ಕಂಬನಿ ಮಿಡಿದ ಕರಾಳ ದಿನ: ಪೂರ್ಣೇಶ್ ಮತ್ತಾವರ ಸರಣಿ
ಹೊರಗೆ ನೋಡಿದರೆ ಚಂದಿರನ ಬೆಳಕಿತ್ತು! ನಮ್ಮೆದೆಗಳಲ್ಲಿ ಆವರಿಸಿದ್ದ ಗಾಢಾಂಧಕಾರವನ್ನು ಬಡಿದೋಡಿಸಲಾಗದ ಆ ಬೆಳಕು ಶೋಕ ಸೂಚನೆಗೆ ಹೊತ್ತಿಸಿದ್ದ ಸೊಡರಿನಂತೆಯೇ ನಮಗೆ ಗೋಚರಿಸಿತ್ತು! ಮಲಗ ಹೊರಟರೆ ಅವನದೇ ನೆನಪುಗಳು. ನಿದ್ದೆ ಬರುವಂತಿರಲಿಲ್ಲ… ಬಂದ ಅಲ್ಪ ಸ್ವಲ್ಪ ನಿದ್ದೆಯಲ್ಲೂ ಹೊರಗೆ ಅವನು ಬಂದಂತೆ, ನೋಡಿ ನಾವು ಅಚ್ಚರಿಪಟ್ಟಂತೆ, ಓಡಿ ಹೋಗಿ ಅಪ್ಪಿದಂತೆ ಕನಸುಗಳು.. ಎಚ್ಚರಗೊಂಡು ಕುಳಿತು, ಒಡನೆಯೇ ಬಾಗಿಲು ತೆರೆದು ಹೊರ ನಡೆದರೆ, “ಪ್ರಸನ್ನ, ಪ್ರಸನ್ನ,…” ಎಂದು ಕರೆದರೆ…. ಅಲ್ಲಿ ಅವನಿಲ್ಲ!
ಪೂರ್ಣೇಶ್ ಮತ್ತಾವರ ಬರೆಯುವ “ನವೋದಯವೆಂಬ ನೌಕೆಯಲ್ಲಿ…” ಸರಣಿಯ ಎಂಟನೆಯ ಬರಹ