Advertisement

Tag: ಅಂಜಲಿ ರಾಮಣ್ಣ

ನೆತ್ತರ ಇತಿಹಾಸ ಕೇಳಿ, ಕೈಬಿಟ್ಟ ಬಳೆಗಳು

ಜಯದ್ವಾರದಿಂದ ಒಳಹೊಕ್ಕು ಲೋಹದ್ವಾರದಿಂದ ಹೊರಬರುವ ವ್ಯವಸ್ಥೆಯಿರುವ ಈ ಕೋಟೆ ಅನ್ನೋ ಮತ್ತೊಂದು ಜಗತ್ತನ್ನು ಅನುಭವಿಸೋದಕ್ಕೆ ಅದೆಷ್ಟು ಪುನರ್ಭೇಟಿಗಳು ಬೇಕೋ ಅಂದುಕೊಳ್ಳುತ್ತಾ, ಇತಿಹಾಸದೊಳಗಿನ ಯಾನದಾನಂದದಿಂದ ಹಗುರವಾಗಿದ್ದ ಮೈಮನಸು ಹೊತ್ತು ಕಲ್ಲು ಹಾಸಿನ ಗುಂಟ ಹೆಜ್ಜೆಯಿಡುತ್ತಾ ಹೊರ ಬರುತ್ತಿದ್ದೆ. ತಕ್ಷಣ ನನ್ನ ಬಲಗೈ ತುದಿಗಣ್ಣಿಗೆ ಕಂಡದ್ದು ಅಚ್ಚಕೆಂಪಿನ ಹದಿನೈದು ಜೊತೆ ಹಸ್ತಗಳ ಗುರುತು ಗೋಡೆಯ ಮೇಲೆ!
‘ಕಂಡಷ್ಟೂ ಪ್ರಪಂಚ’ ಪ್ರವಾಸ ಅಂಕಣದಲ್ಲಿ ಜೋಧ್‌ಪುರ ಪ್ರವಾಸದ ಕುರಿತು ಬರೆದಿದ್ದಾರೆ ಅಂಜಲಿ ರಾಮಣ್ಣ

Read More

ಬಂಗಾಳಕೊಲ್ಲಿಯ ಮೂಗುತಿ ವಜ್ರ ಅಂಡಮಾನ್‌

ಸಮುದ್ರದೆದುರು ನಾವೆಲ್ಲರೂ ಗುಬ್ಬಚ್ಚಿಗಳಂತೆ ಹಾರಾಡೋ ಹಕ್ಕಿಗಳು, ಒಮ್ಮೆ ನೀಲಿ ಮತ್ತೊಮ್ಮೆ ಕೆಂಪಾದ ಆಕಾಶ, ಕನಸಿನಲೋಕಕ್ಕೆ ಜಾರುಬಂಡಿಯಾಗೋ ನುಣುಪು ಪಾಚಿ ಕಟ್ಟೆಗಳು, ಎಲ್ಲಿಯೂ ಕಾಣದ ಆದಿವಾಸಿಗಳು, ಹೂವು ಮುಡಿದು ಓಡಾಡೋ ತಮಿಳು-ಬೆಂಗಾಳಿ ಹೆಣ್ಮಕ್ಕಳು, ಎಂದಿನಂತೆ ಏನೇನೋ ಧಾವಂತಹೊತ್ತ ಚಡಪಡಿಸೋ ಗಂಡಸರು, ಬೆರಳುಗಳು ಬೆಸಗೊಂಡಂತೆ ಇಷ್ಟಿಷ್ಟೇ ದೂರದಲ್ಲಿ ಅಂಟಿಕೊಂಡಿರೋ ಚಿಕ್ಕ ಚಿಕ್ಕ ದ್ವೀಪಗಳು, ಭೂಮಿಯೊಂದಿಗಿನ ರೋಮ್ಯಾನ್ಸ್‌ಗಾಗಿಯೇ ಹುಟ್ಟೋ ಸೂರ್ಯ ಇದು ಅಂಡಮಾನ್!
ಅಂಡಮಾನ್‌ ಪ್ರವಾಸದ ಕುರಿತು ಬರೆದಿದ್ದಾರೆ ಅಂಜಲಿ ರಾಮಣ್ಣ

Read More

‘ಒಬ್ಬ ಸಾಮಾನ್ಯನೂ ರಾಮನೇ ಆಗಬಹುದು’

ಚಿಕ್ಕಮಗಳೂರಿನಲ್ಲಿ  ಬಾಬಾಬುಡನ್ ಗಿರಿಗೆ ತೆರಳಿ ದತ್ತಪೀಠದ ದರ್ಶನ ಪಡೆಯುವುದೊಂದು ಪ್ರೀತಿಯ ವಿಚಾರ. ಆದರೆ ಜನಜಂಗುಳಿಯ ನಡುವೆ ಕಿರಿದಾದ ಹಾದಿಯಲ್ಲಿ ಒಂದೊಂದೇ ಹೆಜ್ಜೆಯಿಟ್ಟು ಹೋದ ಬಳಿಕ ಮನಸ್ಸು ಮುದುಡಿದಂತಾಯಿತು. ನಿರಾಳವಾದ ವಾತಾವರಣದಲ್ಲಿ ಈ ಪರಿಸರವನ್ನು ಕಣ್ತುಂಬಿಕೊಂಡ ಬಾಲ್ಯದ ಕ್ಷಣಗಳು ನೆನಪಾದವು.  ಅಲ್ಲಿಂದ ಕೋದಂಡ ರಾಮ ಸೀತಾದೇವಿ ಮತ್ತು ಲಕ್ಷ್ಮಣನೊಡನೆ ತ್ರಿಭಂಗಿಯಲ್ಲಿ ನಿಂತಿರುವ ದೇವಸ್ಥಾನಕ್ಕೆ ತೆರಳಿದಾಗ ಅಲ್ಲೊಂದು ಸುಂದರವಾದ ವಿವರಣೆ ಸಿಕ್ಕಿತು. ಚಿಕ್ಕಮಗಳೂರು ಪ್ರವಾಸದ ನೆನಪುಗಳ ಬುತ್ತಿಯನ್ನು ಉಣಬಡಿಸಿದ್ದಾರೆ ಅಂಜಲಿ ರಾಮಣ್ಣ.

Read More

ಮಾರ್ಟಿನ್ ಲೂಥರ್ ಕಿಂಗ್ ನೆನಪಿನಲ್ಲಿ ಹಾಕಿದ ಹೆಜ್ಜೆಗಳು

ನಾನು ವಿದೇಶದಲ್ಲಿರುವ ಪರದೇಶಿ ಎನ್ನಿಸಲಿಲ್ಲ. ಅಮೆರಿಕ  ದೇಶವನ್ನು ನೋಡುವ ದೃಷ್ಟಿಕೋನವೇ ಬದಲಾಯ್ತು. ಆ ದಿನ ನನ್ನುಸಿರಿಗೆ ಉಸಿರು ಕೊಟ್ಟ ಮಾರ್ಟಿನ್. ನನಗೀಗ ಜೀವನ ಬೇಕು ಅನಿಸಲು ಶುರುವಾಯ್ತು. ಒಳಗಿನ ಕಣ್ಣು ಇಂಚಿಂಚೇ ತೆರೆಯ ಹತ್ತಿತು. ಮುಂದಿನ ಎಲ್ಲಾ ದಿನಗಳ ಪ್ರಯಾಣದಲ್ಲಿ ಅಲ್ಲಿನ ಎಲ್ಲೆಡೆಯಲ್ಲೂ ಕೆಳಮಟ್ಟದ ಕೆಲಸ ಎಂದು ಗುರುತಿಸಲ್ಪಟ್ಟಿರುವ ಎಲ್ಲಾ ಕೆಲಸಗಳನ್ನು ಕಪ್ಪು ಜನರೇ ಮಾಡುತ್ತಿದ್ದದ್ದು ಎದ್ದು ಕಾಣುತ್ತಿತ್ತು. ಬಿಳಿಯರ ಜೊತೆಗೆ ತಮ್ಮನ್ನು ಗುರುತಿಸಿಕೊಳ್ಳಬೇಕೆನ್ನುವ ಹಪಾಹಪಿ ಅವರಲ್ಲಿ ಇನ್ನೂ ಜೀವಂತವಿರುವುದನ್ನು ಕಂಡೆ.
‘ಕಂಡಷ್ಟು ಪ್ರಪಂಚ’ ಪ್ರವಾಸ ಅಂಕಣದಲ್ಲಿ ಅಂಜಲಿ ರಾಮಣ್ಣ ಬರಹ

Read More

ಟ್ಯಾಗೋರರ ಮನೆಯಂಗಳದಲ್ಲಿ ಕಂಡ ಸತ್ಯಗಳು

ತಮ್ಮ 77ನೇ ಹುಟ್ಟುಹಬ್ಬದಂದು ಟ್ಯಾಗೋರರು ಇದೇ ಮನೆಯಿಂದ ’ಜನಮ್ ದಿನ್’ ಎನ್ನುವ ತಮ್ಮ ಕವಿತೆಯನ್ನು ಆಕಾಶವಾಣಿಯ ನೇರ ಪ್ರಸಾರದಲ್ಲಿ ಓದಿದ್ದರು. ದೇಶದ ಮೊಟ್ಟಮೊದಲ ನೇರ ಪ್ರಸಾರ ಆಕಾಶವಾಣಿಯಲ್ಲಿ ಅದಾಗಿತ್ತು. ಆದರೀಗ ಆ ಮನೆ ಇಳಿ ವೇಳೆಯ ಎಲ್ಲಾ ಅಪರ ಕೃತ್ಯಗಳಿಗೆ ಚಾವಡಿಯಾಗಿದೆಯೆಂದು ತಿಳಿಯಿತು. ಎಷ್ಟು ಆಸಕ್ತಿ ಉತ್ಸಾಹದಿಂದ ಅಲ್ಲಿಗೆ ಬಂದಿದ್ದೆನೋ ಅಷ್ಟೇ ಮನನೊಂದು ಅಲ್ಲಿ ನಿಂತಿದ್ದೆ. ಅಂಜಲಿ ರಾಮಣ್ಣ ಬರಹ 

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ