ಕಾಲಕ್ಕೆ ಶರಣು ಎನ್ನೋಣ: ವಿನತೆ ಶರ್ಮ ಅಂಕಣ
ವಾರಾಂತ್ಯಗಳಲ್ಲಿ ದೇಶದ ರಾಜಧಾನಿ ನಗರಗಳಲ್ಲಿ ನಡೆಸುವ ಸಾರ್ವಜನಿಕ ಪ್ರದರ್ಶನಗಳು, ಬಹುಸಂಸ್ಕೃತಿಗಳವರ ಕಾರ್ಯಕ್ರಮಗಳು ಹೆಚ್ಚಾಗಿವೆ. ೨೦೨೩ ರ ಕೊನೆಯಲ್ಲಿ ನಾವು ಮೂರು, ನಾಲ್ಕು ಬಾರಿ ಇಸ್ರೇಲ್, ಪ್ಯಾಲೆಸ್ಟೈನ್-ಗಾಝಾ, ಯೂಕ್ರೇನ್ ಮೂಲಗಳ ಜನರು ನಡೆಸುತ್ತಿದ್ದ ಪ್ರದರ್ಶನಗಳ ಪರಿಣಾಮಕ್ಕೆ ಸಿಲುಕಿದ್ದೆವು. ಅದೇನೂ ದೊಡ್ಡ ವಿಷಯವಲ್ಲ ಬಿಡಿ. ಪ್ರದರ್ಶನದಲ್ಲಿ ಭಾಗವಹಿಸಿದ್ದ ಪ್ರತಿರೋಧಿಗಳು ಘೋಷಣೆಗಳನ್ನು ಕೂಗುತ್ತಾ ರಸ್ತೆಗಿಳಿದಾಗ ಪೊಲೀಸರು ರಸ್ತೆ ಬಂದ್ ಮಾಡಿದರು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”