ಹಸಿರು ಪುಕ್ಕ: ಡಾ. ಅಶ್ವಥ ಕೆ.ಎನ್. ಪುಸ್ತಕದ ಒಂದು ಬರಹ
ಪರದೆಯ ಹಿಂದೆ ಆಲದಮರದಿಂದ ಯಾವುದೋ ಭೂತವೋ! ಪಿಶಾಚಿಯೋ! ಪರ್… ಎನ್ನುತ್ತಾ ಜೋರಾಗಿ ಪಂಚೆಗೆ ಬಡಿಯಿತು. ಆ ಪಂಚೆ ನಮ್ಮಿಬ್ಬರ ಮುಖಕ್ಕೆ ಬಡಿದು, ಪಂಚೆಯ ಮೇಲೆ ಕುಳಿತಿದ್ದ ಪತಂಗ, ಹುಳ-ಹುಪ್ಪಟಗಳೆಲ್ಲ ಮೈಮೇಲೆ ಬಿದ್ದವು. ಅಮಾವಾಸ್ಯೆ ಮಧ್ಯರಾತ್ರಿಯ ಆ ಕಗ್ಗತ್ತಲಲ್ಲಿ ನಮ್ಮನ್ನೇ ಬೀಳಿಸುವಂತೆ ಬಂದ ಆ ಅನಿರೀಕ್ಷಿತ ಜೀವಿಯಿಂದ ಹೆದರಿ ಇನ್ನೇನು ಕಾಲಿಗೆ ಬುದ್ದಿ ಹೇಳಬೇಕು; ಅಷ್ಟರಲ್ಲಿ, ಪಂಚೆಯ ಪಕ್ಕದಲ್ಲೇ ನಮ್ಮಿಬ್ಬರ ನಡುವೆಯೇ ಹಸಿರು ಬಣ್ಣದ ಹಕ್ಕಿಯೊಂದು ಹಾರಿ ಹೋಯಿತು.
ಡಾ. ಅಶ್ವಥ ಕೆ.ಎನ್. ಬರೆದ ಹಕ್ಕಿಲೋಕದ ಕತೆಗಳ ಕೃತಿ “ಜಂಗಾಲ”ದ ಒಂದು ಬರಹ ನಿಮ್ಮ ಓದಿಗೆ