರಾಣವಿರುವುದು ತಿಳಿದು ನೀಲಿಗೆ ಬಹಳ ಖುಶಿಯಾಯಿತು. ಮರುಕ್ಷಣವೇ ಇನ್ನಿಲ್ಲವಾಗುತ್ತಿರುವ ಹೊಳೆಯ ನೆನಪಾಗಿ ವಿಷಾದ ಆವರಿಸಿತು. ಅವಳ ಇತಿಹಾಸದ ಶಿಕ್ಷಕರು ಕಾಣೆಯಾಗಿರುವ ನದಿಗಳ ಬಗೆಗೆ ಎಷ್ಟೊಂದು ವಿಷಯಗಳನ್ನು ಹೇಳಿದ್ದರು. ತಮ್ಮೂರಿನ ಹೊಳೆ ಹೋಗಿ ಸೇರುವ ನದಿಯೆಲ್ಲಿಯಾದರೂ ಕಾಣೆಯಾದರೆ ಅದೊಂದು ವಿದ್ಯಮಾನವಾಗಿ ಉಳಿಯುತ್ತದೆ. ಹೊಳೆ ಕಾಣೆಯಾದರೆ ಹೇಳಹೆಸರಿಲ್ಲದೇ ಮರೆಯಾಗಿಬಿಡುತ್ತದೆ. ಹೀಗೆಲ್ಲ ಯೋಚನೆಗಳು ರಾತ್ರಿಯಿಡೀ ಅವಳನ್ನು ಕಾಡತೊಡಗಿದವು.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣದ ಇಪ್ಪತ್ತೈದನೆಯ ಹಾಗೂ ಕೊನೆಯ ಕಂತು ನಿಮ್ಮ ಓದಿಗೆ