Advertisement

Tag: ಡಾ.ವಿನತೆ ಶರ್ಮ

ಆಸ್ಟ್ರೇಲಿಯನ್ ಬನ್ನಿಂಗ್ಸ್ ಸಂಸ್ಕೃತಿ: ವಿನತೆ ಶರ್ಮ ಅಂಕಣ

ರಜೆ ಮುಗಿದು ಕೆಲಸಕ್ಕೆ ವಾಪಸ್ಸಾದ ಸಹೋದ್ಯೋಗಿಗಳನ್ನು ‘ರಜೆಯಲ್ಲಿ ಏನೇನು ಮಾಡಿದಿರಿ’ ಎಂದು ಕೇಳುವುದು ಜನವರಿ ತಿಂಗಳ ಮೊದಲವಾರದ ಅತ್ಯಂತ ಮುಖ್ಯವಾದ ಕೆಲಸ. ಇದನ್ನು ಯಾರೂ ಮರೆಯುವಂತಿಲ್ಲ. ಹಾಗೆ ಕೇಳಿ ಅವರು-ನಾವು ಹೇಳುವ, ಹಂಚಿಕೊಳ್ಳುವ ಕಥೆಗಳು ರೋಚಕವೂ, ರಂಜನೀಯವೂ ಆಗಿರುತ್ತದೆ. ಈ ಬಾರಿ ಯಾತಕ್ಕೋ ಕೆಲವರು ರಜೆಯೆಲ್ಲ ಮನೆ ರಿಪೇರಿ ಕೆಲಸದಲ್ಲೇ ಕಳೆಯಿತು ಎಂದು ಉದ್ಗಾರವೆಳೆದರು. ಸ್ವಂತ ಮನೆಯಿದ್ದರೆ ನಾವು ಮಾಡುವ ರಿಪೇರಿ ಕೆಲಸಗಳಿಗೆ ಕೊನೆ-ಮೊದಲಿರುವುದಿಲ್ಲ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಲೆಕ್ಕಕ್ಕೆ ಸಿಗದ ೨೦೨೪ ಏಳು-ಬೀಳುಗಳು: ವಿನತೆ ಶರ್ಮ ಅಂಕಣ

ಕೂತಿದ್ದ ವಿಮಾನವು ನಿಧಾನವಾಗಿ Aotearoa ಸೌತ್ ಐಲ್ಯಾಂಡ್ ಅಂಚನ್ನು ಸಮೀಪಿಸಿದಾಗ ಎರಡು ಸೀಟ್ ಆಚೆ ಕೂತಿದ್ದ ಹುಡುಗ ‘ಕ್ಯಾನ್ ಯು ಸೀ ದ ಮೌಂಟೆನ್ಸ್?’ ಅಂತ ಕೇಳಿದ. ಕಿಟಕಿಯಿಂದ ಹಿಮಪರ್ವತಗಳನ್ನು ನೋಡುತ್ತಾ ಮೈಮರೆತಿದ್ದ ನನಗೆ ಅವನು ತನ್ನ ಮೊಬೈಲ್ ಫೋನ್ ಕೊಟ್ಟು ‘ಪ್ಲೀಸ್, ವಿಡಿಯೋ ಮಾಡಿ’ ಎಂದಾಗ ಅವನ ಫೋನನ್ನು ಕಿಟಕಿಯ ಮೇಲೆ ಹಿಡಿದು, ನಾನು ಪುನಃ ಪರ್ವತಗಳಲ್ಲಿ ಕಳೆದುಹೋದೆ. ನನ್ನ ಫೋನಿನಲ್ಲಿ ವಿಡಿಯೋ ಹಿಡಿಯುವ ಆಲೋಚನೆ ಕೂಡ ಬರಲಿಲ್ಲ. ಅದನ್ನು ನೆನಪಿಸಿಕೊಂಡರೆ ಯಾಕೋ ಈಗ ನನ್ನಮ್ಮನ ಹಿಮಾಲಯ ಪ್ರವಾಸಗಳ ಡೈರಿ ಜ್ಞಾಪಕಕ್ಕೆ ಬರುತ್ತಿದೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಕೀವೀ-ಕಾಂಗರೂ ದೇಶಸ್ಥರ ನೆಂಟಸ್ತನ: ವಿನತೆ ಶರ್ಮ ಅಂಕಣ

“ಈ ನಾಯಕರ ನಿಲುವು ಏನೆಂದರೆ ತಾವು ಆಸ್ಟ್ರೇಲಿಯಾವನ್ನು ಒಂದು ಆಧುನಿಕ ದೇಶವನ್ನಾಗಿ ಮಾತ್ರ ನೋಡುವುದು. ವಸಾಹತು ಚರಿತ್ರೆಯನ್ನು ಸಮರ್ಥಿಸುವುದಿಲ್ಲ ಮತ್ತು ಬಿಳಿಯರು ಬಂದು ಅಭಿವೃದ್ಧಿಪಡಿಸಿದ್ದರಿಂದ ನಾವು ಈ ಅದೃಷ್ಟದ ನಾಡಿನಲ್ಲಿದ್ದೀವಿ. ಮೂಲಜರಾದ ಅಬೊರಿಜಿನಲ್ ಮತ್ತು ಟೊರ್ರೆ ಸ್ಟ್ರೈಟ್ ದ್ವೀಪವಾಸಿಗಳು ಈ ಆಧುನಿಕ ಆಸ್ಟ್ರೇಲಿಯಾದಲ್ಲಿ ಅದಕ್ಕೆ ಹೊಂದಿಕೊಂಡು ಇರಬೇಕು, ತಮಗೆ ಪ್ರತ್ಯೇಕ ಅಸ್ಮಿತೆ ಬೇಕು ಎಂದು ಕೇಳಬಾರದು. ತನ್ನ ಪಕ್ಷ ಅಧಿಕಾರಕ್ಕೆ ಬಂದರೆ ಈ ರೆಫೆರೆಂಡಮ್ ಮುಂತಾದ ಬೇಡಿಕೆಗಳಿಗೆ ಆಸ್ಪದ ಕೊಡುವುದಿಲ್ಲ, ಎಂದಿದ್ದಾರೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಕೀವೀ ನಾಡಲ್ಲಿ ಕ್ಯಾಂಪರ್ ವ್ಯಾನ್ ಸುತ್ತಾಟ: ವಿನತೆ ಶರ್ಮ ಅಂಕಣ

ಈಚೀಚೆಗೆ ಕ್ಯಾಂಪರ್ ವ್ಯಾನ್ ಬಾಡಿಗೆಗೆ ತೆಗೆದುಕೊಂಡು ಪ್ರವಾಸ ಮಾಡುವ ಭಾರತೀಯರು/ಏಷ್ಯನ್ನರು ಹೆಚ್ಚಾಗುತ್ತಿದ್ದಾರೆ. ನಾನು ಕೇಳಿದಂತೆ ಹೀಗೆ ಕ್ಯಾಂಪರ್ ವ್ಯಾನ್ ಬಾಡಿಗೆಗೆ ಪಡೆದು ಪ್ರವಾಸ ಮಾಡುವ ಭಾರತೀಯರು ಒಳ್ಳೆ ಸಿದ್ಧತೆ ಮಾಡಿಕೊಂಡಿರುತ್ತಾರೆ. ಪ್ರತಿದಿನವೂ ಅಡುಗೆ ಮಾಡಲು ಬೇಕಾಗುವ ದಿನಸಿ ಸಾಮಗ್ರಿಯಿಂದ ಹಿಡಿದು ದಿನನಿತ್ಯದ ಕಾರ್ಯಕ್ರಮದ ವೇಳಾಪಟ್ಟಿಯನ್ನೂ ಹೊಂದಿಸಿಕೊಂಡಿರುತ್ತಾರೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಮುಖ್ಯಮಂತ್ರಿಯ ಹೆಜ್ಜೆಯಲ್ಲಿ ತಂದೆಯಿರಲಿ: ಡಾ. ವಿನತೆ ಶರ್ಮಾ ಅಂಕಣ

ಆಸ್ಟ್ರೇಲಿಯಾದಲ್ಲಿ ಬಿಳಿ ಆಸ್ಟ್ರೇಲಿಯನ್ನರು ರಾಜಕಾರಣಿಗಳನ್ನು ಕರೆದು ಕುರ್ಚಿ ಹಾಕುವುದಿಲ್ಲ. ‘ನಮ್ಮಂತೆಯೇ ನೀವು,’ ಎನ್ನುವ ಮನೋಭಾವ. ಅದಕ್ಕೂ ಮಿಗಿಲಾಗಿ, ಯಾವುದೇ ಹಿಂಜರಿಕೆಯಿಲ್ಲದೆ, ‘ನಾವು ಆರಿಸಿದ್ದರಿಂದ ನೀನು ಆ ಸ್ಥಾನಲ್ಲಿದ್ದೀಯ, ಕೊಟ್ಟಿರುವ ಕೆಲಸ ಸರಿಯಾಗಿ ಮಾಡು,’ ಅನ್ನುವುದನ್ನು ಮನದಟ್ಟು ಮಾಡಿಸುತ್ತಾರೆ. ಏನಾದರೂ ದೋಷಾರೋಪಗಳಿದ್ದರೆ ಜನರು ಪ್ರಧಾನಮಂತ್ರಿಯಿಂದ ಹಿಡಿದು ಸಣ್ಣಪುಟ್ಟ ಮಂತ್ರಿಗಳವರೆಗೂ ಅವರನ್ನ ನೇರವಾಗಿ ಪ್ರಶ್ನಿಸುತ್ತಾರೆ. ಅವಶ್ಯವಿದ್ದರೆ ಖಂಡಿಸುತ್ತಾರೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ