ಮಂಜುನಾಯಕ ಚಳ್ಳೂರು ಬರೆದ ಕತೆ “ಫೂ….”
ಆ ಹೊತ್ತು ಅವಳು ಹುಚ್ಚಿಯಂತೆ ಕಾಣುತ್ತಿದ್ದಳು ನನಗೆ. ಮುಖದ ತುಂಬ ಕೈಯಾಡಿಸಿದಳು. ತಲೆ ಸವರಿದಳು. ಯಾಕೋ ಎಷ್ಟೊತ್ತಾದರೂ ನನ್ನ ಬಿಡಲೇ ಇಲ್ಲ. ಅವ್ವ ಅಲ್ಲಿಂದಲೇ, `ಸಾಕ್ ಹೋಗು ಚಂದ್ರಪ್ಪಾ. ಬುಟ್ರ ಲಂಗದಾಗ್ ಸುರುಗ್ಸ್ಯಂತಾಳ್ ಈ ಅಡಾವುಡಿ ನಿನ್ನಾ…’ ಎಂದಳು. ಅತ್ತೆ, `ಯೇ ಮಂಗಾ.. ಬಾಯೈತಂತ ಏನೇನರ ಬೊಗಳ್ಬ್ಯಾಡ. ನನ ಹೊಟ್ಯಾಗ್ ಹುಟ್ಬೇಕಾದದ್ ಇದು. ತಪ್ಪಿ ನಿನ್ ಹೊಟ್ಯಾಗ್ ಹುಟ್ಟೇತಿ.’ ಎಂದುತ್ತರಿಸಿದಳು. ಆಗವಳ ಕೈಗಳು ನಡುಗುತ್ತಿದ್ದವು. ಕೆಂಡದಂತೆ ಬೆಚ್ಚಗಾಗಿದ್ದವು.
ಮಂಜುನಾಯಕ ಚಳ್ಳೂರು ಅವರ “ಫೂ..” ಕಥಾಸಂಕಲನದ ಶೀರ್ಷಿಕೆ ಕತೆ ನಿಮ್ಮ ಈ ಭಾನುವಾರದ ಓದಿಗೆ