Advertisement

Tag: ಕೆಂಡಸಂಪಿಗೆ

ಅಮೆರಿಕಾದ ಸ್ವಾತಂತ್ರೋತ್ಸವ: ಎಂ.ವಿ. ಶಶಿಭೂಷಣ ರಾಜು ಅಂಕಣ

ಅಮೆರಿಕಾದ ಪೌರತ್ವ ಮತ್ತು ವಲಸೆ ಸೇವಾ ಸಂಸ್ಥೆ ಈ ವರುಷದ ಸ್ವಾತಂತ್ರ್ಯ ದಿನವನ್ನು ಸುಮಾರು ಹನ್ನೊಂದು ಸಾವಿರ ಜನರಿಗೆ ಅಮೆರಿಕದ ಪೌರತ್ವ ಕೊಟ್ಟು ವಿಶೇಷವಾಗಿ ಆಚರಿಸುತ್ತಿದೆ. ಅಮೆರಿಕಾದ ಜನ ಸ್ವತಂತ್ರ ಪಡೆದು ತುಂಬಾ ಮುಂದೆ ಹೋಗಿದ್ದಾರೆ. ಪ್ರಪಂಚದ ಶ್ರೀಮಂತ ರಾಷ್ಟ್ರವನ್ನಾಗಿ ಮಾಡಿದ್ದಾರೆ. ಬಹುತೇಕ ಎಲ್ಲಾ ವಲಯಗಳಲ್ಲೂ ಬಲಾಢ್ಯ ದೇಶವಾಗಿ ಅಮೆರಿಕಾ ಹೊರಹೊಮ್ಮಿದೆ. ಪ್ರಪಂಚದ ಇತರ ದೇಶಗಳ ತನ್ನ ಪ್ರಭಾವ ಬೀರುವಷ್ಟು ಬೆಳೆದಿದೆ.
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ

Read More

ಮದುವೆ ಎನ್ನುವ ಊರ ಸಂಭ್ರಮ: ಚಂದ್ರಮತಿ ಸೋಂದಾ ಸರಣಿ

ಈಗಿನಂತೆ ಅವರಪಾಡಿಗೆ ಅವರು ಮದುವೆಗೆ ಹೋಗುವ ರಿವಾಜಿರಲಿಲ್ಲ. ಎಲ್ಲರನ್ನೂ ಒಳಗೊಂಡು ಹೋಗುವುದಿತ್ತು. ಹೋಗುವಾಗ ಬರುವಾಗ ಹಾಡುಗಳ ಸ್ಪರ್ಧೆ ಇರುತ್ತಿತ್ತು. ಯಾರು ಎಷ್ಟು ಹಾಡನ್ನು ಹೇಳುತ್ತಾರೆ ಅಂತ. ಹೆಣ್ಣುಮಕ್ಕಳು ತಮ್ಮ ಹಾಡಿನ ಸಾಮರ್ಥ್ಯವನ್ನು ಒರೆಹಚ್ಚುವ ಅವಕಾಶವನ್ನು ಕಳೆದುಕೊಳ್ಳುತ್ತಿರಲಿಲ್ಲ. ಮದುಮಗನನ್ನು ಎದುರುಗೊಳ್ಳುವುದಿರಲಿ, ಸಭಾಪೂಜೆಯೋ, ವರಪೂಜೆ ಅಥವಾ ಧಾರೆ ಯಾವುದೇ ಸನ್ನಿವೇಶವನ್ನು ಬಿಡದೆ ಹಾಡುತ್ತಿದ್ದರು.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿ

Read More

ಮಿಲನ-ಸುಂದರ ಅನುಬಂಧದ ಕವನ: ರಾಮ್ ಪ್ರಕಾಶ್ ರೈ ಕೆ ಸರಣಿ

ಆಕಾಶ್ ಮತ್ತು ಅಂಜಲಿಯೇ ಕಥೆಯ ಬಹು ಭಾಗದ ಕೇಂದ್ರ ಬಿಂದುವಾಗಿರುವುದರಿಂದ ಸಂಬಂಧದ ಪರಿಕಲ್ಪನೆ, ಶೂನ್ಯ ಪುರುಷ ಮೇಲರಿಮೆ, ಅವಳ ಖುಷಿಯಲ್ಲಿ ಅವನು ಕಾಣುವ ನೆಮ್ಮದಿ ಎಲ್ಲವೂ ಬದುಕಿಗೊಂದು ಮಾದರಿ. ಬಂಧಗಳು ಬಿಗಿಯಾಗುವುದೇ ತಾನು, ತನ್ನದೆಂಬ ಭಾವ ಶೂನ್ಯವಾಗಿ, ನಿನ್ನ ಸಂತಸವೇ ನನ್ನದು ಎಂಬ ಯೋಚನೆ ಮುನ್ನೆಲೆಗೆ ಬಂದಾಗ ಎಂದು ಸಾರುವ ಕಥೆಯ ತೆರೆಯ ಮೇಲಿನ ಚಿತ್ರಣವೇ ಮನ ಮಿಡಿಯುವಂಥದ್ದು.
ರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿ

Read More

ನಾವು… ನಮ್ಮದು..: ಗುರುಪ್ರಸಾದ ಕುರ್ತಕೋಟಿ ಸರಣಿ

ಸ್ವಚ್ಚತೆ, ಇಂಡಿಪೆಂಡೆನ್ಸ್, ತಮಗನಿಸಿದ್ದನ್ನು ನಿರ್ಭಿಡೆಯಿಂದ ಹೇಳುವ ಅವರ ಶೈಲಿ ಇನ್ನೂ ಎಷ್ಟೋ ಒಳ್ಳೆಯ ಗುಣಗಳನ್ನು ಖಂಡಿತ ಅಮೆರಿಕನ್ನರಿಂದ ಕಲಿಯಬಹುದು. ಆದರೆ ಇನ್ನೂ ಎಷ್ಟೋ ವಿಷಯಗಳಲ್ಲಿ ಅವರು ಮಾಡೋದು ಅತಿ ಅನಿಸುತ್ತದೆ. ಅದೇ ರೀತಿ ನಾವೂ ಕೂಡ ಕೆಲವು ವಿಷಯಗಳಲ್ಲಿ ಅತಿ ಮಾಡುತ್ತೇವೆ. ಹೀಗಾಗಿ ಅವರ ಕೆಲವು ವಿಷಯಗಳನ್ನು ಸ್ವೀಕರಿಸಿ ನಮ್ಮತನವನ್ನೂ ಉಳಿಸಿಕೊಂಡ ಒಂದು ಮಧ್ಯದ ಶೈಲಿ ಅಳವಡಿಸಿಕೊಂಡರೆ ಎಷ್ಟು ಚೆನ್ನ ಅನಿಸುತ್ತದೆ. ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿ

Read More

ಆಧುನಿಕ ವಿಕಾರಕ್ಕೊಂದು ಕನ್ನಡಿ: ಕಾವ್ಯಾ ಕಡಮೆ ಕಥಾ ಸಂಕಲನಕ್ಕೆ ಶ್ರೀಧರ ಬಳಗಾರ ಮುನ್ನುಡಿ

ತೊಟ್ಟು ಕ್ರಾಂತಿ ಸಂಕಲನದ ಕಥೆಗಳಲ್ಲಿ ಕೆಲವು ಪ್ರದೇಶದ ಕನ್ನಡದ ಉಪಭಾಷೆಗಳ ಪ್ರಯೋಗವಾಗಿದೆ. ಪಾತ್ರಗಳ ಮಾತಿನ ಭಿನ್ನ ಶೈಲಿಯಲ್ಲಿ ಆಕಾರ ಪಡೆಯುವ ಕಥೆಗೆ ಹಲವು ಧ್ವನಿಗಳಿವೆ. ಭಾಷೆಯ ಮೂಲಕ ಕಥೆಯ ನಿರೂಪಣೆಯಲ್ಲ; ಭಾಷೆಯೇ ಕಥೆಯಾಗುವುದು; ಭಾಷೆ ಕಥೆಯಾಗುವುದೆಂದರೆ ಮನುಷ್ಯರಾಗುವುದು; ಭಾಷೆಯೇ ಮನುಷ್ಯರೊಡಗೂಡಿ ವಿಷಯವಾಗುವುದು ಇಲ್ಲಿ ಸಾಧ್ಯವಾಗಿದೆ; ಆದ್ದರಿಂದ ಪಾತ್ರ-ಪರಿಸರದ ಹಾಸುಹೊಕ್ಕಿನ ನೇಯ್ಗೆ ಈ ಕಥೆಗಳ ಯಶಸ್ಸಿಗೆ ಕಾರಣಗಳಲ್ಲೊಂದು.
ಕಾವ್ಯಾ ಕಡಮೆ ಕಥಾ ಸಂಕಲನ “ತೊಟ್ಟು ಕ್ರಾಂತಿ”ಗೆ ಕತೆಗಾರ ಶ್ರೀಧರ ಬಳಗಾರ ಬರೆದ ಮುನ್ನುಡಿ ನಿಮ್ಮ ಓದಿಗೆ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ