ಭೂಮಾನುಭೂತಿಯ ಬರಹಗಳು: ನಾರಾಯಣ ಯಾಜಿ ಕೃತಿಯ ಕುರಿತ ಹರೀಶ್ ಕೇರ ಮುನ್ನುಡಿ
ಈ ಬರಹಗಳು ಆಕಾಶ ಹಾಗೂ ಭೂಮಿಯ ನಡುವೆ ಸಲೀಸಾಗಿ ಯಾನ ಕೈಗೊಳ್ಳುತ್ತವೆ. ಪುರಾಣೇತಿಹಾಸಗಳ ಕ್ಲಾಸಿಕ್ ಸಾಹಿತ್ಯಗಳ ಆಕಾಶ ತತ್ವಗಳ ಜೊತೆಜೊತೆಗೇ ನಮ್ಮಂಥ ಸಾಮಾನ್ಯ ಮಾನವರ ನೆಲಕ್ಕಂಟಿದ ಬದುಕಿನ ಭೂಮಿ ತತ್ವವೂ ಹದವಾಗಿ ಬೆರೆತುಕೊಂಡಿವೆ. ಮಹಾತ್ಮ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ ಹಾಗೂ ಸ್ವಾತಂತ್ರ್ಯ ಹೋರಾಟದ ಬಗ್ಗೆ ಇರುವ ಲೇಖನಗಳು ಈ ಕೃತಿಯ ಪ್ರಮುಖ ಲೇಖನಗಳಲ್ಲಿ ಕೆಲವು. ಇವು ನಮ್ಮ ಐತಿಹಾಸಿಕ ನೆಲೆಗಟ್ಟಿನಲ್ಲಿ ಈ ಅದ್ವಿತೀಯ ಪುರುಷರ ಆದರ್ಶಗಳು ಕಾಣ್ಕೆಗಳು ಹೇಗಿದ್ದವು ಎಂಬುದರ ನಿಡುನೋಟವನ್ನು ನೀಡುತ್ತವೆ.
ನಾರಾಯಣ ಯಾಜಿ ಹೊಸ ಕೃತಿ “ಧವಳ ಧಾರಿಣಿ”ಗೆ ಹರೀಶ್ ಕೇರ ಬರಹ