ಕುಲಪಂಚಾಯ್ತಿ ವ್ಯವಸ್ಥೆ ಮತ್ತು ರಾಜಕೀಯ ಪ್ರಾತಿನಿಧ್ಯ
ಮದುವೆ ಸಂದರ್ಭದಲ್ಲಿ ಬ್ಯಾಟಿ ಕೊಡದಿದ್ದರೆ ಕುಲದಿಂದ ಬಹಿಷ್ಕಾರ ಹಾಕುವ ಪದ್ಧತಿಯಿತ್ತು. ಮದುವೆ ದೈವಕ್ಕೆ ಬರದಿದ್ದರೆ ಆತನನ್ನು ಬಹಿಷ್ಕಾರ ಹಾಕುವ ಪದ್ಧತಿ ಇತ್ತು. ಇದರಲ್ಲಿ ಚಾಜಾ ಏರುಕಟ್ಟುವ ಪದ್ಧತಿ ಚಾಲ್ತಿಯಲ್ಲಿತ್ತು. ಅಂದರೆ ಒಂದಷ್ಟು ಮಾಂಸದ ತುಂಡನ್ನು ಅರಿವೆಯಲ್ಲಿ ಗಂಟುಕಟ್ಟಿ ಅದನ್ನು ಮೇಲೆ ಕಟ್ಟಿದರೆ `ಏರುಗಟ್ಟೋದು’ ಎಂದು ಕರೆಯುತ್ತಿದ್ದರು. ಈ ಪದ್ಧತಿ ಮೂಲಕ ಕುಲದಿಂದ ಬಹಿಷ್ಕಾರ ಹಾಕುವುದಿತ್ತು.ಹೀಗೆ ಮದುವೆಯಲ್ಲಿ ಮಾಡುತ್ತಿದ್ದ ಮಾಂಸಾಹಾರ ಇಂತಹ ಸಮಸ್ಯೆಗಳಿಗೆ ಮುಳುವಾಯಿತು.
ಡಾ. ಅರುಣ್ ಜೋಳದಕೂಡ್ಲಿಗಿ ಬರೆಯುವ ಗಂಟಿಚೋರರ ಕಥನ ಸರಣಿಯ ಹದಿನೇಳನೆಯ ಕಂತು