ಇಷ್ಟುಕಾಲ ಒಟ್ಟಿಗಿದ್ದು….
ಅವಳು ಚಿಕ್ಕವಳಿದ್ದಾಗ ಎರಡು ಮೂರು ಸಲ ಈ ಕಥೆಯನ್ನು ಕೇಳಿದ್ದಳು. ಅವಳ ಅಜ್ಜನ ಅಜ್ಜನ ಅಜ್ಜನ ಅಜ್ಜನ ಮನೆಯಲ್ಲಿ ತಂದೆತಾಯಿ ಇಲ್ಲದ, ಸಂಬಂಧಿಕರ ಒಂದು ಹೆಣ್ಣು ಮಗಳಿದ್ದಳಂತೆ. ಆಶ್ರಯವಿಲ್ಲದೆ ಇವರ ಮನೆ ಸೇರಿದ್ದ ಹುಡುಗಿ ಅವಳು. ಆಗಿನ ಸಂಪ್ರದಾಯದಂತೆ ಮೈನೆರೆಯುವ ಮೊದಲು ಹೆಣ್ಣುಮಕ್ಕಳ ಮದುವೆ ಮಾಡಿಬಿಡಬೇಕು. ಹಾಗೊಂದು ವೇಳೆ ಮದುವೆಗೆ ಮೊದಲೇ ಹೆಣ್ಣು ಮಗು ನೆರೆದರೆ, ಮನೆತನಕ್ಕೆ ಕೆಟ್ಟದ್ದು ಎಂದು ಅವಳನ್ನು ಊರಾಚೆ, ಕಾಡಿನಲ್ಲಿ ಬಿಟ್ಟು ಬಂದುಬಿಡುತ್ತಿದ್ದರಂತೆ. ಆದರೆ ಅಷ್ಟು ಸುಲಭವೆ ಹೊಟ್ಟೆಯ ಕೂಸನ್ನು ಕಾಡಿನಲ್ಲಿ ಬಿಡುವುದು?
ಎನ್. ಸಂಧ್ಯಾ ರಾಣಿ ಹೊಸ ಕಾದಂಬರಿ “ಇಷ್ಟುಕಾಲ ಒಟ್ಟಿಗಿದ್ದು” ಯಿಂದ ಆಯ್ದ ಭಾಗ ನಿಮ್ಮ ಓದಿಗೆ