Advertisement

Tag: ಕೆ. ಸತ್ಯನಾರಾಯಣ

ಜೈಲಿಗೆ ಹೋಗಲು ಸಕಲ ತಯಾರಿ!: ಕೆ.‌ ಸತ್ಯನಾರಾಯಣ ಸರಣಿ

ಇಂತಹ ಕೋರಿಕೆ ಇದುವರೆಗೆ ನಮಗೆ ಬಂದಿಲ್ಲ, ಎಲ್ಲೂ ಕೇಳಿಲ್ಲ, ಕಂಡಿಲ್ಲ ಎಂದು ವಾದಿಸಿದರು. ಕೊನೆಗೆ ನನ್ನ ವಯಸ್ಸು, ಹಿರಿತನ, ಕಳಕಳಿಪೂರ್ಣ ಮನವಿಗೆ ಕ್ಷೀಣವಾಗೆಂಬಂತೆ ಸ್ಪಂದಿಸುತ್ತಾ, ಸರಿ, ಎರಡು ನಿಮಿಷ ನೋಡಲು ಬಿಡ್ತೀವಿ, ಕೇಸ್‌ ವಿಷಯ ಮಾತನಾಡಕೂಡದು, ನೀವು ಅವರನ್ನು ಭೇಟಿ ಮಾಡುವಾಗ ನಾವು ಕೂಡ ಒಬ್ಬರು ಜೊತೆಗೇ ಇರ‍್ತೀವಿ ಎಂದರು.
ಕೆ. ಸತ್ಯನಾರಾಯಣ ಬರೆಯುವ “ಜೈಲು ಕತೆಗಳು” ಸರಣಿಯ ಎರಡನೇ ಬರಹ ನಿಮ್ಮ ಓದಿಗೆ

Read More

ಕೆ. ಸತ್ಯನಾರಾಯಣ ಬರೆಯುವ ಹೊಸ ಸರಣಿ “ಜೈಲು ಕತೆಗಳು” ಇಂದಿನಿಂದ

ನನಗೆ ಖೈದಿಗಳ ಬಗ್ಗೆ ತಿರಸ್ಕಾರವಾಗಲೀ, ಅವಮಾನವಾಗಲೀ, ಪೋಲೀಸರ ಬಗ್ಗೆ ಅನಗತ್ಯ ಭಯ-ಗೌರವಗಳಾಗಲೀ ಬೆಳೆಯಲಿಲ್ಲ. ಇವರೆಲ್ಲ ನಮ್ಮ ಕುಟುಂಬಗಳಿಂದ ಭಿನ್ನರಾದವರು ಎಂದೂ ಅನಿಸಲಿಲ್ಲ. ಆದರೆ ಕ್ರೀಡಾಪಟುಗಳು, ವಿಜ್ಞಾನಿಗಳು, ನಟರು, ಸಂಗೀತಗಾರರನ್ನು ಈ ಸಮಾಜ ರೂಪಿಸಿದೆ ಎಂಬುದು ಎಷ್ಟು ನಿಜವೋ, ಖೈದಿಗಳು, ಖೈದಿಗಳಾಗಬೇಕಾಗಿ ಬಂದವರು, ಅವರನ್ನು ಕೂಡ ಈ ಸಮಾಜವೇ ರೂಪಿಸಿದೆ ಎಂಬುದನ್ನೂ ಒಪ್ಪಬೇಕು.
ಖ್ಯಾತ ಕತೆಗಾರ ಕೆ. ಸತ್ಯನಾರಾಯಣ ಬರೆಯುವ ಸರಣಿ “ಜೈಲು ಕತೆಗಳು”

Read More

ಹೊಸ ಸ್ವರೂಪಕ್ಕೆ ಕಾಯುತ್ತಿರುವ ಪ್ರವಾಸ ಕಥನ

ಎರಡು ಮೂರು ದಶಕಗಳ ಹಿಂದೆ ವಿದೇಶಗಳ ಬಗ್ಗೆ ಇದ್ದಷ್ಟು ಕುತೂಹಲ ಈಗ ಭಾರತದಲ್ಲಾಗಲಿ, ಮೂರನೆ ಜಗತ್ತಿನ ದೇಶಗಳಲ್ಲಾಗಲಿ ಇಲ್ಲ. ಜಾಗತೀಕರಣವೂ ಸೇರಿದಂತೆ ಬೇರೆ ಬೇರೆ ಕಾರಣಗಳಿಗಾಗಿ, ಉದ್ಯೋಗ, ವ್ಯಾಪಾರ, ಪ್ರವಾಸಗಳಿಗೆ ಬೇರೆ ದೇಶಗಳಿಗೆ ಹೋಗಿ ಬರುವವರ ಸಂಖ್ಯೆ ಹೆಚ್ಚಾಗಿದೆ. ಹೆಚ್ಚು ಅವಕಾಶಗಳು ಕೂಡ ತೆರೆದಿವೆ. ಉದಾಹರಣೆಗೆ ಕರ್ನಾಟಕದ ಪ್ರತಿ ಜಿಲ್ಲೆಯಿಂದ ಕನಿಷ್ಠ ಹತ್ತು ಕುಟುಂಬಗಳ ಸದಸ್ಯರಾದರೂ, ಬಂಧುಗಳಾದರೂ ಈಗ ಹೊರದೇಶಗಳೊಡನೆ ಬೇರೆ ಬೇರೆ ರೀತಿಯಲ್ಲಿ ಸಂಪರ್ಕ, ಒಡನಾಟ ಇಟ್ಟುಕೊಂಡಿರುತ್ತಾರೆ.
ಕೆ. ಸತ್ಯನಾರಾಯಣ ಪ್ರವಾಸ ಕಥನ “ಅಮೆರಿಕದಲ್ಲಿ ಬಸವನಗುಡಿ”ಯ ಒಂದು ಬರಹ ನಿಮ್ಮ ಓದಿಗೆ

Read More

ಪ್ರಬಂಧಕಾರನಿಗೆ ಉಪದೇಶಾಮೃತ

ಪ್ರಾಮಾಣಿಕವಾದದ್ದಾಗಲೀ, ಯಥೋಚಿತವಾದದ್ದಾಗಲೀ, ದುರುದ್ದೇಶಪೂರ್ವಕವಾದದ್ದಾಗಲೀ ಉಪದೇಶವೆಂಬುದು ಉಪದೇಶವೇ! ಈ ಜಗತ್ತಿನಲ್ಲಿ ಉಪದೇಶಗಳಿಂದ ಆಗಿರುವಷ್ಟು ಹಾವಳಿ ಇನ್ನು ಯಾವುದರಿಂದಲೂ ಆಗಿಲ್ಲ. ಎಲ್ಲ ಬಣ್ಣದ, ಎಲ್ಲ ನೆರಳಿನ, ಎಲ್ಲ ಧರ್ಮದ, ಎಲ್ಲ ವಿತಂಡವಾದದ ಸಕಲ ರೀತಿಯ ಆಧ್ಯಾತ್ಮಿಕ, ಸಾಂಸ್ಕೃತಿಕ ಉಪದೇಶಗಳಿಂದ ಈ ಜಗತ್ತು ನಲುಗಿ ನಲುಗಿ ಬಸವಳಿದುಹೋಗಿದೆ. ಈಗಾಗಲೇ ಸತ್ಯವನ್ನು ಕಂಡಾಗಿದೆ, ಹೇಳಿಯೂ ಆಗಿದೆ ಎಂಬ ಬಾಲಿಶ ಧೋರಣೆಯಿಂದ ಕೊನೆಗೂ ನಾನು ಒಂದು ಮಾತು ಹೇಳುತ್ತೇನೆ.
ಕೆ. ಸತ್ಯನಾರಾಯಣ ಬರೆಯುವ “ಬೀದಿ ಜಗಳ ಮತ್ತು ಇತರೆ ಪ್ರಬಂಧಗಳು” ಸರಣಿಯ ಕೊನೆಯ ಪ್ರಬಂಧ ನಿಮ್ಮ ಓದಿಗೆ

Read More

ಇತರೆಯವರು ಮತ್ತು ನಾವುಗಳು…

ಇತರೆಯವರಿಗೆ ಯಾವತ್ತೂ ನಮ್ಮಷ್ಟು ಸೂಕ್ಷ್ಮತೆ, ಅಭಿರುಚಿ, ಸಾಮರ್ಥ್ಯ ಇದೆಯೆಂದು ಯಾವ ಜಾತಿಯವರೂ ಒಪ್ಪುವುದಿಲ್ಲ. ಮೇಲು ಮತ್ತು ಕೀಳು ಜಾತಿಗಳಲ್ಲಿರುವ ತುದಿ ನಿಲುವಿನ ಮಂದಿ ಮಾತ್ರವಲ್ಲ, ಈ ಎರಡು ತುದಿ-ತುದಿಗಳ ನಡುವೆ ಇರುವ ಸಾವಿರಾರು ಜಾತಿಗಳಲ್ಲಿ ಪ್ರತಿಯೊಂದು ಜಾತಿಯವರಿಗೂ “ಇತರೆ”ಯವರ ಅಗತ್ಯವಿದೆ – ದ್ವೇಷಿಸಲು, ವಿನಾಶ ಬಯಸಲು, ಭ್ರಮಾಲೋಕದಲ್ಲಿ ಬದುಕಲು.
ಕೆ. ಸತ್ಯನಾರಾಯಣ ಬರೆಯುವ “ಬೀದಿ ಜಗಳ ಮತ್ತು ಇತರೆ ಪ್ರಬಂಧಗಳು” ಸರಣಿಯ ಹದಿಮೂರನೆಯ ಪ್ರಬಂಧ ನಿಮ್ಮ ಓದಿಗೆ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ