Advertisement

Tag: ಕೆಂಡಸಂಪಿಗೆ

ಆರೋಗ್ಯಕ್ಕೆ ಒಂಬತ್ತೇ ಮೆಟ್ಟಿಲು… ಕಾರ್ತಿಕ್ ಕೃಷ್ಣ ಬರಹ

ಮುಂದಿನ ಬಾರಿ ನೀವು ಮೆಟ್ರೋ ನಿಲ್ದಾಣಕ್ಕೆ ಹೋದಾಗ, ಎಸ್ಕಲೇಟರ್ ಹಾಗೂ ಮೆಟ್ಟಿಲುಗಳ ಮೇಲೆ ಓಡಾಡುವ ತಲೆಗಳನ್ನು ಲೆಕ್ಕ ಹಾಕಲು ಟ್ರೈ ಮಾಡಿ. ಮೆಟ್ಟಿಲನ್ನು ಬಳಸುವ ಜನರ ಲೆಕ್ಕ ನಿಮಗೆ ಆರಾಮಾಗಿ ಸಿಕ್ಕಿಬಿಡುತ್ತದೆ. ಎಸ್ಕಲೇಟರ್ ಮೇಲಿನ ಮಾನವರ ತಲೆಗಳನ್ನು ಎಣಿಸುವುದು ಮಾತ್ರ ತಾರೆಗಳನ್ನು ಕಲೆಹಾಕಿದಷ್ಟೇ ಕಷ್ಟವಾಗಬಹುದು. ಇದಕ್ಕೆ ಕಲಶಪ್ರಾಯವಾಗಿ, ಮೊಬೈಲ್ ಫೋನು ನೋಡುತ್ತಾ, ಮೆಟ್ಟಿಲುಗಳ ಬಳಿ ಬಂದು, ಕೂಡಲೇ ಮುಖವನ್ನು ಸಿಂಡರಿಸಿಕೊಂಡು, ಪಕ್ಕದ ಎಸ್ಕಲೇಟರ್ ಏರಿದ ಹೋಮೋ ಸೇಪಿಯನನ್ನು ಕೆ ಆರ್ ಪುರ ಮೆಟ್ರೋ ನಿಲ್ದಾಣದಲ್ಲಿ ನೋಡಲು ಸಿಕ್ಕಿದ್ದು ನನ್ನ ಸುಕೃತವೋ…
ಮೆಟ್ಟಿಲುಗಳ ಬಳಕೆಯ ಕುರಿತು ಕಾರ್ತಿಕ್‌ ಕೃಷ್ಣ ಬರಹ ನಿಮ್ಮ ಓದಿಗೆ

Read More

ದಿನಗೂಲಿ ನೌಕರರ ಮಹಾತ್ಮ: ರಂಜಾನ್ ದರ್ಗಾ ಸರಣಿ

‘ನ್ಯಾಯನಿಷ್ಠುರಿ, ಲೋಕವಿರೋಧಿ, ಶರಣನಾರಿಗೂ ಅಂಜುವವನಲ್ಲʼ ಎಂಬಂಥ ವ್ಯಕ್ತಿತ್ವ ಅವರದು. ಹೀಗೆ ಮಾತನಾಡಿದರೆ ಆಡಳಿತ ವರ್ಗಕ್ಕಾಗಲೀ ರಾಜ್ಯಶಕ್ತಿಗಾಗಲೀ ತಮ್ಮ ಬಗ್ಗೆ ಯಾವ ಭಾವನೆ ಮೂಡಬಹುದು; ಅದರಿಂದ ತಮಗೆ ಯಾವ ತೊಂದರೆಯಾಗಬಹುದು ಎಂಬ ಲೆಕ್ಕಾಚಾರವನ್ನು ಅವರು ಎಂದೂ ಹಾಕಿದವರಲ್ಲ. ಮನುಷ್ಯರ ಬಗ್ಗೆ ಇರುವ ಅವರ ಕಾಳಜಿಯೆ ಅಂಥದ್ದು. ಆ ಕಾಲದಲ್ಲಿ ಅವರು ಒಂದು ರೀತಿಯ ಏಕಾಂಗವೀರರಾಗಿದ್ದರು. ಸದಾ ಕ್ರಿಯಾಶೀಲವಾಗಿರುವ ಅವರ ವ್ಯಕ್ತಿತ್ವ ನನ್ನಂಥವರ ಮೇಲೆ ಆಳವಾದ ಪರಿಣಾಮ ಬೀರಿತು.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿ

Read More

ಗಾರ್ಮೆಂಟ್ ಗಾಮಿನಿಯರು, ಕಿಟ್ಟಿಪಾರ್ಟಿ ಕಿನ್ನರಿಯರು: ಡಾ. ಎಲ್.ಜಿ. ಮೀರಾ ಅಂಕಣ

ಅದೃಷ್ಟದ ಮೇಲೆ ಯಾವ ಭರವಸೆಯನ್ನೂ ಇಟ್ಟುಕೊಳ್ಳದೆ `ಮನುಷ್ಯ ತನ್ನ ಅದೃಷ್ಟವನ್ನು ತಾನೇ ರೂಪಿಸಿಕೊಳ್ಳುತ್ತಾನೆʼ ಎನ್ನುವ ವಿಚಾರವಾದಿಗಳೂ ಇದ್ದಾರಲ್ಲವೇ? ಮನುಷ್ಯನ ಯಶಸ್ಸಿನಲ್ಲಿ ಪುರುಷಪ್ರಯತ್ನ, ಪರಿಶ್ರಮಗಳ ಪಾಲು ಇರುವುದು ನಿಜವಾದರೂ, ಒಟ್ಟು ಬದುಕು ಕೊನೆತನಕ ನೆಮ್ಮದಿಯಿಂದ ಸುಖಮಯವಾಗಿ ದೊಡ್ಡ ಕೊರಗಿಲ್ಲದೆ ಕಳೆಯುವುದು ಮನುಷ್ಯನ ಕೈಯಲ್ಲಿದೆಯೇ? “ಅಯ್ಯೋ, ತನ್ನ ನಾಳೆ ಹೇಗಿರುತ್ತದೆ ಎಂದು ಗೊತ್ತಿರದ ಮನುಷ್ಯನ ದುರ್ವಿಧಿಯೇ!!!..”
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಎರಡನೆಯ ಬರಹ

Read More

ಅಪ್ಪನಿಗೇ ನನ್ನನ್ನು ಪರಿಚಯ ಮಾಡಿಕೊಂಡಿದ್ದೆ!: ಎಚ್. ಗೋಪಾಲಕೃಷ್ಣ ಸರಣಿ

ನಮ್ಮ ಅಪ್ಪಂಗೆ ಅವರ ಮಕ್ಕಳ ಪರಿಚಯವೇ ಇಲ್ಲ ಅಂತ ಅಮ್ಮ ಆಗಾಗ ಮನೆಗೆ ಬಂದವರೆಲ್ಲರ ಮುಂದೆ ಹೇಳುತ್ತಿದ್ದಳು. ಅಪ್ಪ ನನ್ನ ಗುರುತು ಹಿಡಿತಾನೋ ಇಲ್ಲವೋ ಅಂತ ನನ್ನ ತಲೆಗೆ ಆಗ ಹೊಳಿಬೇಕಾ..? ಅಪ್ಪ ನನ್ನನ್ನು ನೋಡಿದ್ರಾ, ಮುಂದೆ ಸರಿದೆ. ಅಪ್ಪಾ, ನಾನು ಗೋಪಿ ನಿಮ್ಮ ಕೊನೇ ಮಗ.. ಅಂತ ವಿವರಿಸಲು ಹೊರಟೆ.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿ

Read More

ದೂರದ ಬೆಟ್ಟ “ಪ್ಯಾರಿಸ್”…: ಡಾ. ಎಂ. ವೆಂಕಟಸ್ವಾಮಿ ಪ್ರವಾಸ ಕಥನ

ಊಟ ಮುಗಿದ ಮೇಲೆ ಬೆಳಿಗ್ಗೆ ನಿಂತು ವಾಪಸ್ ಬಂದಿದ್ದ ಸಫಾರಿ ಟ್ರೈನಿಗೆ ಹೋಗಲು ಸುಶೀಲ ನಾನು ಎದ್ದೋಗಿ ಸಾಲಿನಲ್ಲಿ ನಿಂತುಕೊಂಡೆವು. ಅದು ಒಂದು ರೀತಿಯಲ್ಲಿ ಹೈದರಾಬಾದ್‌ನ ರಾಮೋಜಿ ಸಿಟಿಯ ಟಾಯ್ ಟ್ರೇನ್‌ನಂತೆ ಕಾಣಿಸಿ ಅದರ ವಿವರಗಳನ್ನು ಹಾಕಿದ್ದರು. ಸಾಲಿನಲ್ಲಿ ಸುತ್ತಿಸುತ್ತಿ ಒಳಕ್ಕೆ ಹೋದಂತೆ ಅದೊಂದು ಹಾರರ್ ಟ್ರೇನ್‌ ಸುಳಿವು ನೀಡತೊಡಗಿತು. ಏನೋ ಎಡವಟ್ಟು ನಡೆಯಲಿದೆ ಎಂಬುದಾಗಿ ನನ್ನ ಆರನೇ ಇಂದ್ರಿಯ ಹೇಳತೊಡಗಿತು.
ಪ್ಯಾರಿಸ್‌ನಲ್ಲಿ ಓಡಾಡಿದ ಅನುಭವಗಳ ಕುರಿತು ಡಾ. ಎಂ. ವೆಂಕಟಸ್ವಾಮಿ ಬರಹ ನಿಮ್ಮ ಓದಿಗೆ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ