Advertisement

Tag: ಡಾ.ವಿನತೆ ಶರ್ಮಾ

ಬೆಟ್ಟದಾ ಮೇಲೊಂದು ಮನೆಯ ಮಾಡಿ…: ವಿನತೆ ಶರ್ಮಾ ಅಂಕಣ

“ದಿನಗಳಿಕೆ ಆದಾಯವನ್ನೇ ನೆಚ್ಚಿಕೊಂಡವರಿಗೆ ಇದೆಷ್ಟು ಆತಂಕ ಹುಟ್ಟಿಡುವ ಪರಿಸ್ಥಿತಿ! ಈಗಂತೂ ಆಸ್ಟ್ರೇಲಿಯಾ ದೇಶ ಪೂರ್ತಿ ಹೆಚ್ಚಿನ ಉದ್ಯೋಗ ಸ್ಥಳಗಳಲ್ಲಿ ಚಾಲನೆಯಲ್ಲಿರುವುದು ಅರೆಕಾಲಿಕ ಮತ್ತು ತಾತ್ಕಾಲಿಕ ಕಾಂಟ್ರಾಕ್ಟ್ ಮಾದರಿ. ಅಂದರೆ ವಾರಕ್ಕಿಷ್ಟು ಗಂಟೆಗಳ ಕಾಲ ಕೆಲಸ- ಪ್ರತಿ ಕೆಲ ತಿಂಗಳ ಮಟ್ಟಿಗೆ ಮಾತ್ರ ಅನ್ನೋ ತರಹದ ಕಾಂಟ್ರಾಕ್ಟ್. ಅವರಿಗೆ ರಜೆ, ಬೋನಸ್, ಸಂಸ್ಥೆ ಕೊಡಬೇಕಾದ ಪೆನ್ಷನ್ ಸವಲತ್ತು ಇರಬಹುದು..”

Read More

ಹೊರಾಂಗಣ ಕಲಿಕೆ ಮತ್ತು ಹೆಣ್ಣಿನ ಒಳದನಿ: ವಿನತೆ ಶರ್ಮಾ ಅಂಕಣ

“ಕೇವಲ ಹೊರಾಂಗಣ ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಕಾರಣದಿಂದಲೇ ಅದೆಷ್ಟೋ ಹೆಂಗಸರ ಗಂಡು ಜೀವನಸಂಗಾತಿಗಳು ಅವರನ್ನು ಬಿಟ್ಟುಹೋದದ್ದಿದೆ. ತಾಯಂದಿರು ತಮ್ಮ ಹೆಣ್ಣುಮಕ್ಕಳಿಗೆ ಧೈರ್ಯವನ್ನು ತುಂಬಿ ಆತ್ಮಸ್ಥೈರ್ಯವನ್ನು ಹೆಚ್ಚಿಸಿದ ಕಥೆಗಳಿವೆ. ತಮ್ಮ ಖಾಸಗಿ ಜೀವನದಲ್ಲಿನ ತಮ್ಮ ಸ್ವಲಿಂಗ ಸಂಬಂಧ ಆಯ್ಕೆಯಿಂದಾಗಿ ಕೆಲವರು ಕೆಲಸದ ಸ್ಥಳದಲ್ಲಿ ತಾರತಮ್ಯಕ್ಕೊಳಗಾಗಿ, ಬೆರಳು ತೋರಿಸುವ ಮಂದಿಯ ಕೈಯಲ್ಲಿ ಅನಿಸಿಕೊಂಡು ತಮ್ಮ ವೃತ್ತಿಜೀವನದಲ್ಲಿ ಅದೆಷ್ಟು ನರಳಿದ್ದಾರೆ…”

Read More

ದನಿಯ ಒಂದು ಹನಿಯಾದಾಗ: ವಿನತೆ ಶರ್ಮಾ ಅಂಕಣ

“ಪೂರ್ವ-ಪಶ್ಚಿಮ ದೇಶಗಳಲ್ಲಿ, ಉತ್ತರ-ದಕ್ಷಿಣ ಧ್ರುವಗಳಲ್ಲಿ, ಒಳನಾಡು-ಹೊರನಾಡಿನಲ್ಲಿ ಜನನುಡಿಗೆ ಬೆಲೆ ಸಂದ ಉದಾಹರಣೆಗಳು ನಮ್ಮಲ್ಲಿವೆ. ಜನನಾಯಕರು ಸಾಮಾನ್ಯಜನರ ಸತ್ಯಕ್ಕೆ ತಲೆಬಾಗಿದ ನಿದರ್ಶನಗಳಿವೆ. ಆದರೂ … ಉರುಳುತ್ತಿರುವ ಕಾಲಚಕ್ರ ಕೆಲ ಕಹಿಸತ್ಯಗಳನ್ನು, ಕೆಲ ಗುರುತರ ಬದಲಾವಣೆಗಳನ್ನು ದಾಖಲಿಸುತ್ತಿದೆ. ಅಮೆರಿಕ ದೇಶದ ಈ ಹಿಂದಿನ ಅಧ್ಯಕ್ಷ ಒಬಾಮ ಹೇಳಿದಂತೆ ‘ವಯಸ್ಸಾದ ಕೆಲ ಹಿರಿಯರು ಅದರಲ್ಲೂ ಗಂಡಸರು’ ತಪ್ಪು ಮಾಡುತ್ತಿದ್ದಾರೆ.”

Read More

ದೇಸಿ ವಿದ್ಯಾರ್ಥಿಗಳ ವಿದೇಶಿ ಹಾಡುಪಾಡು: ವಿನತೆ ಶರ್ಮಾ ಅಂಕಣ

“ಇಷ್ಟೆಲ್ಲಾ ಆಗುವಷ್ಟರಲ್ಲಿ ಅವನ ಇಬ್ಬರು ಸ್ನೇಹಿತರು ವಾಪಸ್ ಹೈದರಾಬಾದಿನ ತಮ್ಮನೆಗೆ ವಾಪಸ್ಸಾಗಿದ್ದರು. ಇವನು ಆಶಾವಾದಿ, ದೇಶದ ಆರ್ಥಿಕತೆಗೆ ಅನುಕೂಲವಾಗುವ ಮತ್ತೊಂದು ಆರು ತಿಂಗಳ ಕೋರ್ಸಿಗೆ ಸೇರಿಕೊಂಡು ಪಾರ್ಟ್ ಟೈಮ್ ವಿದ್ಯಾರ್ಥಿಯಾದ. ಈಗ ಆ ಕೋರ್ಸನ್ನ ಮಾಡುತ್ತಲೇ ಜೀವನೋಪಾಯಕ್ಕಾಗಿ ಎರಡು ಕಡೆ ಕೆಲಸ ಮಾಡುತ್ತಿದ್ದಾನೆ. ಅವನ ಒಂದು ಉದ್ಯೋಗವಿರುವುದು ಪಿಜ್ಝಾ ಅಂಗಡಿಯಲ್ಲಿ..”

Read More

ಹಲ್ಲಿ, ಹಾವು, ಚೇಳುಗಳ ಸ್ವರ್ಗ!: ಡಾ.ವಿನತೆ ಶರ್ಮಾ ಅಂಕಣ

“ಹೇಳಿಕೇಳಿ, ಆಸ್ಟ್ರೇಲಿಯಾದ ಪರಿಸರ ಬಹು ಸೂಕ್ಷ್ಮವಾದದ್ದು, ಬೇರೆ ಖಂಡಗಳಿಗಿಂತ ಭಿನ್ನವಾದದ್ದು. ಪರದೇಶದಿಂದ ಆಮದಾಗಿ ಬಂದ ಕಪ್ಪೆ ಈ ದೇಶದ ಸ್ವಾಭಾವಿಕ ಪರಿಸರಕ್ಕೆ ಮತ್ತು ಜೀವಚರಗಳಿಗೆ ದುಃಸ್ವಪ್ನವಾಗಿಬಿಟ್ಟಿತು. ಈ ಕಪ್ಪೆಯ ವಂಶಾಭಿವೃದ್ದಿಯನ್ನ ತಡೆಗಟ್ಟಲು, ಅದನ್ನು ಧೈರ್ಯದಿಂದ ಎದುರಿಸಿ ನುಂಗಿ ನೀರುಕುಡಿಯಲು ಇಲ್ಲಿ ಯಾವುದೇ ಪರಭಕ್ಷಕ ಪ್ರಾಣಿ ಇರಲಿಲ್ಲ. ಕಪ್ಪೆಗೆ ಆಸ್ಟ್ರೇಲಿಯಾದಲ್ಲಿ ಯಾವ ಎದುರಾಳಿಯೂ ಇಲ್ಲವಾಗಿ, ಇಲ್ಲಿನ ಸ್ವಾತಂತ್ರ್ಯ ಅದಕ್ಕೆ ತುಂಬಾ ಇಷ್ಟವಾಗಿಹೋಯ್ತು.”

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ