ಇಲ್ಲಿ ಸೋಲೂ ಇದೆ, ಗೆಲುವೂ ಇದೆ…: ಕಾರ್ತಿಕ್ ಕೃಷ್ಣ ಸರಣಿ
ಅಂಕಗಳು ಸೋರಿಹೋಗುತ್ತಿದ್ದರೂ ಎದೆಗುಂದದೆ ಆಡುತ್ತಿದ್ದ ಮೆರಿನ್ ಕೆಲವೇ ಘಳಿಗೆಯಲ್ಲಿ ನೋವನ್ನು ತಾಳಲಾರದೆ ಮತ್ತೆ ಕುಸಿದಳು. ಈ ಬಾರಿ ಬಿಕ್ಕಿ ಬಿಕ್ಕಿ ಅಳುತ್ತಿದ್ದ ಅವಳ ನೋವಿಗೆ ಇಡೀ ಕ್ರೀಡಾಂಗಣ ಮರುಗುತ್ತಿತ್ತು. ಕುಸಿದಲ್ಲೇ ಅಳುತ್ತಿದ್ದ ಮೆರಿನ್‌ಳನ್ನು ತಬ್ಬಿ ಸಮಾಧಾನ ಮಾಡುತ್ತಿದ್ದ ಅವಳ ಕೋಚ್‌ಗೂ ಕೂಡ ತನ್ನ ಕಣ್ಣೀರನ್ನು ತಡೆಹಿಡಿಯಲಾಗಿರಲಿಲ್ಲ. ಎದುರಾಳಿ ಹೇ ಗೆ ತಾನು ಫೈನಲ್ ತಲುಪಿದ್ದಕ್ಕೆ ಖುಷಿಪಡುವುದೋ, ಅಥವಾ ಮೆರಿನ್‌ಳ ಸ್ಥಿತಿಯನ್ನು ನೋಡಿ ಮರುಗುವುದೋ, ಒಂದೂ ತಿಳಿಯದೆ ಮೆರೀನಳ ಬಳಿ ಬಂದು ವಿಷಾದದ ನೋಟ ಬೀರುತ್ತಾ ನಿಂತಿದ್ದಳು.
ಕಾರ್ತಿಕ್ ಕೃಷ್ಣ ಬರೆಯುವ “ಒಲಂಪಿಕ್ಸ್ ಅಂಗಣ” ಸರಣಿ