ನೆದರ್‌ಲ್ಯಾಂಡ್ಸ್ ರಾಜಕಾರಣ- ಒಂದು ಅಪೂರ್ಣ ಅನುಬಂಧ: ಕೆ. ಸತ್ಯನಾರಾಯಣ ಪ್ರವಾಸ ಸರಣಿ
ನಾಗರಿಕರನ್ನು ಸಾಕಬೇಕು, ಪೋಷಿಸಬೇಕು ಎನ್ನುವುದಕ್ಕಿಂತ ಹೆಚ್ಚಾಗಿ, ಅವರನ್ನು ಸಬಲಗೊಳಿಸಬೇಕು, ಅವರು ಸರ್ಕಾರ, ರಾಜ್ಯದ ಮೇಲೆ ಅವಲಂಬಿತರಾಗದ ಹಾಗೆ ನೋಡಿಕೊಳ್ಳಬೇಕು, ಹಾಗಾದಾಗ ಮುಂದೆ ಅವರೇ ದೇಶದ ಆರ್ಥಿಕ-ಸಾಮಾಜಿಕ ಅಭಿವೃದ್ಧಿಯ ಕಡೆ ಗಮನ ಹರಿಸುತ್ತಾರೆ ಎಂಬುದು ಈ ಸಮಾಜದ ನಿಲುವು. ಉನ್ನತ ಮಟ್ಟದ ರಾಷ್ಟ್ರೀಯ ಆದಾಯ, ತಲಾವಾರ್ಷಿಕ ಆದಾಯದ ಹಂತವನ್ನು ತಲುಪಿದ ದೇಶದಲ್ಲಿ ಮಾತ್ರ ಇದು ಸಾಧ್ಯ. ಶ್ರೀಮಂತರು, ಚಕ್ರವರ್ತಿಗಳು ಇಲ್ಲವೆಂದಿಲ್ಲ.
ಕೆ. ಸತ್ಯನಾರಾಯಣ ಬರೆಯುವ ಪ್ರವಾಸ ಪ್ರಬಂಧಗಳ “ನೆದರ್‌ಲ್ಯಾಂಡ್ಸ್ ಬಾಣಂತನ” ಸರಣಿಯ ಕೊನೆಯ ಬರಹ