Advertisement

Tag: ಡಾ.ವಿನತೆ ಶರ್ಮ

ಬನ್ಯಾ ಮರ ಹಬ್ಬ ಮತ್ತು ಬನ್ಯಾ ಡ್ರೀಮಿಂಗ್

ಅಬೊರಿಜಿನಲ್ ಜನರ ಜೀವನದಲ್ಲಿ ಡ್ರೀಮಿಂಗ್ ಸ್ಟೋರೀಸ್ ಎನ್ನುವುದು ಅವಿಭಾಜ್ಯ ಅಂಗವಾಗಿದೆ. ಭಾರತೀಯ ಹಿಂದೂ ಧರ್ಮದಲ್ಲಿ ದೇವರುಗಳು ಮತ್ತು ಅನೇಕಾನೇಕ ಪುರಾಣಗಳು ಹಾಸುಹೊಕ್ಕಾಗಿರುವಂತೆ. ಅಬೊರಿಜಿನಲ್ ಜೀವನದಲ್ಲಿ ಪ್ರತಿಯೊಂದನ್ನೂ ಸ್ಪಿರಿಟ್‌ಗಳು, ಅವುಗಳು ಎಲ್ಲ ಬಗೆಯ ಜೀವಜಾಲದೊಂದಿಗೆ ಹೊಂದಿರುವ ಸಂಬಂಧವು ಎಲ್ಲರ ಜೀವನದ ಆಗುಹೋಗುಗಳನ್ನು ನಿರ್ದೇಶಿಸುತ್ತವೆ.
ಡಾ. ವಿನತೆ ಶರ್ಮ ಬರೆಯುವ ‘ಆಸ್ಟ್ರೇಲಿಯಾ ಪತ್ರ’

Read More

ಆಸ್ಟ್ರೇಲಿಯನ್ ಕ್ಯಾಂಪಿಂಗ್ ಕಥಾನಕಗಳು – ಭಾಗ ಎರಡು

ಹಾಗೆಂದು ನಮ್ಮೆಲ್ಲಾ ಅನುಭವಗಳು ಆನಂದತುಲಿತಮಯ, ಅದ್ಭುತರಮ್ಯ, ಲೋಕಾತೀತವಾದವೇನಲ್ಲ. ಹೆಚ್ಚಿನ ಬಾರಿ ಖುಷಿಖುಷಿಯಿಂದ ಕೂಡಿದ್ದರೂ, ಒಮ್ಮೊಮ್ಮೆ ಗೊಳೋ ಎಂದು ಅತ್ತಿರುವುದೂ ನಿಜ. ಇಂತಹ ಕ್ಯಾಂಪಿಂಗ್ ಸಾಹಸಗಳಲ್ಲಿ ಕೆಲವು ಬಾರಿ ಅಪರಿಚಿತ ದೇಶಗಳಲ್ಲಿ, ಸ್ಥಳಗಳಲ್ಲಿ ಪರಿಸ್ಥಿತಿ ಕೈಕೊಟ್ಟು ಕ್ಯಾಂಪಿಂಗ್ ಪಟು ಜೀಬೀ ಪೇಚಿಗೆ ಸಿಲುಕಿ, ನಾನು ನಮ್ಮ ಮಕ್ಕಳ ಮೈದಡವುತ್ತಾ ಕಂಗಾಲಾಗಿ ಕಣ್ಣೀರಿಟ್ಟಿದ್ದೂ ನಿಜ. ಆದರೂವೆ… ಧೈರ್ಯಗೆಡದೆ ಜರ್ಮನ್ ಪೊಲೀಸರಿಗೆ ಇಂಗ್ಲೀಷಿನಲ್ಲಿ ಉತ್ತರಿಸಿದ್ದಿದೆ.
ಡಾ. ವಿನತೆ ಶರ್ಮ ಬರೆಯವ “ಆಸ್ಟ್ರೇಲಿಯಾ ಪತ್ರ”

Read More

ಆಸ್ಟ್ರೇಲಿಯನ್ ಕ್ಯಾಂಪಿಂಗ್ ಕಥಾನಕಗಳು: ಭಾಗ ಒಂದು

ಈ ಬಾರಿ ನಾವು ಹೂಡಿದ ‘ಅಡಿಗೆಮನೆ’ ಇದ್ದದ್ದು ಮರಗಳ ಅಂಚಿನಲ್ಲಿ. ಈ ಅಂಚಿನ ಆಚೆ ಕಡೆ ನೂರು ಮೀಟರ್ ದೂರದಲ್ಲಿ ನೀರಿಲ್ಲದೆ ಬೇಸಿಗೆಯ ಬಿಸಿಲಿಗೆ ಸೊರಗಿದ್ದ ನದಿಯಿತ್ತು. ಕಳೆದ ಫೆಬ್ರವರಿ-ಮಾರ್ಚ್ ತಿಂಗಳುಗಳಲ್ಲಿ ಸಂಭವಿಸಿದ ಅಧಿಕ ಮಳೆ-ಜಲ ಪ್ರವಾಹದಲ್ಲಿ ಈ ನದಿ ಉಕ್ಕೇರಿ ಆ ನೂರೂ ಮೀಟರ್ ದೂರವನ್ನಾಕ್ರಮಿಸಿಕೊಂಡು ಈ ಮರಗಳ ಅಂಚಿನ ತನಕ ಬಂದಿತ್ತು ಎನ್ನುವುದು ಅಲ್ಲಿ ಚೆಲ್ಲಾಡಿದ್ದ ಮರಕೊಂಬೆಗಳು, ರೆಂಬೆಗಳಿಂದ ಸ್ಪಷ್ಟವಾಗಿತ್ತು. ನಾವೇನೋ ಖುಷಿಯಿಂದಲೇ ಅಲ್ಲಿ ಅಡಿಗೆಮನೆ ಮತ್ತು ನೆಲದ ಹಾಸುಗಳನ್ನು ಸ್ಥಾಪಿಸಿದ್ದೆವು. ಒಂದೆರೆಡು ದಿನಗಳಲ್ಲಿ ಬಿದ್ದ ಮಳೆಯಿಂದ ನಮ್ಮ ಖುಷಿ ಕಡಿಮೆಯಾಯ್ತು. ನೆಲದ ಹಾಸು ಮಳೆನೀರು, ಮಣ್ಣಿನ ರಾಡಿಯಾಗಿತ್ತು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಸಂಗೀತ ಸಂಜೆಗಳ ಇಬ್ಬಗೆಯ ಸುಧೆ

ಆಸ್ಟ್ರೇಲಿಯಾದ ಎಂದೆಂದಿಗೂ ತಿಳಿಯಾಗಿಲ್ಲದ ಇಬ್ಬಗೆಯೆಂದರೆ ಆಸ್ಟ್ರೇಲಿಯನ್ ಅಬೊರಿಜಿನಲ್ ಜನಜೀವನದ ಮುಖ್ಯಭಾಗವಾದ ಸಂಗೀತ ಮತ್ತು ಆಸ್ಟ್ರೇಲಿಯಕ್ಕೆ ಬರಮಾಡಿಕೊಂಡ ಪಾಶ್ಚಾತ್ಯ ಸಂಗೀತ. ಅಬೊರಿಜಿನಲ್ ಜನರನ್ನು ಸಂಪೂರ್ಣವಾಗಿ ನಿರ್ನಾಮ ಮಾಡಲು ವಸಾಹತುಶಾಹಿಗಳು ಪ್ರಯತ್ನಿಸಿದರೂ ಇಪ್ಪತ್ತನೇ ಶತಮಾನದಲ್ಲಿ ಅಬೊರಿಜಿನಲ್ ಸಂಗೀತ, ನೃತ್ಯ ಮತ್ತು ಚಿತ್ರಕಲೆಗೆ ಗಮನ ಕೊಟ್ಟು, ಅವುಗಳಲ್ಲಿರುವ ವಿಶೇಷಣಗಳನ್ನು ಗುರುತಿಸಿದರು.
ಡಾ. ವಿನತೆ ಶರ್ಮ ಅಂಕಣ

Read More

ಆಸ್ಟ್ರೇಲಿಯದ ಮಳೆ ಪ್ರವಾಹಗಳು, ಸೋಲುಗೆಲುವುಗಳು

ಈ ಬಾರಿ ವಿಕ್ಟೊರಿಯಾ ರಾಜ್ಯವಷ್ಟೇ ಅಲ್ಲ ಅದರ ಕೆಳಗಿನ ಟಾಸ್ಮೆನಿಯಾ ರಾಜ್ಯದ ಭಾಗಗಳಲ್ಲೂ ಪ್ರವಾಹವುಂಟಾಗಿದೆ. ಟಾಸ್ಮೆನಿಯಾವು ಕಡಿಮೆ ಜನಸಂಖ್ಯೆ, ಎಲ್ಲೆಲ್ಲೂ ಕಂಗೊಳಿಸುವ ಪುರಾತನ ಹಸಿರು ಕಾಡುಗಳಿಗೆ ಹೆಸರಾದದ್ದು. ಹಾಗಾಗಿ ಪ್ರವಾಹದ ವಿಷಯ ಇನ್ನೂ ಅಪರೂಪದ ಸಂಗತಿ ಇಲ್ಲಿ. ಹೆಚ್ಚು ಕಡಿಮೆ ದೇಶದ ಇಡೀ ಪೂರ್ವಭಾಗದಲ್ಲಿ ಮಳೆಮೋಡಗಳ ಜೊತೆ ಚಿಂತೆಮೋಡಗಳು ಕೂಡ ಕವಿದಿವೆ. ದೇಶದ ಆಚೆಕಡೆಯ ಮರುಭೂಮಿಗಳು ಬೆಂದು ಕಾದು ಅಲ್ಲಿನ ಕಾವುಮೋಡಗಳು ಮರುಭೂಮಿಯನ್ನು ದಾಟಿಬಿಟ್ಟಿವೆ.
ಡಾ. ವಿನತೆ ಶರ್ಮ ಅಂಕಣ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ