Advertisement

Tag: ಕೆಂಡಸಂಪಿಗೆ

ಧರ್ಮ ತೊಡಕು ಮತ್ತು ಬೆಳಕು: ರಂಜಾನ್ ದರ್ಗಾ ಸರಣಿ

ಸಮಾಜದಲ್ಲಿ ವಿಚಾರವಾದದ ಬೆಳವಣಿಗೆಯಿಂದ ಮಾತ್ರವೇ ನವಸಮಾಜದ ನಿರ್ಮಾಣವಾಗಲು ಸಾಧ್ಯ. ಎಲ್ಲ ಧರ್ಮಗಳನ್ನು ವಿಚಾರವಾದದ ಒರೆಗಲ್ಲಿಗೆ ಹಚ್ಚದಿದ್ದರೆ ಮಾನವಕುಲ ಇನ್ನೂ ಅಧೋಗತಿಗೆ ಹೋಗುವುದು. ಧರ್ಮಗಳ ತಿರಸ್ಕಾರದಿಂದ ವಿಚಾರವಾದಿಗಳು ಇದನ್ನು ಸಾಧಿಸಲಿಕ್ಕಾಗದು. ಧರ್ಮಗಳಲ್ಲಿನ ಅರಿವಿನ ಬೆಳಕಿನೊಂದಿಗೆ ಮಾತ್ರ ಈ ವಿಚಾರಹೀನ ಸ್ಥಿತಿಯಿಂದ ಹೊರಬರಲು ಸಾಧ್ಯ.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 94ನೇ ಕಂತು ನಿಮ್ಮ ಓದಿಗೆ

Read More

ಪ್ರಾಣಪಕ್ಷಿಗಳು ಹಾರಿಹೋದವು: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ

ಕೊನೆಗೆ ರಾತ್ರಿ 12 ಗಂಟೆಗೆ ಯೂನಿಫಾರ್ಮ್ ಬಟ್ಟೆ ಕಾಣಿಸಿಕೊಂಡಿತು. ನಿಧಾನವಾಗಿ ಉಸಿರಿಡಿದುಕೊಂಡು ಬಾಬು ದೇವವನ್ನು ಕಲ್ಲುಮಣ್ಣಿನ ಕೆಳಗಿಂದ ಹೊರಕ್ಕೆ ತೆಗೆದು ನೋಡಿದರು! ಆತನ ದೇಹದ ಮೇಲಿನ ಯೂನಿಫಾರ್ಮ್ ಬಟ್ಟೆಗಳು ರಕ್ತದಿಂದ ಹೆಪ್ಪು ಕಟ್ಟಿಕೊಂಡಿದ್ದವು. ದೇಹ ನುಜ್ಜುಗುಜ್ಜಾಗಿ ಹೋಗಿತ್ತು. ದೊಡ್ಡ ಕಲ್ಲುಮಣ್ಣಿನ ರಾಶಿ ಅವನ ಮೇಲೆ ಕುಸಿದು ಬಿದ್ದು ಕೆಲವೇ ನಿಮಿಷಗಳಲ್ಲಿ ಅವನ ಪ್ರಾಣಪಕ್ಷಿ ಹಾರಿಹೋಗಿತ್ತು. ಅವನ ದೇಹವನ್ನು ನೋಡಿದ ಕಾರ್ಮಿಕರು ಸ್ವಲ್ಪ ಹೊತ್ತು ಏನೂ ಮಾತನಾಡದೆ ವಿದ್ಯುತ್ ಶಾಕ್ ಹೊಡೆದುಕೊಂಡಂತೆ ಹಾಗೇ ನಿಂತುಕೊಂಡೇ ಇದ್ದರು.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿ

Read More

ನೆದರ್‌ಲ್ಯಾಂಡ್ಸ್ ರಾಜಕಾರಣ- ಒಂದು ಅಪೂರ್ಣ ಅನುಬಂಧ: ಕೆ. ಸತ್ಯನಾರಾಯಣ ಪ್ರವಾಸ ಸರಣಿ

ನಾಗರಿಕರನ್ನು ಸಾಕಬೇಕು, ಪೋಷಿಸಬೇಕು ಎನ್ನುವುದಕ್ಕಿಂತ ಹೆಚ್ಚಾಗಿ, ಅವರನ್ನು ಸಬಲಗೊಳಿಸಬೇಕು, ಅವರು ಸರ್ಕಾರ, ರಾಜ್ಯದ ಮೇಲೆ ಅವಲಂಬಿತರಾಗದ ಹಾಗೆ ನೋಡಿಕೊಳ್ಳಬೇಕು, ಹಾಗಾದಾಗ ಮುಂದೆ ಅವರೇ ದೇಶದ ಆರ್ಥಿಕ-ಸಾಮಾಜಿಕ ಅಭಿವೃದ್ಧಿಯ ಕಡೆ ಗಮನ ಹರಿಸುತ್ತಾರೆ ಎಂಬುದು ಈ ಸಮಾಜದ ನಿಲುವು. ಉನ್ನತ ಮಟ್ಟದ ರಾಷ್ಟ್ರೀಯ ಆದಾಯ, ತಲಾವಾರ್ಷಿಕ ಆದಾಯದ ಹಂತವನ್ನು ತಲುಪಿದ ದೇಶದಲ್ಲಿ ಮಾತ್ರ ಇದು ಸಾಧ್ಯ. ಶ್ರೀಮಂತರು, ಚಕ್ರವರ್ತಿಗಳು ಇಲ್ಲವೆಂದಿಲ್ಲ.
ಕೆ. ಸತ್ಯನಾರಾಯಣ ಬರೆಯುವ ಪ್ರವಾಸ ಪ್ರಬಂಧಗಳ “ನೆದರ್‌ಲ್ಯಾಂಡ್ಸ್ ಬಾಣಂತನ” ಸರಣಿಯ ಕೊನೆಯ ಬರಹ

Read More

ಹತ್ತು ಮಹಡಿಯ ಭರ್ಜರಿ ಪ್ಲಾನು….: ಎಚ್.ಗೋಪಾಲಕೃಷ್ಣ ಸರಣಿ

ಬೆಳಗಿಂದ ಸಂಜೆವರೆಗೂ ನನ್ನ ಸಂಗಡವೆ ಇತ್ತು ಅದು. ಮಧ್ಯಾಹ್ನ ನಿದ್ದೆ ಕೂಡ ಮಾಡದೇ ನನ್ನ ಜತೆಗೆ ಇದ್ದುಬಿಡ್ತು. ಮನೆಗೆ ಹೊರಡ್ತಾ ಮಗೂನ ಮುದ್ದಿಸಿದೆ. “ಮಗು ತುಂಬಾ ಮುದ್ದು, ನನ್ನನ್ನ ತುಂಬಾ ಹಚ್ಚಿಕೊಂಡಿದೆ “ಅಂದೆ. ಬೆಳಿಗ್ಗೆಯಿಂದ ನನ್ನ ಸಂಗಡವೇ ಇತ್ತು. ಪುಟ್ಟ ಕೂಸು, “ಅಂಕಲ್‌ನ ಒಬ್ಬರನ್ನೇ ಬಿಡಬೇಡ, ಸಿಕ್ಕಿದ್ದೆಲ್ಲಾ ಜೇಬಲ್ಲಿ ಹಾಕ್ಕೊಳತ್ತೆ ಅದು, ಅದರ ಹಿಂದೇನೆ ಇರು ಅಂತ ಅಜ್ಜಿ ಹೇಳಿತ್ತು…” ಅಂತ ಸತ್ಯ ಬಯಲು ಮಾಡಿತು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿ

Read More

ಒಂದೊಂದ್ಲೆ ಒಂದು…!: ಕ್ಷಮಾ ವಿ ಭಾನುಪ್ರಕಾಶ್ ಬರಹ

ವೈಜ್ಞಾನಿಕ ತಳಹದಿಯೇ ಇಲ್ದೇ, ಯಾವುದೋ ಬಂಜರು ಭೂಮಿಯಲ್ಲಿ ಸುಲಭವಾಗಿ ಸಿಕ್ಕ ಯಾವುದೋ ಪ್ರಭೇದದ ಸಸಿಗಳನ್ನ ನೆಟ್ಟು, ಪರಿಸರ ದಿನ ಆಚರಿಸೋದು ಅತ್ಯಂತ ಅರ್ಥಹೀನ; ಮರಗಳನ್ನು ನೆಟ್ಟು ಎಲ್ಲೆಂದರಲ್ಲಿ ಕಾಡು ಮಾಡಿಬಿಡ್ತೀವಿ ಅಂದ್ರೆ ಹೇಗೆ? ಅಲ್ಲಿ ಯಾವ ಜೀವರಾಶಿಯಿತ್ತು? ಅಲ್ಲಿನ ಆಹಾರ ಸರಪಳಿಯ ಕಥೆಯೇನು? ಅಲ್ಲಿನ ಅಜೈವಿಕ ಹಾಗೂ ಜೈವಿಕ ಅಂಶಗಳ ನಡುವಿನ ಸಮತೋಲನದ ಕಥೆಯೇನು?
ಈ ಹೊಸ ವರ್ಷದಿಂದ ಸ್ವಲ್ಪವಾದರೂ ನಾವು ನಿಂತಿರುವ ಈ ಭೂಮಿಯ ಕುರಿತು ಯಾವೆಲ್ಲ ರೀತಿಯಲ್ಲಿ ಕಾಳಜಿ ವಹಿಸಬಹುದು ಎನ್ನುವುದರ ಕುರಿತು ಕ್ಷಮಾ ವಿ. ಭಾನುಪ್ರಕಾಶ್‌ ಬರಹ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ