Advertisement

Tag: ಕತೆ

ವೆಂಕಟೇಶ ಬಿ.ಎಂ. ಬರೆದ ಈ ಭಾನುವಾರದ ಕತೆ

ಈಗ ಗೋಡೆಯ ಮೇಲಿನ ಚಿತ್ರಗಳು ಬದಲಾಗಿ ವಿಶಾಲವಾದ ಸಮುದ್ರ ಗೋಚರಿಸತೊಡಗಿದೆ. ಸಮುದ್ರದ ನಟ್ಟನಡುವೆ ಹಡಗಿನಲ್ಲಿ ರಮೇಶ, ಶೇಖರ ಹಾಗೂ ಹೆಂಗಸೊಬ್ಬಳು ನಿಂತಿದ್ದಾರೆ! ಹೆಂಗಸಿನ ಅಣತಿಯನ್ನು ಶಿರಸಾವಹಿಸಿ ಪಾಲಿಸುವಂತೆ ರಮೇಶ, ಶೇಖರನನ್ನು ಹಡಗಿನಿಂದ ಸಮುದ್ರಕ್ಕೆ ದೂಡಿದ! ಉರವಣಿಸಿ ಬಂದ ಅಲೆಗಳು ಶೇಖರನನ್ನು ತಮ್ಮೊಳಗೆ ಕರಗಿಸಿಕೊಂಡವು. ಶೇಖರ ಇನ್ನಿಲ್ಲವಾದ! ‘ಇಲ್ಲಾ, ಇಲ್ಲಾ! ನಾನು ಮದುವೇನೇ ಆಗಲ್ಲ!’ ಎಂದು ಚೀರಿ ಕನಸಿನ ಭ್ರಮಾಲೋಕದಿಂದ ವಾಸ್ತವ ಪ್ರಪಂಚಕ್ಕೆ ಮರಳಿದ ರಮೇಶ!
ವೆಂಕಟೇಶ ಬಿ.ಎಂ. ಬರೆದ ಈ ಭಾನುವಾರದ ಕತೆ “ಸಹೋದರರ ಕನಸು” ಹೊಸ ವರ್ಷದ ಮೊದಲ ಓದಿಗೆ

Read More

ಫಾತಿಮಾ ರಲಿಯಾ ಬರೆದ ಈ ಭಾನುವಾರದ ಕತೆ

ರೂಡಿ ಯಾರು, ಏನು, ಎತ್ತ ಎಂಬುವುದು ಗೊತ್ತೇ ಇರದಿದ್ದರೂ ಯಾವುದೋ ಅಸಹಾಯಕತೆಯೊಂದು ಅವನನ್ನು ಇನ್ನಿಲ್ಲದಂತೆ ಕಾಡುತ್ತಿದೆ ಎಂದು ಅವಳಿಗೆ ಆಗಾಗ ಅನ್ನಿಸುತ್ತಿತ್ತು. ಪ್ರತಿ ಬೆಳಗೂ ‘ಈವತ್ತು ಹೇಗಾದರೂ ಸರಿ, ಅವನನ್ನು ಕೇಳಲೇಬೇಕು’ ಎಂಬ ಪ್ರತಿಜ್ಞೆಯೊಂದಿಗೆ ಹಾಸಿಗೆಯಿಂದ ಏಳುತ್ತಿದ್ದಳು. ಆದರೆ ಹಾಗೆ ಕೇಳಬೇಕೆಂದು ಹೊರಟಾಗೆಲ್ಲಾ ಗಂಟಲಲ್ಲಿ ಒಂದು ಮುಳ್ಳು ಸಿಕ್ಕಿಹಾಕಿಕೊಂಡಂತಾಗಿ ಕೇಳಲಾಗದೆ ಇದ್ದುಬಿಡುತ್ತಿದ್ದಳು. ಹೋಗಲಿ, ತಾನು‌ ನಲವತ್ತರ ಹೊಸ್ತಿಲು ದಾಟಿದವಳು…
ಫಾತಿಮಾ ರಲಿಯಾ ಬರೆದ ಕತೆ “ರೂಡಿ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

Read More

ಒಂದೇ ಮನೆಯ ಹಲವು ಮನಗಳು….

ಫೋನಿನಲ್ಲಿ ವಿನಯನ ಜತೆ ಮಾತಾಡುತ್ತಿದ್ದವನು ಅಲಿಶಾ ಉಸಿರಾಡುತ್ತಿದ್ದಾಳಾ? ಆಕೆ ಮಾತಾಡುತ್ತಿದ್ದಾಳಾ? ಮೂವತ್ತು ಸೆಕಂಡುಗಳ ಕಾಲ ಆಕೆಯ ಉಸಿರಾಟ ಮತ್ತು ನಾಡಿಬಡಿತ ನೋಡಿ ಹೇಳು ಎಂದು ಅವನ ಪ್ರೋಟೊಕಾಲಿನಲ್ಲಿದ್ದಂತೆ ವಿನಯನಿಗೆ ಹೇಳುತ್ತಿದ್ದ. ವಿನಯ ‘ನಾನೂ ಒಬ್ಬ ಡಾಕ್ಟರು. ನನ್ನ ಹೆಂಡತಿಯೂ ಡಾಕ್ಟರು. ಅವಳಿಗೇನೂ ಆಗಿಲ್ಲ. ಅವಳಿಗೆ ತಕ್ಷಣ ಹೆರಿಗೆಯಾಗಬೇಕು. ನೀನು ತಕ್ಷಣ ಆ್ಯಂಬುಲೆನ್ಸ್ ಕಳಿಸಲಿಲ್ಲ ಎಂದರೆ ನಾನೇ ಡ್ರೈವ್ ಮಾಡಿಕೊಂಡು ಆಸ್ಪತ್ರೆಗೆ ಹೋಗುತ್ತೇನೆ’…
ಗುರುಪ್ರಸಾದ್‌ ಕಾಗಿನೆಲೆ ಬರೆದ ನೀಳ್ಗತೆ “ಥ್ಯಾಂಕ್ಸ್‌ಗಿವಿಂಗ್”ನ ಏಳನೆಯ ಕಂತು ನಿಮ್ಮ ಓದಿಗಾಗಿ

Read More

ಶ್ರೀ ಡಿ.ಎನ್. ಬರೆದ ಈ ಭಾನುವಾರದ ಕತೆ

ಹೋಗಿ ನೋಡಿ ಅಪ್ಪನೆಂದು ಗುರುತು ಹಿಡಿದ. ಆತನ ಮೇಲಿದ್ದ ಕೋಪ ಆರಿರಲಿಲ್ಲ. ಜೀವನವಿಡೀ ಬೇರೆಯವರ ಪಾಪ ಕಳೆಯಲು ದಾನಗಳು ತೆಗೆದುಕೊಂಡು ಜಪತಪಗಳಲ್ಲಿ ಕಾಲ ಕಳೆಯುತ್ತಿದ್ದ ಅಪ್ಪ, ತನ್ನ ಅಪರಕರ್ಮವೂ ಸರಿಯಾಗಿ ಆಗದೆ ಯಾವುದೋ ತಿಳಿಯದ ನಗರದಲ್ಲಿ ಅನಾಥ ಹೆಣದಂತೆ ಬೂದಿಯಾಗಿದ್ದ. ಯಾರದೋ ಸಾವಿಗೆ ಗರುಡ ಪುರಾಣ ಓದುತ್ತಿದ್ದ ಅಪ್ಪ ಸತ್ತಾಗ ಅವನಿಗಾಗಿ ಯಾರೂ ಅದನ್ನು ಓದದಂತೆ ರಮೇಶ ನೋಡಿಕೊಂಡ.
ಶ್ರೀ ಡಿ.ಎನ್. ಬರೆದ ಕತೆ “ಪಾಪ”

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಕಂನಾಡಿಗಾ ನಾರಾಯಣ ಬರೆದ ಕತೆ

ಕಂತುಗಳನ್ನು ಸರಿಯಾಗಿ ಕಟ್ಟಲಿಲ್ಲವೆಂದು ಮನೆಯನ್ನು, ಕಾರನ್ನು ಮುಟ್ಟುಗೋಲು ಹಾಕಿಕೊಳ್ಳಲು ಬ್ಯಾಂಕಿನವರು ಬಂದಾಗ ಆಶ್ಚರ್ಯವೆಂಬಂತೆ ತಾನೇ ಮುಂದೆ ನಿಂತು ಅವನ್ನೆಲ್ಲಾ ಅವರಿಗೆ ಬಿಟ್ಟುಕೊಟ್ಟ. ಅಡ್ಡಬಂದ ಹೆಂಡತಿಗೆ, ‘ಇಲ್ಲಿಗೆ ಬರುವಾಗ ಏನನ್ನೂ ತಂದಿರಲಿಲ್ಲ, ಹೋಗುವಾಗಲೂ ಏನನ್ನೂ ತೆಗೆದುಕೊಂಡು ಹೋಗುವುದಿಲ್ಲ..
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಕಂನಾಡಿಗಾ ನಾರಾಯಣ ಬರೆದ ಕತೆ “ಜೀ ಗಾಂಧಿ” ನಿಮ್ಮ ಓದಿಗೆ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ