ಎಸ್. ದಿವಾಕರ್ ಕವನ ಸಂಕಲನಕ್ಕೆ ರಾಜೇಂದ್ರ ಚೆನ್ನಿ ಬರೆದ ಮುನ್ನುಡಿ
ಇಪ್ಪತ್ತನೆಯ ಶತಮಾನದಿಂದ ಹಿಂಸೆಯೇ ಸ್ಥಾಯಿಯಾಗಿ ಬದುಕೇ ಅಸಂಗತ, ಅಸಾಧ್ಯ ಸತ್ಯವಾಗಿ ಬಿಟ್ಟಿದೆ. ಇಂತಹದರಲ್ಲಿ ಕಾವ್ಯ ಏನು ಮಾಡಬೇಕು? ಉತ್ತರ ಕಾವ್ಯಕ್ಕೆ ಗೊತ್ತಿಲ್ಲ. ಕವಿ ಪ್ರಯತ್ನ, ಪ್ರಯೋಗ ಮಾಡುತ್ತಲೇ ಇರಬೇಕು. ನೋವಿನ, ಹಿಂಸೆಯ ಕ್ಷೋಭೆ, ಅಸ್ಥಿರತೆ ಅನಿಶ್ಚಿತತೆಗೆ ವಿರುದ್ಧವಾದ ಭಾಷೆಯ ಪಾರದರ್ಶಕತೆ, ಧ್ವನಿಗಳ ಲಯಗಾರಿಕೆ ಮತ್ತು ಬಿಂಬಗಳ ಖಚಿತತೆಯ ಮೂಲಕ ಹೇಳುವುದನ್ನು ಹೇಳಬೇಕು. ಅಸಹಜವಾದ ಅನುಭವವನ್ನು ಅಪಾರ ಸಹಜತೆಯ ಕಾವ್ಯಭಾಷೆಯನ್ನು ಶೋಧಿಸಿಕೊಂಡು ಬರೆಯಬೇಕು. ಇದನ್ನು ದಿವಾಕರರ ಕಾವ್ಯವು ಸಾಧಿಸಿದೆ. ಅವರ ಈ ಸಂಕಲನದ ಒಂದು ಕವಿತೆಯು ಪ್ರಾಸದ ಬಗ್ಗೆ ಇದೆ.
ಎಸ್. ದಿವಾಕರ್ ಬರೆದ ವಿಧಾನಸಭೆಯಲ್ಲೊಂದು ಹಕ್ಕಿ ಕವನ ಸಂಕಲನಕ್ಕೆ ರಾಜೇಂದ್ರ ಚೆನ್ನಿ ಬರೆದ ಮುನ್ನುಡಿ