ಆರ್. ದಿಲೀಪ್ ಕುಮಾರ್ ಬರೆದ ಕೆಲವು ಕವಿತೆಗಳು
“ಧ್ಯಾನಕ್ಕೆ ಕೂತವನಿಗೆ
ಕಟ್ಟಿರುವೆ ಸಾಲು ಕಚ್ಚಿದಂತೆ
ನಿನ್ನ
ನೆನಪು”- ಆರ್. ದಿಲೀಪ್ ಕುಮಾರ್ ಬರೆದ ಕೆಲವು ಕವಿತೆಗಳು
Posted by ಆರ್. ದಿಲೀಪ್ ಕುಮಾರ್ | Mar 16, 2020 | ದಿನದ ಕವಿತೆ |
“ಧ್ಯಾನಕ್ಕೆ ಕೂತವನಿಗೆ
ಕಟ್ಟಿರುವೆ ಸಾಲು ಕಚ್ಚಿದಂತೆ
ನಿನ್ನ
ನೆನಪು”- ಆರ್. ದಿಲೀಪ್ ಕುಮಾರ್ ಬರೆದ ಕೆಲವು ಕವಿತೆಗಳು
Posted by ಆರ್. ದಿಲೀಪ್ ಕುಮಾರ್ | Mar 4, 2020 | ಅಂಕಣ |
“ಒಂದಷ್ಟು ಸೂಕ್ಷ್ಮವಾಗಿ ಗಮನಿಸಿದಾಗ ಪರಿಸರವನ್ನು ಕಟ್ಟಿಕೊಡುವ ಪಂಪನ ಕಲೆ ಬಹುಮುಖ್ಯವಾಗುತ್ತದೆ. ಯಾವುದೇ ರಸವೂ ಅದು ಸ್ಪಷ್ಟವಾಗಿ ಗ್ರಹಿಕೆಗೆ ಬರುವುದು ಅಲ್ಲಿನ ಪರಿಸರದ ಆಧಾರದ ಮೇಲೆ. ಇಲ್ಲಿ ಕತ್ತಲಾಗಿದೆ, ಪೆಂಡವಾಸದ ಮನೆಯ ಮುಂದೆ ಹೋಗುತ್ತಿದ್ದಾನೆ, ಮಬ್ಬು ಗತ್ತಲು, ಬಾಗಿಲ ಮುಂದೆ ಜಗುಲಿಗಳ ಮೇಲೆ ಕುಳಿತಿರುವವರು, ಅಲ್ಲಿನ ಬಣ್ಣ ಕಪ್ಪು ಮಿಶ್ರಣ ಹಸಿರು. ಹೀಗೆ ಒಂದು ಸಂದರ್ಭದ ಬಹುಮುಖ್ಯ ಅಂಶಗಳೇ ಗಮನ ಸೆಳೆದು ಬಿಡುತ್ತದೆ.”
Read MorePosted by ಆರ್. ದಿಲೀಪ್ ಕುಮಾರ್ | Feb 20, 2020 | ಅಂಕಣ |
“ಹೀಗೆ ಮಾಡಿದ ಪ್ರತಿಜ್ಞೆಯನ್ನ ಕೊನೆಗಾಣಿಸಿ ಯುದ್ಧರಂಗದಲ್ಲಿ ಅವನಾಡುವ ಮಾತು ಬಹಳ ಮುಖ್ಯವಾಗುತ್ತದೆ. ಅದರಲ್ಲಿಯೂ ದುಶ್ಯಾಸನನನ್ನು ಕೊಂದು ಅವಳ ಮುಡಿಯನ್ನು ಕಟ್ಟುವುದು, ಕಟ್ಟಿ ನೋಡಿ ನಗುವುದು ಇಲ್ಲಿನ ಬಹು ಮುಖ್ಯವಾದ ಭಾಗ. ಆ ಪದ್ಯವಂತೂ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಬಹು ಚರ್ಚಿತವಾಗಿದೆ. ಪಂಪನೇ ದ್ರೌಪತಿಯನ್ನು ಕಾರ್ಯ ಕಾರಣದ ಮೂಲ ಅಂಶವಾಗಿ ನಿಲ್ಲಿಸಿ ನೋಡಿರುವುದಕ್ಕೆ ಈ ಪದ್ಯ ಸಾಕ್ಷಿಯಾಗಿದೆ…”
Read MorePosted by ಆರ್. ದಿಲೀಪ್ ಕುಮಾರ್ | Feb 5, 2020 | ಅಂಕಣ |
“ದ್ರೌಪತಿಯನ್ನು, ಸುಭದ್ರೆಯನ್ನು, ಹಿಡಿಂಬೆಯೊಂದಿಗೆ ಭೀಮನ ಸಂಬಂಧವನ್ನು ವರ್ಣಿಸುವಾಗ ಇದ್ದ ಒಂದು ಮಿತಿ ಇಲ್ಲಿ ಮೀರಿದೆ. ಕಾವ್ಯ ಸಂವಿಧಾನ ಮತ್ತು ಕಾವ್ಯದ ಬಂಧ ಅದನ್ನು ಒಪ್ಪುತ್ತದೆ. ಸುಭದ್ರೆಯನ್ನು ನೋಡಿದ ತಾಪ ಪರಿಹಾರಕ್ಕೆ ಅಂದಿನ ರಾತ್ರಿಯೇ ಅರ್ಜುನ ಊರು ಸುತ್ತುವುದು ಇಲ್ಲಿನ ಮುಖ್ಯ ಭಾಗ. ಆದರೆ ಹೋಗುವಾಗ ಅವನಿಗಷ್ಟೇ ಕಾಣುವ ವೇಶ್ಯೆಯರನ್ನು ತೋರಿಸದೆ ಓದುಗರಿಗೂ ಕಾಣಿಸುವಂತೆ ಮಾಡುವುದನ್ನು ನೋಡಿ ಪಂಪನ ರಸಿಕತೆಗೆ…”
Read MorePosted by ಆರ್. ದಿಲೀಪ್ ಕುಮಾರ್ | Jan 23, 2020 | ಅಂಕಣ |
“ಬೇಟೆಯಾಡಲು ಬಂದ ಶಂತನುವಿಗೆ ಬಹಳ ದೂರದಲ್ಲಿಂದಲೇ ಯೋಜನಗಂಧಿಯ ದೇಹದಿಂದ ಬರುತ್ತಿದ್ದ ವಾಸನೆ ಸೆಳೆಯುತ್ತದೆ. ಮೊದಲೇ ಬಳಲಿದ್ದವನು ಆ ವಾಸನೆಗೆ ಮರುಳಾಗಿ ದುಂಬಿಯಂತೆ ಅದನ್ನರಸಿ ಬರುತ್ತಾನೆ. ಬರುವಾಗಲೇ ಆ ಮಧುವಿನ ವಾಸನೆಗೆ ಸೋತವನು, ಎಳೆ ಜಿಂಕೆಯ ಹಾಗೆ ಕಣ್ಣುಗಳು ಇರುವವಳನ್ನು ಕಂಡು, ಕಂಡೊಡನೆ ಒಲಿದು, ಸತ್ಯ ಸಾಬೀತುಪಡಿಸಲು ಹಿಡಿಯುವ ದಿಬ್ಯದ ಹಾಗೆ ಅವಳನ್ನು ಹಿಡಿದು ಮಾತು ಪ್ರಾರಂಭ ಮಾಡುತ್ತಾನೆ.”
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ