Advertisement

Tag: ಕೆ. ಸತ್ಯನಾರಾಯಣ

ಒಳಾಂಗಣದ ಬದುಕು

ಒಳಾಂಗಣದ ಬದುಕು ಎಷ್ಟೇ ಚೆನ್ನಾಗಿದ್ದರೂ, ಸುಂದರವಾಗಿದ್ದರೂ ಅದೇ ಸರ್ವಸ್ವವಲ್ಲ. ಮನುಷ್ಯ ಕೊನೆಗೂ ಗೆಲ್ಲಬೇಕಾದ್ದು ಹೊರ ಜಗತ್ತನ್ನು, ಬದುಕಬೇಕಾದ್ದು ಕೂಡ ಹೊರ ಜಗತ್ತಿನಲ್ಲಿ. ಒಳಾಂಗಣದಲ್ಲೇ ಲೋಲುಪರಾಗಿ ಕಾಲ ಕಳೆಯುತ್ತಾ ಕೂರಬಾರದು. ಎರಡರ ಸಮನ್ವಯವಿರಬೇಕು. ಪರಸ್ಪರ ಚಲನೆಯಿರಬೇಕು. ಹುಲಿಕಲ್ಲು ನೆತ್ತಿಯ ಮೇಲಿನ ಒಳಾಂಗಣದ ಸುತ್ತ ಇರುವ ಅನಂತ ಕಾಲದ ಪ್ರಾಕೃತಿಕ ಶ್ರೀಮಂತಿಕೆಯ ಹೊರಾಂಗಣದ ಮಹತ್ವ ಕುವೆಂಪು ಭೇಟಿ ಮಾಡಿದ ಎಷ್ಟೋ ದಿನಗಳ ನಂತರ ನನಗೆ ಅರ್ಥವಾಯಿತು
ಕೆ. ಸತ್ಯನಾರಾಯಣ ಬರೆಯುವ “ಬೀದಿ ಜಗಳ ಮತ್ತು ಇತರೆ ಪ್ರಬಂಧಗಳು” ಸರಣಿಯ ಎರಡನೇ ಪ್ರಬಂಧ ನಿಮ್ಮ ಓದಿಗೆ

Read More

ಇವತ್ತಿನಿಂದ “ಬೀದಿ ಜಗಳ ಮತ್ತು ಇತರೆ ಪ್ರಬಂಧಗಳು”

ಒಂದು ಭಾಷಣದ ಶೈಲಿಯಾಗಿ ಕೂಡ ಅಲವತ್ತುಕೊಳ್ಳುವಿಕೆ ಪರಿಣಾಮಕಾರಿಯಾದದ್ದು. ನೀವು ಸುಮ್ಮನೆ ಬೈದು ಭಾಷಣ ಮಾಡಿದರೆ, ವಿರೋಧಪಕ್ಷದ ನಾಯಕರಾಗಲು ಸಾಧ್ಯವಾಗುವುದಿಲ್ಲ. ದೇಶದ ಭವಿಷ್ಯ ಕುರಿತು, ಆಳುವಪಕ್ಷವನ್ನು ಕುರಿತು ಭೀಕರ ಭವಿಷ್ಯವನ್ನು ನುಡಿಯಬೇಕು.
ಕತೆಗಾರ ಕೆ. ಸತ್ಯನಾರಾಯಣ ಬರೆಯುವ “ಬೀದಿ ಜಗಳ ಮತ್ತು ಇತರೆ ಪ್ರಬಂಧಗಳು” ಪ್ರಬಂಧಗಳ ಸರಣಿ

Read More

ಕೆ. ಸತ್ಯನಾರಾಯಣ ಬರೆದ ಈ ಭಾನುವಾರದ ಕತೆ

ತಂದೆ ಏಕೆ ಹೀಗಾದರೂ ಅಂತ ಈವತ್ತಿಗೂ ನನಗೆ ಗೊತ್ತಾಗುತ್ತಿಲ್ಲ. ಸ್ನಾನ, ಸಂಧ್ಯಾವಂದನೆ, ಪೂಜೆ, ಅಚರಣೆ, ಯಾವುದನ್ನೂ ತಂದೆ ತಪ್ಪಿಸಿದವರಲ್ಲ. ಅವರ ತಂದೆಯ ಭಯದಲ್ಲೇ ಬೆಳೆದಿದ್ದರು. ತಂದೆ ಸತ್ತು ಹೋದ ಮೇಲೆ ಹೀಗೆಲ್ಲ ಆದದ್ದು. ನಿನ್ನ ಹತ್ತಿರ ಏನು ಮುಚ್ಚು ಮರೆ. ನಮ್ಮ ತಾತನದು ಕೂಡ ಇದೇ ರೀತಿಯ ರಂಪವಂತೆ. ಆತ ಇಟ್ಟುಕೊಂಡಿದ್ದವಳೊಬ್ಬಳನ್ನು ಮನೆಗೇ ಕರೆದುಕೊಂಡು ಬಂದು ಮಂಚದ ಮೇಲೆ ಮಲಗಿಸಿಕೊಳ್ಳುತ್ತಿದ್ದರಂತೆ. ನಮ್ಮಜ್ಜಿ ಅವಳ ಎಂಜಲು ತಟ್ಟೆ ತೊಳೆಯುವುದರಿಂದ ಹಿಡಿದು ಪ್ರತಿಯೊಂದು ಸೇವೆಯನ್ನೂ ಮಾಡಬೇಕಾಗುತ್ತಿತ್ತಂತೆ.
ಕೆ. ಸತ್ಯನಾರಾಯಣ ಬರೆದ ಕಥೆ “ಪ್ರೀತಿ ಬೇಡುವ ರೀತಿ” ‌

Read More

ಕೆ. ಸತ್ಯನಾರಾಯಣ ಬರೆದ ಈ ಭಾನುವಾರದ ಕತೆ

ವಿಚಾರ, ನಿಲುವುಗಳು, ಆಡಳಿತದ ಅನುಭವ ಇದೆಲ್ಲ ಏನೇ ಇದ್ದರೂ ಶಿವಗಾಮಿ ಹಣದ ವಿಚಾರದಲ್ಲಿ ಶುದ್ಧಹಸ್ತಳಾಗಿಯೇ ಉಳಿದಿದ್ದು, ಹೈ ಕಮಾಂಡ್‌ ತಂತ್ರಗಾರಿಕೆ, ರಾಜಕೀಯ ಪಕ್ಷಗಳು ಕೆಲಸ ಮಾಡುವ ರೀತಿ ನೀತಿಗಳಿಗೆ ಹೊಸಬರಾಗಿದ್ದರು. ಇವಳು ಸೇರಿದ್ದ ಪಕ್ಷದ ರಾಷ್ಟ್ರೀಯ ನಾಯಕಿಗೆ ಶಿವಗಾಮಿಯಷ್ಟು ವಿದ್ಯಾವಂತೆ, ಪ್ರತಿಭಾವಂತೆ ಚುನಾವಣಾ ರಾಜಕೀಯದಲ್ಲೂ ಗೆದ್ದುಬಿಟ್ಟರೆ ಒಂದಲ್ಲ ಒಂದು ದಿನ ತನಗೆ ಪ್ರತಿಸ್ಪರ್ಧಿಯಾಗಬಹುದೆಂಬ ಆತಂಕದಿಂದ ಬೇಕು ಬೇಕೆಂದೇ ಎರಡು ಕ್ಷೇತ್ರಗಳಿಂದ ಚುನಾವಣೆಗೆ ನಿಲ್ಲಿಸಿದಳು.
ಕೆ. ಸತ್ಯನಾರಾಯಣ ಅವರ “ಮನುಷ್ಯರು ಬದಲಾಗುವರೆ” ಕಥಾ ಸಂಕಲನದ “ಶಿವಗಾಮಿ ಬದಲಾದಳೆ?” ಕಥೆ

Read More

ಕೆ. ಸತ್ಯನಾರಾಯಣ ಬರೆದ ‘ಚಿನ್ನಮ್ಮನ ಲಗ್ನ’ ಪುಸ್ತಕದಿಂದ ಒಂದು ಟಿಪ್ಪಣಿ

“ಮುಕುಂದಯ್ಯ ಗದ್ದೆ ಕೊಯ್ಲಿಗೆ ಜನರನ್ನು ಗೊತ್ತುಮಾಡಬೇಕು, ಸುಮ್ಮನೆ ಕೂತರೆ ಆಗುವುದಿಲ್ಲ ಎಂದೆಲ್ಲ ಮುಂದೆ ಆಗಬೇಕಾದ ಕೆಲಸಗಳ ಬಗ್ಗೆ ಐತನೊಡನೆ ಚರ್ಚಿಸುತ್ತಿದ್ದಾನೆ. ಚಳಿಗೆ ಬೆಂಕಿಯ ಹತ್ತಿರ ಕಾಯಿಸಿಕೊಳ್ಳುತ್ತಾ ಸಂಸಾರದ ಜವಾಬ್ದಾರಿ ಹೊರಲು ತಯಾರಾಗುವುದು, ವೃತ್ತಿ ಜೀವನದ ಮುಂದಿನ ಕೆಲಸಗಳ ಬಗ್ಗೆ ಕಾಳಜಿ ವಹಿಸುವುದು…”

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ