Advertisement

Tag: ಕನ್ನಡ ಸಾಹಿತ್ಯ

ಇವತ್ತಿನಿಂದ “ಬೀದಿ ಜಗಳ ಮತ್ತು ಇತರೆ ಪ್ರಬಂಧಗಳು”

ಒಂದು ಭಾಷಣದ ಶೈಲಿಯಾಗಿ ಕೂಡ ಅಲವತ್ತುಕೊಳ್ಳುವಿಕೆ ಪರಿಣಾಮಕಾರಿಯಾದದ್ದು. ನೀವು ಸುಮ್ಮನೆ ಬೈದು ಭಾಷಣ ಮಾಡಿದರೆ, ವಿರೋಧಪಕ್ಷದ ನಾಯಕರಾಗಲು ಸಾಧ್ಯವಾಗುವುದಿಲ್ಲ. ದೇಶದ ಭವಿಷ್ಯ ಕುರಿತು, ಆಳುವಪಕ್ಷವನ್ನು ಕುರಿತು ಭೀಕರ ಭವಿಷ್ಯವನ್ನು ನುಡಿಯಬೇಕು.
ಕತೆಗಾರ ಕೆ. ಸತ್ಯನಾರಾಯಣ ಬರೆಯುವ “ಬೀದಿ ಜಗಳ ಮತ್ತು ಇತರೆ ಪ್ರಬಂಧಗಳು” ಪ್ರಬಂಧಗಳ ಸರಣಿ

Read More

ಬೆಂಕಿಯ ಮಳೆ

ಉಮಾ ಅವರಿದ್ದ ಓಣಿಯ ಬಳಿ ಹೋಗಿ ಒಬ್ಬ ಹೆಂಗಸನ್ನು ‘ಇಲ್ಲಿ ಉಮಾ ಅನ್ನೋರ ಮನೆ ಎಲ್ಲಿ ಬರತ್ತೆ?’ ಅಂತ ಕೇಳಿದೆ. ಅದಕ್ಕವರು ‘ಓಹ್, ಶಾಹೀನಾ ಬೇಗಂ ಮನೆನಾ? ಬನ್ನಿ ಬನ್ನಿ. ನಮ್ಮ ಮನೆ ಪಕ್ಕದ ಮನೆನೇ ಶಾಹೀನಕ್ಕನದು. ನನ್ನ ಹೆಸರು ನಾಗವೇಣಿ. ಅಕಿ ನನ್ನ ಗೆಣತಿ ಅದಾಳೆ.’ ಎನ್ನುತ್ತಾ ನನ್ನನ್ನ ಹಿಂಬಾಲಿಸಿ ಎಂಬುವಂತೆ ಮುಂದೆ ಮುಂದೆ ನಡೆದಳು. ಸ್ವಲ್ಪ ಹೊತ್ತು ನಡೆದ ಮೇಲೆ ಒಂದು ಪುಟ್ಟ ಜನತಾ ಮನೆಯಂತಿದ್ದ ಮನೆಯ ಮುಂದೆ ನಿಂತು ‘ಶಾಹೀನಕ್ಕ, ನಿನ್ನ ನೋಡೋಕೆ ಯಾರೋ ಬಂದಾರೆ…’ ಎಂದು ಕೂಗಿದಳು. ದಾದಾಪೀರ್‌ ಜೈಮನ್‌ ಬರೆಯುವ ಅಂಕಣ

Read More

ಮತ್ತೆ ಮಳೆ ಹೊಯ್ಯುತಿದೆ ಎಲ್ಲ ನೆನಪಾಗುತಿದೆ!

ಅನಂತಮೂರ್ತಿ ಬರೆಯುತ್ತಿದ್ದ ಪತ್ರಗಳನ್ನು ನಾನು ಜೋಪಾನವಾಗಿ ಇಡಬೇಕಿತ್ತು. ಎಂಥ ಪತ್ರಗಳವು! ಅವರು ಚೆನ್ನೈ ಹೋಗಿದ್ದಾಗ ಅಲ್ಲಿ ಅನಿರೀಕ್ಷಿತವಾಗಿ ಸುರಿದ ಮಳೆಯನ್ನು ನೆನೆದು ಪುಳಕಿತರಾಗಿ ನನಗೆ ಬರೆದ ಪತ್ರದಲ್ಲಿ ಒಂದು ಕವನವನ್ನೇ ಬರೆದು ಕಳುಹಿಸಿದ್ದರು: `ಮತ್ತೆ ಮಳೆ ಹೊಯ್ಯುತ್ತಿದೆ!’ ಒಮ್ಮೆ `ಓದು’ ಅಂತ ಗೋಪಾಲಕೃಷ್ಣ ಅಡಿಗರ `ಭೂಮಿಗೀತ’ ಕವನವನ್ನು ಕಳುಹಿಸಿಕೊಟ್ಟಿದ್ದರು. ಡಾ. ಪೃಥ್ವೀರಾಜ ಕವತ್ತಾರು ನಿರೂಪಣೆಯ ಎಸ್ತರ್ ಅನಂತಮೂರ್ತಿಯವರ ಆತ್ಮಕತೆ ‘ನೆನಪು ಅನಂತ’ ಕೃತಿಯ ಅಧ್ಯಾಯವೊಂದು ನಿಮ್ಮ ಓದಿಗೆ

Read More

ಕನ್ನಡ ವಿಮರ್ಶೆಯ ವಿವೇಕ: ಕೆಲವು ಮಾತುಗಳು

ಕನ್ನಡದ ಈ ಕಾಲದ ವಿಮರ್ಶೆ ಮೇಲ್ನೋಟಕ್ಕೆ ತನ್ನನ್ನು ‘ನವ್ಯೋತ್ತರ’ವೆನ್ನಬೇಕೋ ‘ಆಧುನಿಕೋತ್ತರ’ವೆನ್ನಬೇಕೋ, ‘ದಲಿತ ಬಂಡಾಯೋತ್ತರ’ ಎನ್ನಬೇಕೋ ಎಂಬ ಸ್ವನಿರೂಪಣೆಯ ಗೊಂದಲದಲ್ಲಿಯೇ ಸಿಲುಕಿದಂತೆ ಕಂಡರೂ, ಅದು ಕನ್ನಡ ವಿಮರ್ಶೆಯ ಕಾರ್ಯಸೂಚಿ ಎಷ್ಟು ಅನಿರ್ದಿಷ್ಟವಾಗಿದೆ ಎಂಬುದರ ಸೂಚಕವೂ ಆಗಿ ಕಾಣಿಸುತ್ತದೆ. ಈಚಿನ ದಶಕಗಳಲ್ಲಿ ಸಂಸ್ಕೃತಿ ಅಧ್ಯಯನ ಹಾಗೂ ಸ್ತ್ರೀವಾದಿ ವಿಮರ್ಶೆಯ ಮಾದರಿಗಳು ಪ್ರಭಾವಶಾಲಿಯಾಗಿ ಬೆಳೆದಿರುವುದು ನಿಜವಾಗಿದೆ. ಡಾ. ಎಸ್. ಸಿರಾಜ್ ಅಹ್ಮದ್  ತಮ್ಮ ಅಂಕಣದಲ್ಲಿ ಪ್ರಸ್ತಾಪಿಸಿದ್ದಾರೆ. 

Read More

ಹಲವು ಬಣ್ಣದ ಹಗ್ಗ: ಸುರೇಶ ನಾಗಲಮಡಿಕೆ ಪುಸ್ತಕದ ಕೆಲವು ಪುಟಗಳು

“ಬಹುದಿಕ್ಕುಗಳಿಂದ, ಬಹು ಅನುಭವಗಳಿಂದ ಬರುವ ಸತ್ಯಗಳೂ ಇಲ್ಲಿ ಮುಖ್ಯವೇ. ಒಂದು ಸಂಕಲನದಲ್ಲಿ ಒಂದು ಪದ್ಯ ಇಡೀ ಸಮಾಜಕ್ಕೆ ಕನ್ನಡಿ ಹಿಡಿದರೆ ಅಷ್ಟರ ಮಟ್ಟಿಗೆ ಅದು ಸಫಲ ಕವಿತೆಯೇ ಆಗಿರುತ್ತದೆ. ಇಂದಿನ ಜೀವನವೇ ಹಲ ಬಗೆಯ ಛಿದ್ರತೆ ಮತ್ತು ಕಣ್ಣೋಟಗಳಿಂದ ಕೂಡಿರುವಾಗ ಯಾವೊದೋ ಒಂದು ಬಗೆಯ ಬದುಕಿನ ದರ್ಶನವನ್ನು ಕಾಣುವುದಕ್ಕೇ ಹೇಗೆ ಸಾಧ್ಯ?”

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ