ಅಲ್ಪ ಕಾಲದ ಗೆಳೆಯರು: ಮಾರುತಿ ಗೋಪಿಕುಂಟೆ ಸರಣಿ
ಅವನು ಎರಡೂ ಬ್ಯಾಟುಗಳನ್ನು ನನಗೆ ಕೊಟ್ಟ. ಆ ಬ್ಯಾಟುಗಳೊಂದಿಗೆ ಮನೆಯಲ್ಲಿ ತಮ್ಮನೊಂದಿಗೆ ಆಡುತ್ತಿದ್ದೆ. ಹದಿನೈದು ದಿನವಾದರೂ ಶಾಲೆಗೆ ಆತ ಬರಲಿಲ್ಲ. ಹೊಸದುರ್ಗದ ಕಡೆ ಯಾವುದೊ ಊರಿಗೆ ಹೋದರು ಅಂತ ಗೊತ್ತಾಯ್ತು. ಅಲ್ಲಿನ ಶಾಲೆಗೆ ನೇರವಾಗಿ ವರ್ಗಾವಣೆ ಪತ್ರವನ್ನು ತರಿಸಿಕೊಂಡಿದ್ದರು. ಅಯ್ಯೋ ಆತನ ಪೂರ್ಣ ವಿಳಾಸವು ಇರಲಿಲ್ಲ. ಶಾಲೆಯಲ್ಲಿ ಕೇರಾಫ್ ವಿಳಾಸವನ್ನೆ ಕೊಟ್ಟಿದ್ದರು.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿಯ ಹದಿನೆಂಟನೆಯ ಕಂತು