Advertisement

Tag: ಕೆ. ಸತ್ಯನಾರಾಯಣ

ನೆದರ್‌ಲ್ಯಾಂಡ್ಸ್ ಬಾಣಂತನ: ಕೆ. ಸತ್ಯನಾರಾಯಣ ಪ್ರವಾಸ ಸರಣಿ

ಆವತ್ತಿನ ಪರಿಸ್ಥಿತಿಯಲ್ಲಿ ಅದು ಕನಸಿನಲ್ಲೂ ಕೂಡ ಸಾಧ್ಯವಿರಲಿಲ್ಲ. ಮಗಳು ಉದ್ಯೋಗಿಯಾಗಿದ್ದರಿಂದ ಇಲ್ಲಿಗೆ ಬಂದು ಬಾಣಂತನ ಮುಗಿಸಿಕೊಂಡು ಹೋಗುವುದು ಸಾಧ್ಯವಿರಲಿಲ್ಲ. ಮಗಳಿಗೆ ಕೂಡ ಪ್ರಾರಂಭದ ಸಂಭ್ರಮ ಮುಗಿದ ಮೇಲೆ, ನಾನಾ ರೀತಿಯ ಆತಂಕ, ಅನುಮಾನಗಳು. ಕೆಲಸ, ಸಂಸಾರ, ಸ್ಕೂಲಿಗೆ ಹೋಗುತ್ತಿರುವ ಏಳು ವರ್ಷದ ಮಗ, ತನ್ನ ಆರೋಗ್ಯ, ಹೆರಿಗೆಗೆ ತಯಾರಿ, ಹೀಗೆ. ಎಲ್ಲವನ್ನೂ ಹೇಗೆ ವ್ಯವಸ್ಥಿತಗೊಳಿಸಬೇಕೆಂಬ ಗೊಂದಲ, ಸವಾಲು.
ಕೆ. ಸತ್ಯನಾರಾಯಣ ಬರೆಯುವ ಪ್ರವಾಸ ಪ್ರಬಂಧಗಳ “ನೆದರ್‌ಲ್ಯಾಂಡ್ಸ್ ಬಾಣಂತನ” ಸರಣಿ

Read More

ಕೆ. ಸತ್ಯನಾರಾಯಣ ಪ್ರವಾಸ ಪ್ರಬಂಧಗಳ ಹೊಸ ಸರಣಿ “ನೆದರ್‌ಲ್ಯಾಂಡ್ಸ್ ಬಾಣಂತನ” ಆರಂಭ

ವಿದೇಶಿ ಪ್ರವಾಸದ ಅನುಭವ ಅಂದರೇನು? ನಾವು ಅಲ್ಲಿ ಕಂಡ ಪ್ರಕೃತಿಯ ದೃಶ್ಯಗಳೇ? ಜನಜೀವನದ ರೀತಿಯೇ? ವಿಚಿತ್ರ, ಅಸಂಗತ ಅನುಭವಗಳೇ? ನಮ್ಮ ಒಡನಾಟಕ್ಕೆ ಸಿಗುವ ವಿದೇಶೀಯರ ವರ್ತನೆಯೇ? ಈ ಕುರಿತು ನಾನು ಯೋಚಿಸಿರಲಿಲ್ಲ. ಯೋಚಿಸುವ ಸಂದರ್ಭ ಕೂಡ ಬಂದಿರಲಿಲ್ಲ. ವಿಮಾನದಲ್ಲಿ ಹಾರಾಡುವುದು, ಅಮೆರಿಕ, ಯುರೋಪು ಸುತ್ತುವುದು, ಪ್ರವಾಸದ ಸಮಯದಲ್ಲಿ ಪಡೆದ ಅನುಭವಗಳನ್ನು ಕುರಿತು ಬರೆಯುವುದು, ಮಾತನಾಡುವುದು, ಇಷ್ಟೇ ವಿದೇಶಿ ಪ್ರವಾಸದ ಅನುಭವ ಎಂಬ ತಪ್ಪು ಕಲ್ಪನೆ ನನ್ನಲ್ಲಿತ್ತು.
ಹಿರಿಯ ಕತೆಗಾರ ಕೆ. ಸತ್ಯನಾರಾಯಣ ಬರೆಯುವ ಪ್ರವಾಸ ಪ್ರಬಂಧಗಳ ಸರಣಿ “ನೆದರ್‌ಲ್ಯಾಂಡ್ಸ್ ಬಾಣಂತನ”

Read More

ನಿಜವಾದ ಸೋದರಮಾವ: ಕೆ. ಸತ್ಯನಾರಾಯಣ ಕೃತಿಯ ಬರಹ

ಬೆಂಗಳೂರಿನಿಂದ ಗೌಹಾತಿಗೆ ಹೊರಟಿದ್ದ ರೈಲಿನಲ್ಲಿ ಒಬ್ಬ ಕನ್ನಡಿಗ ಪ್ರಯಾಣಿಕರ ಪರಿಚಯವಾಯಿತು. ಸದ್ಯದಲ್ಲೇ ಅವರು ನಿವೃತ್ತರಾಗಲಿದ್ದರು. ಬೆಂಗಳೂರಿಗೆ ಬಂದು ಬಂಧು-ಮಿತ್ರರ ಜೊತೆ ಬದುಕುತ್ತಾರೆ ಎಂಬುದು ನನ್ನ ನಿರೀಕ್ಷೆ. ಆದರೆ ಅವರು ಬೆಂಗಳೂರಿನಲ್ಲಿದ್ದ ಆಸ್ತಿಯನ್ನೆಲ್ಲ ಮಾರಿ, ಗೌಹಾತಿಯಲ್ಲೇ ಖಾಯಂ ಆಗಿ ನೆಲೆಸಲು ಹೊರಟಿದ್ದರು. ಈಗ ನಾವು ಅಲ್ಲಿ ಜೀವನ ಲಯಕ್ಕೆ ಹೊಂದುಕೊಂಡುಬಿಟ್ಟಿದ್ದೇವೆ. ನಮ್ಮ ತಂದೆ-ತಾಯಿ ಇಬ್ಬರೂ ಖಾಯಿಲೆ ಬಿದ್ದಾಗ ನಮಗಾಗಿ ಬಂದವರು ನೆಂಟರಿಷ್ಟರಲ್ಲ, ನಮ್ಮ ಕಾಲೊನಿಯ ಅಸ್ಸಾಮಿ ಬಂಧುಗಳು. ಅವರಿಗೆ ಕೃತಜ್ಞತೆ ಸಲ್ಲಿಸುವುದೆಂದರೆ, ಅವರೊಡನೆಯೇ ಮುಂದೆ ಬದುಕುವುದು ಎಂದುಬಿಟ್ಟರು.
ಕತೆಗಾರ ಕೆ. ಸತ್ಯನಾರಾಯಣ ಅವರ “ನನ್ನ ಪುಸ್ತಕಗಳ ಆತ್ಮಚರಿತ್ರೆ” ಕೃತಿಯ ಒಂದು ಬರಹ ನಿಮ್ಮ ಓದಿಗೆ

Read More

ಕೆ. ಸತ್ಯನಾರಾಯಣ ಬರೆದ ಈ ಭಾನುವಾರದ ಕತೆ

ಮಹಾನ್‌ ಬುದ್ಧರು ತೀರಿಹೋದ ಮೇಲೂ ಭಿಕ್ಷುಗಳ ಸಂಖ್ಯೆ ಹೆಚ್ಚುತ್ತಲೇ ಇತ್ತು. ಸ್ತೂಪಗಳನ್ನು ವಿಸ್ತರಿಸುವುದಕ್ಕೆ, ಹೊಸದಾಗಿ ನಿರ್ಮಾಣ ಮಾಡುವುದಕ್ಕೆ, ಆಶ್ರಮ, ಉದ್ಯಾನವನಗಳನ್ನು ರೂಪಿಸುವುದಕ್ಕೆ, ವರ್ತಕರಲ್ಲಿ, ಸೇನಾಧಿಪತಿಗಳಲ್ಲಿ, ಚಕ್ರವರ್ತಿಗಳಲ್ಲಿ ಒಂದು ಸ್ಪರ್ಧೆಯೇ ಏರ್ಪಟ್ಟಂತಿತ್ತು. ಇದೆಲ್ಲವನ್ನೂ ನೋಡಿಕೊಳ್ಳುವುದಕ್ಕೆ ಆನಂದನೊಬ್ಬನಿಗೇ ಸಮಯವಿರುತ್ತಿರಲಿಲ್ಲ, ದಣಿವಾಗುತ್ತಿತ್ತು. ಜವಾಬ್ದಾರಿಯನ್ನು ಹಂಚಿಕೊಳ್ಳಲು ನಂಬುಗೆಯ ಜನರು ಸಮೀಪದಲ್ಲಿರಲಿಲ್ಲ.
ಕೆ. ಸತ್ಯನಾರಾಯಣ ಬರೆದ ಈ ಭಾನುವಾರದ ಕತೆ ‘ಸಾರಿಪುತ್ರನ ಸಂಸಾರ ಸಾಮ್ರಾಜ್ಯ’

Read More

ಕೆ. ಸತ್ಯನಾರಾಯಣ ಬರೆದ ಈ ಭಾನುವಾರದ ಕತೆ

ಹೀಗೆ ಸತ್ತವರನ್ನು ಮಣ್ಣು ಮಾಡಲೆಂದೇ ಇಷ್ಟು ವಿಶಾಲವಾದ ಭೂಮಿಯನ್ನು ಪಾಳು ಬಿಡುವುದು, ಪೋಲು ಮಾಡುವುದು ತಪ್ಪಲ್ಲವೇ? ಇವರೆಲ್ಲ ದಾಯಾದಿಗಳು. ನಮ್ಮ ಹತ್ತಿರ ಮಾತು ಕೂಡ ಆಡುತ್ತಿರಲಿಲ್ಲ, ಈಗಲೂ ಆಡುವುದಿಲ್ಲ. ಕೆಲವು ಮನೆಗಳ ಜೊತೆ ರಾಜಕೀಯ ವೈರ ಕೂಡ ಇದೆ. ಇಂಥವರ ಹಿರೀಕರ ಸ್ಮಾರಕಗಳನ್ನೆಲ್ಲ ನಮ್ಮ ಜಮೀನನಲ್ಲಿ ಯಾಕೆ ಇಟ್ಟುಕೊಳ್ಳಬೇಕು.
ಕೆ. ಸತ್ಯನಾರಾಯಣ ಬರೆದ ಈ ಭಾನುವಾರದ ಕತೆ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ