Advertisement

Tag: ಡಾ. ವಿಶ್ವನಾಥ ಎನ್.‌ ನೇರಳಕಟ್ಟೆ

ಚಿನ್ನದ ದ್ವೀಪ, ಶವದ ಹೂವು ಮತ್ತು ಮಲೇಷ್ಯಾ: ಡಾ. ವಿಶ್ವನಾಥ ನೇರಳಕಟ್ಟೆ ಸರಣಿ

ಮಲಯ ಪೆನಿನ್ಸುಲಾ ಮತ್ತು ಬೋರ್ನಿಯೊದ ಉತ್ತರ ಕರಾವಳಿ ಪ್ರದೇಶವು ಪ್ರಪಂಚದ ಪ್ರಮುಖ ಕಡಲ ವ್ಯಾಪಾರ ಮಾರ್ಗಗಳಲ್ಲಿ ಒಂದಾಗಿದೆ. ಏಷ್ಯಾದ ಇತರ ಭಾಗಗಳ ಜನರು ಇಲ್ಲಿಗೆ ಭೇಟಿ ಕೊಡುತ್ತಾರೆ. ಈ ಕಾರಣದಿಂದಾಗಿ ಆಗ್ನೇಯ ಏಷ್ಯಾದ ಬೇರೆ ರಾಷ್ಟ್ರಗಳಲ್ಲಿ ಕಂಡುಬರುವಂತೆ ಮಲೇಷ್ಯಾದಲ್ಲಿಯೂ ಜನಾಂಗೀಯ ವೈವಿಧ್ಯತೆಯಿದೆ.
ಡಾ. ವಿಶ್ವನಾಥ ಎನ್.‌ ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿಯಲ್ಲಿ ಮಲೇಷ್ಯಾ ದೇಶದ ಕುರಿತ ಬರಹ ನಿಮ್ಮ ಓದಿಗೆ

Read More

ಒಡೆದದ್ದನ್ನು ಇಡಿಯಾಗಿಸಿಕೋ ಮೆಕ್ಸಿಕೋ: ಡಾ. ವಿಶ್ವನಾಥ ನೇರಳಕಟ್ಟೆ ಸರಣಿ

ವಿಶ್ವದಲ್ಲಿ ಅತೀ ಹೆಚ್ಚು ಜ್ವಾಲಾಮುಖಿಗಳಿಗೆ ನೆಲೆಯಾಗಿರುವ ದೇಶ ಮೆಕ್ಸಿಕೋ. ರಾಷ್ಟ್ರದ ಹೆಚ್ಚಿನ ಪರ್ವತ ಪ್ರದೇಶಗಳಲ್ಲಿ ಜ್ವಾಲಾಮುಖಿಗಳು ಕಂಡುಬರುತ್ತವೆ. ಆಶ್ಚರ್ಯದ ಸಂಗತಿಯೆಂದರೆ, ವಿಶ್ವದ ಅತ್ಯಂತ ಚಿಕ್ಕ ಜ್ವಾಲಾಮುಖಿಯೂ ಇರುವುದು ಮೆಕ್ಸಿಕೋದಲ್ಲಿ. ಪ್ಯೂಬ್ಲಾ ಸಮೀಪದಲ್ಲಿರುವ ಕ್ಯುಕ್ಸ್ಕೊಮೇಟ್ ಜ್ವಾಲಾಮುಖಿಯ ಎತ್ತರ ಕೇವಲ 43 ಅಡಿ. ಇದು ಈಗ ನಿಷ್ಕ್ರಿಯವಾಗಿದೆ. 1910ರಲ್ಲಿ ಮೆಕ್ಸಿಕೋದಲ್ಲಿ ಕ್ರಾಂತಿ ನಡೆದಿತ್ತು. ಇದರ ಪರಿಣಾಮವನ್ನು ಈಗಿನ ಕಾಲಘಟ್ಟದಲ್ಲಿಯೂ ಕಾಣುವುದಕ್ಕೆ ಸಾಧ್ಯವಿದೆ.
ಡಾ. ವಿಶ್ವನಾಥ ಎನ್.‌ ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿ

Read More

ಚಿ ಛೀ ಚೀನಾ: ಡಾ. ವಿಶ್ವನಾಥ ಎನ್ ನೇರಳಕಟ್ಟೆ ಸರಣಿ

ಅಂದವಾಗಿ ಬರೆಯುವ ಕಲೆಯಾದ ಕ್ಯಾಲಿಗ್ರಫಿ ಮತ್ತು ಚಿತ್ರಕಲೆಗಳ ಬಗ್ಗೆ ಚೀನಾದ ಜನರಿಗೆ ಅತೀವವಾದ ಆಸಕ್ತಿಯಿದೆ. ಚಿತ್ರಕಲೆ ಮತ್ತು ಕ್ಯಾಲಿಗ್ರಫಿ ಕಲೆಗಳು ಚೀನಾದಲ್ಲಿ ಒಂದಕ್ಕೊಂದು ಪೂರಕ ಎನ್ನುವಂತೆ ಬೆಳೆದುಕೊಂಡು ಬಂದಿವೆ. ವರ್ಣಚಿತ್ರವನ್ನು ರಚಿಸಿದ ಬಳಿಕ ಆ ವರ್ಣಚಿತ್ರಕ್ಕೆ ಸರಿಹೊಂದುವ ಕವಿತೆಯನ್ನು ಕಲಾತ್ಮಕವಾಗಿ ಬರೆಯಲಾಗುತ್ತಿತ್ತು. ಹೀಗೆ ಕ್ಯಾಲಿಗ್ರಫಿಯು ಚಿತ್ರಕಲೆಯ ಸೊಬಗನ್ನು ಹೆಚ್ಚಿಸುತ್ತಿತ್ತು. ಚಿತ್ರಕಲೆಗೆ ಅನುಗುಣವಾಗಿ ಕ್ಯಾಲಿಗ್ರಫಿ ಸ್ಪಂದಿಸುತ್ತಿತ್ತು. ಹಿಂದಿನ ಕಾಲದ ಚೀನೀಯರಿಗೆ ಅಕ್ಷರಗಳ ಬಗ್ಗೆ ವಿಪರೀತವೆನಿಸುವ ಮೋಹವಿತ್ತು.
ಡಾ. ವಿಶ್ವನಾಥ ಎನ್.‌ ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿ

Read More

ವಿಭಜನೆ, ಅಸ್ತಿತ್ವವಾದ ಮತ್ತು ಪೋಲಂಡ್: ಡಾ. ವಿಶ್ವನಾಥ ಎನ್ ನೇರಳಕಟ್ಟೆ ಸರಣಿ

ಈಗಿನ ಕಾಲಘಟ್ಟದಲ್ಲಿ ಪೋಲಂಡ್‌ನ ಸಾಂಸ್ಕೃತಿಕ ಬಹುತ್ವ ಕ್ಷೀಣಿಸತೊಡಗಿದೆ. ನಗರಕೇಂದ್ರಿತವಾದ ಸಂಸ್ಕೃತಿಯೇ ಪ್ರಾಬಲ್ಯ ಮೆರೆಯುತ್ತಾ, ಎಲ್ಲರ ಜೀವನ ವಿಧಾನವನ್ನು ಅದೇ ಬಗೆಯಲ್ಲಿ ರೂಪಿಸತೊಡಗಿದೆ. ಪೋಲಂಡ್‌ನ ಆಧುನಿಕ ಮಾಧ್ಯಮಗಳೂ ಸಹ ಏಕರೂಪದ ಸಂಸ್ಕೃತಿಯೆಡೆಗೆ ಒತ್ತು ನೀಡುತ್ತಿವೆ. ಪೋಲಂಡ್‌ನ ಪರಂಪರೆಯನ್ನು ಸಂರಕ್ಷಿಸಬೇಕೆಂಬ ಮನೋಭಾವದ ಕೆಲವರು ಜಾನಪದ ಸಂಸ್ಕೃತಿಯಲ್ಲಿ ಕಂಡುಬರುವ ಧಾರ್ಮಿಕ ಸಂಗತಿಗಳ ಕಡೆಗೆ ಗಮನಹರಿಸುತ್ತಿದ್ದಾರೆ.
ಡಾ. ವಿಶ್ವನಾಥ ಎನ್.‌ ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿಯಲ್ಲಿ ಪೋಲಂಡ್‌ ದೇಶದ ಕುರಿತ ಬರಹ ನಿಮ್ಮ ಓದಿಗೆ

Read More

ನೇಪಾಳವೆಂಬ ಮತ್ತೊಂದು ಭಾರತ: ಡಾ. ವಿಶ್ವನಾಥ ಎನ್ ನೇರಳಕಟ್ಟೆ ಸರಣಿ

ನೇಪಾಳದ ಜನರು ಶ್ರಮಜೀವಿಗಳು ಎನ್ನುವುದರಲ್ಲಿ ಎರಡು ಮಾತಿಲ್ಲ. ಪರ್ವತ ಪ್ರದೇಶಗಳನ್ನು ಅವರು ಏರುವ ಮತ್ತು ಇಳಿಯುವ ರೀತಿ ಎಂಥವರಲ್ಲೂ ಅಚ್ಚರಿ ಮೂಡಿಸುತ್ತದೆ. ಮೊದಮೊದಲು ಪರ್ವತಾರೋಹಣಕ್ಕೆ ಹೊರಟವರಿಗೆ ಖಾಲಿ ಕೈಯ್ಯಲ್ಲಿ ಪರ್ವತದ ತುದಿ ತಲುಪುವುದೇ ಅಬ್ಬಬ್ಬಾ ಎನಿಸಿಬಿಡುತ್ತದೆ. ಆದರೆ ನೇಪಾಳದವರು ತಮ್ಮ ಬೆನ್ನ ಮೇಲೆ ಭಾರವಾದ ಚೀಲಗಳನ್ನು ಇಲ್ಲವೇ ವಸ್ತುಗಳನ್ನು ಹೊತ್ತುಕೊಂಡು ಪರ್ವತವನ್ನು ಏರುತ್ತಾರೆ; ಇಳಿಯುತ್ತಾರೆ.
ಡಾ. ವಿಶ್ವನಾಥ ಎನ್.‌ ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿಯಲ್ಲಿ ನೇಪಾಳದ ಕುರಿತ ಬರಹ ನಿಮ್ಮ ಓದಿಗೆ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ