ನಮ್ಮದೇ ಮನೆಯ ಕಥನವೆಂಬಂತೆ ಕಾಡುವ ಕಾದಂಬರಿ
‘ಜೀವಕೊಡಲೇ ಚಹಾ ಕುಡಿಯಲೇ..’ ಎಂಬ ಕಾದಂಬರಿಯು ಮೇಲ್ನೋಟಕ್ಕೆ ತ್ರಿಕೋನ ಪ್ರೇಮ ಕತೆ ಅನಿಸಿದರೂ ಇಲ್ಲಿ ಹಲವು ಆಯಾಮಗಳಿವೆ. ಕೊನೆಯವರೆಗೂ, ತನ್ನದೂ ಪ್ರೀತಿಯೇ ಎಂದು ಅರಿಯರಲಾರದೇ ತಲ್ಲಣಗೊಳ್ಳುವ ಹುಡುಗನ ಪಾಡು ಇಲ್ಲಿದೆ. ಗಾಲಿಬ್ ಕವಿತೆ ಮೂಲಕ ತನ್ನದೇ ಭಾವ ಬೆರೆಸಿ ಶಾಯರಿ ರಚಿಸಿ ಪ್ರೀತಿ ವ್ಯಕ್ತಪಡಿಸುವ ಫಾತಿಮಾ, ಸಲಿಂಗಕಾಮ ಆಯ್ಕೆ ಮಾಡಿಕೊಳ್ಳುವ ದಿಟ್ಟೆ ಚಿತ್ರಾ, ಕೊನೆಗೂ ದಕ್ಕಿದ ಪ್ರೀತಿಯ ಸಾಕ್ಷಾತ್ಕಾರದ ಸನ್ನಿವೇಶಗಳಿವೆ. ಈ ಹಂತದಲ್ಲಿ ಕಾದಂಬರಿಯು ವಿಭಿನ್ನ ತಿರುವು ಪಡೆದುಕೊಳ್ಳುವುದು. ಆ ತಿರುವೇನು ಎಂಬುದನ್ನು ಓದುಗರೇ ಕಂಡುಕೊಳ್ಳಬೇಕು. ಕೊಂಕಣಿಯಿಂದ ಕನ್ನಡಕ್ಕೆ ಅನುವಾದಗೊಂಡ ಕಾದಂಬರಿಯ ಕುರಿತು ತಮ್ಮ ಅನಿಸಿಕೆ ಬರೆದಿದ್ದಾರೆ ಜ್ಯೋತಿ ಭಟ್.
Read More