Advertisement

Tag: ಕಾವ್ಯಾ ಕಡಮೆ

ಈ ಹೃದಯವೆಂಬ ಏಕಾಂಗಿ ಬೇಟೆಗಾರ

ಕೆಲ್ಲಿಯವರ ಮಗಳು ಹನ್ನೆರಡು ವರ್ಷದ ಮಿಕ್‌ಳೊಂದಿಗೆ ಸಿಂಗರ್‌ನ ಸ್ನೇಹ ಶುರುವಾಗುತ್ತದೆ. ಸಂಗೀತದಲ್ಲಿ ತೀವ್ರ ಆಸಕ್ತಿಯಿರುವ ಮಿಕ್‌ಳಿಗೆ ರೆಕಾರ್ಡ್ ಪ್ಲೇಟುಗಳನ್ನು ಉಡುಗೊರೆಯಾಗಿ ಕೊಡುತ್ತಾನೆ ಸಿಂಗರ್. ಆದರೆ ತನ್ನ ಸುತ್ತಲಿನ ಲೋಕದೊಂದಿಗೆ ಈತನ ಸಂವಹನವೇನಿದ್ದರೂ ಏಕ ಮುಖವಾದುದು. ಇವನ ಮನಸ್ಸು ಉಳಿದವರಿಗೆಲ್ಲ ಮುಚ್ಚಿದ ಬಾಗಿಲು. ಯಾರೇ ಮಾತನಾಡಬೇಕಿದ್ದರೂ, ಅವರ ತುಟಿಯ ಚಲನೆ ನೋಡಿದರೆ ಸಾಕು ಅವರು ಏನನ್ನು ಹೇಳುತ್ತಿದ್ದಾರೆ ಅನ್ನುವುದು ಸಿಂಗರ್‌ನಿಗೆ ತಿಳಿದು ಹೋಗುತ್ತದೆ.

Read More

ಚಲಿಸುತ್ತಲೇ ಯೋಚಿಸುವ ಮೆವ್ಲುಟ್

ಮೂರು ವರ್ಷಗಳ ಈ ಪತ್ರ ವ್ಯವಹಾರದ ನಂತರ, ಇಬ್ಬರೂ ‘ಓಡಿಹೋಗುವುದು’ ಅಂತ ಓಲೆಗಳ ಮೂಲಕವೇ ತೀರ್ಮಾನವಾಗುತ್ತದೆ. ಕೃತಿಕಾರರೇ ಕಣ್ಣಿಗೆ ಕಟ್ಟುವ ಹಾಗೆ ವರ್ಣಿಸುವಂತೆ, ಅದೆಷ್ಟೋ ದೂರ ‘ಓಡಿ’ ಬಂದ ಮೇಲೆ ಮೆವ್ಲುಟನಿಗೆ ತಾನು ಮನಸೋತ ಹುಡುಗಿ ಇವಳಲ್ಲ ಎಂಬುದು ತಿಳಿಯುತ್ತದೆ. ಮೆವ್ಲುಟನೇ ಹೇಳುವಂತೆ, ಈ ಓಡಿಹೋಗುವುದೆಂದರೆ ಮಹಾ ತಂತ್ರಗಾರಿಕೆಯ ವ್ಯವಹಾರವಾದುದರಿಂದ, ಅವನು ತನ್ನ ಅಂತರಂಗದ ಜ್ವಾಲಾಮುಖಿಯನ್ನು ಅದುಮಿಟ್ಟು, ಮುಖ್ಯವಾಗಿ ಅದನ್ನು ಹೊರಗೆ ತೋರಗೊಡದೇ..”

Read More

ಸರಿ ತಪ್ಪುಗಳ ನಡುವೆ ರೇಖೆ ಎಳೆಯುವ ಮೊದಲು

ಒಬ್ಬರಿಗೆ ಸರಿ ಎನ್ನಿಸಿದ್ದು ಇನ್ನೊಬ್ಬರಿಗೆ ತಪ್ಪಾಗುವ ಈ ಚಮತ್ಕಾರವನ್ನು ಲೇಖಕರು ಆನೆ ಮತ್ತು ಮಾವುತನ ಉಪಮೆ ಬಳಸಿ ವಿಶ್ಲೇಷಿಸುತ್ತಾರೆ. ಅಷ್ಟು ದೊಡ್ಡ ಆನೆಯ ಮುಂದೆ ಮಾವುತ ಕಾಣುವುದೇ ಇಲ್ಲ. ಆದರೆ ಕೈಯಲ್ಲಿರುವ ಪುಟ್ಟದಾದ ಅಂಕುಶವನ್ನು ಉಪಯೋಗಿಸಿಕೊಂಡು ಅಂಥ ಬೃಹತ್ ಆಸೆಯನ್ನು ಅವನು ಪಳಗಿಸಬಲ್ಲ. ಹಾಗೆಯೇ ನಮ್ಮ ಯೋಚನೆಗಳನ್ನು ಕೂಡ ನಮ್ಮ ಅಂತರ್ದೃಷ್ಟಿಯೇ ಪಳಗಿಸುತ್ತದೆ, ಅದು ಕಣ್ಣಿಗೆ ಕಾಣಿಸದಿದ್ದರೂ ಬಹಳ ಪ್ರಭಾವಶಾಲಿಯಾದುದು ಎನ್ನುತ್ತಾರೆ.

Read More

ಈಕೆ ಕಲಿತಿದ್ದು ಪರ್ವತದ ನೀರವತೆಯಿಂದ

ಮನೆಯವರೊಂದಿಗೆ ಹೋರಾಡಿ ತಾರಾ ಕಾಲೇಜೊಂದಕ್ಕೆ ಸೇರಿಕೊಳ್ಳುತ್ತಾಳೆ. ಅಲ್ಲಿಂದ ಮುಂದೆ ಇಂಗ್ಲಂಡಿನ ಕೇಂಬ್ರಿಡ್ಜಿನಲ್ಲಿರುವ ಪ್ರತಿಷ್ಠಿತ ಟ್ರಿನಿಟಿ ಕಾಲೇಜಿನಲ್ಲಿ ಪಿಎಚ್‌ಡಿ ಪದವಿಯನ್ನೂ ಪಡೆಯುತ್ತಾಳೆ. ಈ ಪಯಣದಲ್ಲಿ ತಂದೆ ತಾಯಿಯರಿಂದ ಯಾವುದೇ ಭಾವನಾತ್ಮಕ ಆಶ್ರಯವೂ, ಸ್ಪಂದನೆಯೂ ಅವಳಿಗೆ ದಕ್ಕುವುದಿಲ್ಲ. ಹಿಂತಿರುಗಿ ನೋಡಿದಾಗ ತನ್ನ ತಂದೆ ಯಾವುದೋ ಮಾನಸಿಕ ಅನಾರೋಗ್ಯದಿಂದ ಬಳಲುತ್ತಿರಬಹುದೇ ಎಂದು ಅವಳಿಗೆ ಸಂದೇಹವಾಗುತ್ತದೆ. ಎಲ್ಲರಂತೆ ತನಗೂ ಒಂದು ಸಹಜ ಬಾಲ್ಯವಿರಬೇಕಿತ್ತು..”

Read More

ಕಲಿಸು ಪ್ರಭು; ಕರಗುವುದನ್ನು, ಮುಳುಗದೇ ಇರುವುದನ್ನು

ಎ ಕೆ ರಾಮಾನುಜನ್ ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ನಿರಂತರವಾಗಿ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿ ಕೊಂಡವರು. ಅವರ ದಿನಚರಿಯನ್ನು ಆಧರಿಸಿದ ಪುಸ್ತಕ ‘ಜರ್ನೀಸ್, ಅ ಪೋಯಟ್ಸ್ ಡೈರಿ’ ಎರಡು ವರ್ಷಗಳ ಹಿಂದೆ ಪ್ರಕಟವಾಯಿತು. ಈ ಜೀನಿಯಸ್ ಬರಹಗಾರ
ಐದು ದಶಕಗಳ ಕಾಲ ಬರೆದ ದಿನಚರಿ ಪುಟಗಳನ್ನು ತಮ್ಮ ಓದಿನಲ್ಲಿ ಕಾಣಿಸಿದ್ದಾರೆ, ಕಾವ್ಯಾ ಕಡಮೆ ಈ ಬಾರಿಯ ಅಂಕಣದಲ್ಲಿ.

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ