Advertisement

Tag: ಕನ್ನಡದ ಕತೆ

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಪ್ರಜ್ಞಾ ಮಾರ್ಪಳ್ಳಿ ಕತೆ

ಸೂರ್ಯನಿಗೋ ಯಾರು ಹುಟ್ಟಿದರೆಷ್ಟು? ಯಾರು ಸತ್ತರೆಷ್ಟು? ಅವನ ಕೆಲಸ ಅವನದ್ದೇ. ಬೆಳಗಿನ ಮೋಟಾರು ಗಾಡಿ ಬಂದು ಹೋದ ಸದ್ದಾಯಿತು. ಬಸವಣ್ಣನ ಅಣ್ಣನ ಮಗ ಮಲ್ಲೇಶ ಬಾಗಿಲಲ್ಲಿ ಬಂದು ನಿಂತಿದ್ದ. ನಿಧಾನಕ್ಕೆ ಬಸವಣ್ಣನ ಬಳಿಗೆ ಬಂದ. ಬೆನ್ನು ಸವರಿದ. ಅವರಿಬ್ಬರೆ ತಾನೆ ಗೋಪುವನ್ನು ಕೊನೆಯ ಬಾರಿಗೆ ನೋಡಿದವರು. ಕಾಣುತ್ತಿದ್ದಂತೇ ಕೈಜಾರಿ ಬಿದ್ದ ಗೋಪು ಅಪ್ಪಾ ಅಪ್ಪಯ್ಯಾ ಎಂದು ಕೂಗಿದ್ದೊಂದೇ ಗೊತ್ತು.
‘ನಾನು ಮೆಚ್ಚಿದ ನನ್ನ ಕತೆʼಯ ಸರಣಿಯಲ್ಲಿ ಪ್ರಜ್ಞಾ ಮಾರ್ಪಳ್ಳಿ ಕತೆ “ಭೂಮಿಯೊಳಗಿದೆ ಬದುಕು” ನಿಮ್ಮ ಓದಿಗೆ

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ನರೇಂದ್ರ ಪೈ ಕತೆ

ಈಗಲೂ ರಾತ್ರಿ ಎರಡೂವರೆ, ನಾಲ್ಕುಗಂಟೆಗೆಲ್ಲ ಒಮ್ಮೊಮ್ಮೆ ಎಚ್ಚರವಾದಾಗ ನಾನು ಆವತ್ತು ಎದೆ ಕಲ್ಲು ಮಾಡಿಕೊಂಡು ನಡೆದು ಬಂದುಬಿಟ್ಟ ಕ್ಷಣ ನೆನಪಾಗಿ ಇನ್ನು ಮಲಗುವುದು ಸಾಧ್ಯವೇ ಇಲ್ಲ ಎಂದು ಎದ್ದು ಕೂರುತ್ತೇನೆ. ಆವತ್ತು ನಾನು ಆ ಭಟ್ಟನ ಮಾತು ಕೇಳಿ ತಿರುಗಿ ನೋಡದೇ ಬಂದು ಬಿಡಬಾರದಾಗಿತ್ತು. ಅಷ್ಟು ಹತ್ತಿರದಿಂದ ಅಮ್ಮ, ಸುಚೀ, ಅಮ್ಮಿ ಮೂವರೂ ಸ್ಪಷ್ಟವಾಗಿ ನನ್ನನ್ನು ಕರೆದಿದ್ದು ಖಂಡಿತಾ ಸುಳ್ಳಲ್ಲ, ಭ್ರಮೆಯಲ್ಲ. ಅವರು ನನಗೆ ಮರಳಿ ಸಿಗುತ್ತಿದ್ದರೋ ಇಲ್ಲವೋ ಆ ಪ್ರಶ್ನೆ ಬೇರೆ.
‘ನಾನು ಮೆಚ್ಚಿದ ನನ್ನ ಕತೆ’ಯ ಸರಣಿಯಲ್ಲಿ ನರೇಂದ್ರ ಪೈ ಕತೆ “ಭೇಟಿ” ನಿಮ್ಮ ಓದಿಗೆ

Read More

ಎಸ್. ನಾಗಶ್ರೀ ಅಜಯ್ ಬರೆದ ಈ ಭಾನುವಾರದ ಕತೆ

ಆಹಹಹಾ, ಯಾಕಮ್ಮಣ್ಣಿ ಬಂದ್ಬಿಡು, ಅಯ್ಯೋ ಅಯ್ಯೋ ಅಯ್ಯೋ…., ಕೇಳಿಸ್ಕೊಂಡ್ಯೇನೋ ಕೆಪ್ರ, ಮನೆಹಾಳಿ, ಗೆಣಸು ಕೀಳು ಹೋಗು, ಚಿನಾಲಿ, ಚಂಗ್ಲು… ಹೀಗೆ ಅವಳ ಶಬ್ದಕೋಶದ ತುಂಬ ಆ ಪಾತ್ರದ ಮಾತುಗಳದ್ದೇ ಪಾರಮ್ಯ. ಕತ್ತೆ, ಕೋತಿ, ಗೂಬೆ ಎನ್ನುವ ಮೂರು ಪದದಿಂದಾಚೆ ಬೈಗುಳವೇ ಆಡಿ, ಕೇಳಿ ಗೊತ್ತಿಲ್ಲದ ಮನೆಯಲ್ಲಿ, ಇವಳ ಈ ಹೊಸ ವ್ಯಾಕರಣ, ಶಬ್ದಕೋಶ ಅಸಮಾಧಾನದ ಹೊಗೆ ಹಬ್ಬಿಸಿತ್ತು.
ಎಸ್ ನಾಗಶ್ರೀ ಅಜಯ್ ಬರೆದ ಈ ಭಾನುವಾರದ ಕತೆ “ಹೆಜ್ಜೆ ಮೂಡದ ಹಾದಿ” ನಿಮ್ಮ ಓದಿಗೆ

Read More

ಚಂದ್ರಶೇಖರ್‌ ಡಿ. ಆರ್.‌ ಬರೆದ ಈ ಭಾನುವಾರದ ಕತೆ

“ಈ ಘಟನೆಯಲ್ಲಿ ತಪ್ಪು ಅಂತ ಏನಾದರೂ ಇದ್ರೆ ಅದು ಒಬ್ಬರ ಖಾಸಗಿತನದ ಪರಿಧಿ ದಾಟಿ ನುಗ್ಗಿ ವಿಡಿಯೋ ಮಾಡಿದವರದ್ದು. ಅದು ನೈತಿಕವಾಗಿ ಅಷ್ಟೆ ಅಲ್ಲ ಕಾನೂನಾತ್ಮಕವಾಗಿಯೂ ತಪ್ಪು ಹಾಗೂ ಅಪರಾಧ. ಹೀಗಿದ್ದೂ ತಪ್ಪು ಮಾಡದೇ ಇರವವರೊಬ್ಬರನ್ನ ಪಿಜಿಯಿಂದ ಹೊರಗೆ ಹಾಕ್ತಿವಿ ಅಂತ ಬೆಂಕಿಗೆ ದೂಡಿದ್ದು ಆ ವಾರ್ಡನ್ ತಪ್ಪು. ಆ್ಯಕ್ಚುಲಿ ನಿಜ ಹೇಳಬೇಕೆಂದರೆ ಇವರು ನಮ್ಮ ನಿಮ್ಮ ಕೋಪಕ್ಕೆ ಅರ್ಹರು.”
ಚಂದ್ರಶೇಖರ್‌ ಡಿ. ಆರ್.‌ ಬರೆದ ಈ ಭಾನುವಾರದ ಕತೆ “ಪ್ರೈವೆಸಿ” ನಿಮ್ಮ ಓದಿಗೆ

Read More

ಪ್ರಶಾಂತ್ ಬೆಳತೂರು ಬರೆದ ಈ ಭಾನುವಾರದ ಕತೆ

ಲೋಲಿ ಮಾತ್ರ ತನ್ನ ಭಾವ ದೇವರೆಂದು ಅವನಿಲ್ಲದಿದ್ದರೆ ಈ ಮನೆ ಎಂದೋ ಸರ್ವನಾಶವಾಗಿ ಬಿಡುತ್ತಿತ್ತೆಂದೂ, ಮನೆಗೆ ಕೊಡಲಿ ಮಿತ್ತಾದ ಗಂಡನ ಹಾವಳಿಯಿಂದ ತಾನು ಪಟ್ಟ ಪರಿಪಾಟಲುಗಳನ್ನೆಲ್ಲಾ ಹೇಳುತ್ತಾ ಗಂಡ ತೀರಿ ಹೋದ ಮೇಲೆ ಹೆಣ್ಣೆಂಗಸು ಹೇಗೆ ತಾನೇ ಮನೆಯೊಗೆತನ ಮಾಡುತ್ತಾಳೆ?
ಪ್ರಶಾಂತ್‌ ಬೆಳತೂರು ಬರೆದ ಈ ಭಾನುವಾರದ ಕತೆ “ಹಂದಿಕಾಳನ ಸಿಂಗಿಯೂ..ಮತ್ತವನ ರಾಜಪರಿವಾರವೂ..!”

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ