ಡಾ. ಗೀತಾ ಶೆಣೈ ಅನುವಾದಿಸಿರುವ “ಅದೃಷ್ಟ” ಕಾದಂಬರಿಯ ಒಂದು ಅಧ್ಯಾಯ
ಇದನ್ನು ಯಾರು, ಯಾವಾಗ ಕಟ್ಟಿಸಿದರೋ? ಯಾವ ತಲೆಕೆಟ್ಟ ಮನುಷ್ಯ ಇದರ ವಿನ್ಯಾಸ ರೂಪಿಸಿದನೋ? ಮೂರು ಮನೆವಾಳ್ತೆಗಳು ಇರಲು ಅನುಕೂಲವಾಗುವ ಹಾಗೆ ಹೇಗೇಗೋ ಕೋಣೆಗಳನ್ನು ಹೊಂದಿಸಿ ಈ ಕಾವಲುಮನೆಯನ್ನು ಕಟ್ಟಲಾಗಿದೆ. ಆದರೆ ಇದಕ್ಕೆ ಸರಿಯಾದ ಕಿಟಿಕಿಗಳಾಗಲೀ, ಬಾಗಿಲುಗಳಾಗಲೀ ಇಲ್ಲ. ಕೆಲವು ಕೋಣೆಗಳಲ್ಲಿಯಂತೂ ನಡುಮಧ್ಯಾಹ್ನವೂ ಕತ್ತಲೆ ತುಂಬಿರುತ್ತದೆ. ಇದಕ್ಕೆ ಸುಣ್ಣಬಣ್ಣ ಬಳಿದಿರುವುದು ಯಾವ ಕಾಲಕ್ಕೋ.
ಕೊಂಕಣಿ ಲೇಖಕ ಮಹಾಬಳೇಶ್ವರ ಸೈಲ್ ಅವರ ಕಾದಂಬರಿಯನ್ನು ಡಾ. ಗೀತಾ ಶೆಣೈ “ಅದೃಷ್ಟ” ಎಂಬ ಶೀರ್ಷಿಕೆಯಲ್ಲಿ ಕನ್ನಡಕ್ಕೆ ಅನುವಾದಿಸಿದ್ದು, ಅದರ ಒಂದು ಅಧ್ಯಾಯ ನಿಮ್ಮ ಓದಿಗೆ