Advertisement

Tag: ಅರುಣ್ ಜೋಳದಕೂಡ್ಲಿಗಿ

ತುಡುಗುತನಕ್ಕಂಟಿದ ನಂಬಿಕೆಯ ಲೋಕ

ಈ ಕತೆ ಸಿಕ್ಕಿದ್ದು ಬಾಲೆಹೊಸೂರಿನಲ್ಲಿ. ಇದರ ವಿವರಗಳನ್ನು ನೋಡಲಾಗಿ ಈ ಊರಿನಲ್ಲಿಯೇ ‘ದ್ಯಾಮವ್ವ’ ಪೂಜೆಗೊಳ್ಳುತ್ತಾಳೆ. ಹೀಗಾಗಿ ಇಲ್ಲಿನ ತುಡುಗು ಮಂದಿಯೇ ಈ ಕಥೆಯ ನಾಯಕರಿರಬಹುದು. ಇದು ಸೃಷ್ಟಿ ಕತೆಯಲ್ಲ ಆದರೆ ಈಗಾಗಲೇ ಇರುವ ಸಮುದಾಯದ ಪ್ರವೃತ್ತಿಯನ್ನು ಬೆಂಬಲಿಸಿ ಪಾರುಮಾಡುವ ಕತೆಯಾಗಿದೆ. ಅಂತೆಯೇ ಸಮುದಾಯ ದೈವಗಳ ಜತೆ ಹೊಂದಿದ್ದ ಅವಿನಾಬಾವ ಸಂಬಂಧವನ್ನು ಕೂಡ ಸೂಚಿಸುತ್ತದೆ. ಅಂತೆಯೇ ದ್ಯಾಮವ್ವ ತಮ್ಮನ್ನು ಪೊರೆಯುತ್ತಾಳೆ…

Read More

ಗಂಟಿಚೋರರೇ ನೆನಪಿಟ್ಟುಕೊಂಡ ಕಥನಗಳಲ್ಲಿದೆ ಚರಿತ್ರೆ

ಸೇಟ್‌ಜೀ ಒಬ್ಬರು ಬೆಂಗಳೂರಿನಿಂದ ಮುಂಬೈಗೆ ಹೆಚ್ಚುವರಿ ಗೋಲ್ಡ್ ಬಿಸ್ಕೆಟ್ ಸಾಗಿಸುವ ಮಾಹಿತಿ ಸಂಗ್ರಹಿಸಿ ಪ್ಲಾನ್ ಮಾಡಿದಂತೆ ಅವರೆಲ್ಲ ಸೇರಿ ‘ರಾಬರಿ’ ಮಾಡಿದರು. ಎಲ್ಲವೂ ಪ್ಲಾನ್ ಪ್ರಕಾರವೇ ನಡೆಯಿತು, ಆದರೆ ತಪ್ಪಿಸಿಕೊಳ್ಳುವಾಗ ಈ ಟೀಮಿನ ಇಬ್ಬರು ಸಿಕ್ಕಿಹಾಕಿಕೊಂಡರು.  ಮರುದಿನ ದೊಡ್ಡ ಸುದ್ದಿಯಾಯಿತು. ಸಿಕ್ಕಿಹಾಕಿಕೊಂಡ ಸದಸ್ಯರು ಕಳ್ಳತನದ ಕುರಿತು ಬಾಯಿಬಿಡಲಿಲ್ಲ. ಆಗ ಪೊಲೀಸರೊಂದು ಉಪಾಯ ಮಾಡಿ, ಬಂಧಿತರನ್ನು ಬಿಡುಗಡೆ ಮಾಡಲು ನಿರ್ಧರಿಸಿದರು. ಮುಂದೇನಾಯಿತು ?
‘ಗಂಟಿಚೋರರ ಕಥನಗಳು’ ಸರಣಿಯಲ್ಲಿ ಡಾ.ಅರುಣ್ ಜೋಳದ ಕೂಡ್ಲಿಗಿ ಬರಹ. 

Read More

ಭಾರತ್ ಬ್ಲೇಡಿನ ಲಕ್ಷೆ ಮತ್ತು ಮನೆಕನ್ನದ ಕತೆಗಳು

ಮಹಿಳೆಯರು ಗಂಟಿಚೋರ್ ಸಮುದಾಯದ ಎಲ್ಲಾ ಸಂಗತಿಗಳಲ್ಲಿಯೂ ಪಾಲುದಾರರಾಗಿದ್ದರು. ತುಡುಗುತನದಲ್ಲಿಯೂ ಮಹಿಳೆಯರ ಪಾಲ್ಗೊಳ್ಳುವಿಕೆ ಕುತೂಹಲಕಾರಿಯಾಗಿದೆ. ಗುಂಪಾಗಿ ತುಡುಗು ಮಾಡುವುದಕ್ಕಿಂತ ಒಂಟಿಯಾಗಿ ತುಡುಗು ಮಾಡುವ ಪ್ರಮಾಣ ಹೆಚ್ಚಾಗಿತ್ತು. ಹಾಗಾಗಿ ಗಂಟಿಚೋರರ ತುಡುಗುತನದ ಪ್ರವೃತ್ತಿಯಲ್ಲಿ ಮಹಿಳೆಯರ ಪಾಲುದಾರಿಕೆ ವಿಶೇಷವಾಗಿದೆ. ಇವರಲ್ಲಿಯೂ ಪ್ರಾದೇಶಿಕವಾಗಿ ತುಂಬಾ ಪ್ರಸಿದ್ಧಿಯನ್ನು ಪಡೆದ ಮಹಿಳೆಯರೂ ಇದ್ದಾರೆ. ‘ಗಂಟಿಚೋರರ ಕಥನಗಳು’ ಸರಣಿಯಲ್ಲಿ ಅರುಣ್ ಜೋಳದ ಕೂಡ್ಲಿಗಿ ಬರೆದ ಬರಹ ಇಲ್ಲಿದೆ. 

Read More

ಗಂಟಿಚೋರರ ತುಡುಗಿನ ಲೋಕ

ಇದೊಂದು ಭಿನ್ನವಾದ ಕಳವು. ಮೊದಲೇ ಇಂತಹ ಊರಲ್ಲಿ ನಾಟಕ, ಬಯಲಾಟ ಅಥವಾ ಪಾರಿಜಾತ ನಡೆಯುವ ಸುದ್ದಿ ತಿಳಿದು, ಆ ನಾಟಕದ ರಾತ್ರಿ ಕಳ್ಳತನ ಮಾಡುವುದಕ್ಕೆ ಆಯಾ ಊರುಗಳಲ್ಲಿ ಮೊದಲೇ ಸುತ್ತಿ ಶ್ರೀಮಂತರ ಮನೆಗಳನ್ನು ಗುರುತು ಮಾಡಿ ತುಡುಗು ಮಾಡುತ್ತಿದ್ದರು. ಮುಖ್ಯವಾಗಿ ಹಿಂದೆ ಉತ್ತರ ಕರ್ನಾಟಕದಲ್ಲಿ ನಿರಂತರವಾಗಿ ನಾಟಕಗಳು ನಡೆಯುತ್ತಿದ್ದುದರಿಂದ ಇದರ ಲಾಭವನ್ನು ಗಂಟಿಚೋರರು ತುಡುಗು ಮಾಡಲು ಬಳಸುತ್ತಿದ್ದರು. ಅರುಣ್ ಜೋಳದ ಕೂಡ್ಲಿಗಿ ಬರೆಯುವ ಗಂಟಿಚೋರರ ಕಥನದ ಐದನೆಯ ಕಂತು ಇಲ್ಲಿದೆ.

Read More

ವಡ್ಡಾರಾಧನೆಯ ವಿದ್ಯುತ್ ಚೋರನೆಂಬ ರಿಸಿಯು ಗಂಟಿಚೋರನಿರಬಹುದೇ?

ಜೈನಧರ್ಮದ ಪಾರಮ್ಯವನ್ನು ಸಾರುವ ಕೃತಿಗಳು ಕಳ್ಳತನವನ್ನು ಪಾಪವೆಂದು ಹೇಳುತ್ತವೆ. ಈ ಹಿನ್ನೆಲೆಯನ್ನು ಗಮನಿಸುತ್ತಾ ಗಂಟಿಚೋರ್ ಸಮುದಾಯದ ಜತೆ ಇದನ್ನು ತಳಕುಹಾಕಿದರೆ ಕೆಲವು ಸಂಗತಿಗಳು ಹೊಳೆಯುತ್ತವೆ. ಜಿನಧರ್ಮ ಕಳ್ಳತನವನ್ನು ‘ಪಾಪ’ ಎನ್ನುವುದಕ್ಕೆ ಪೂರಕವಾಗಿ ಎಂಬಂತೆ ಗಂಟಿಚೋರ್ ಸಮುದಾಯದಲ್ಲಿ ‘ಪಾಪನೋರು’ ಎನ್ನುವ ಬೆಡಗೊಂದು ಇರುವುದನ್ನು ಗಮನಿಸಬಹುದು. ಈ ಬೆಡಗು ತಮ್ಮನ್ನು ‘ಪಾಪದವರು’ ಅಥವಾ ಜಿನಧರ್ಮದ ಪ್ರಕಾರ ‘ಪಾಪ ಕಾರ್ಯದಲ್ಲಿ’ ತೊಡಗಿದವರು ಎನ್ನುವುದರ ಸಾಂಕೇತಿಕವಾಗಿ ಬಂದಿರಬಹುದೇ…

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ